ಸಿನಿವಾಣಿ

ರಾಕುಲ್ ಎಂಬ ಟ್ರಕ್ ಡ್ರೖೆವರ್

mcbhadrashetti

ರಾಕುಲ್ ಪ್ರೀತ್ ಸಿಂಗ್ ಇದುವರೆಗೂ ಅಭಿನಯಿಸಿರುವ ಚಿತ್ರಗಳಲ್ಲೆಲ್ಲ, ಸಾಫ್ಟ್ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಅದರಲ್ಲೂ ಸೈಕಲ್, ಸ್ಕೂಟಿ ಓಡಿಸುವ ಕಾಲೇಜ್ ಹುಡುಗಿಯಾಗಿ ಕಾಣಿಸಿಕೊಂಡಿದ್ದ ರಾಕುಲ್, ಈಗ ಹೊಸ ಚಿತ್ರವೊಂದರಲ್ಲಿ ಟ್ರಕ್ ಡ್ರೖೆವರ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಅರ್ಜುನ್ ಕಪೂರ್ ಜತೆಗೆ ರಾಕುಲ್ ಒಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕಳೆದ ವರ್ಷವೇ ಬಂದಿತ್ತು. ಲಾಕ್​ಡೌನ್ ಮುಗಿದ ತಕ್ಷಣ ಈ ಚಿತ್ರದ ಚಿತ್ರೀಕರಣ ಸಹ ಶುರುವಾಗಿತ್ತು. ಚಿತ್ರೀಕರಣ ಮುಕ್ತಾಯ ಹಂತಕ್ಕೆ ಬಂದಿರುವ ಈ ಚಿತ್ರಕ್ಕೆ ‘ಸರ್ದಾರ್ ಕಾ ಗ್ರಾ್ಯಂಡ್​ಸನ್’ ಎಂಬ ಹೆಸರಿಡಲಾಗಿದ್ದು, ಈ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್, ಟ್ರಕ್ ಡ್ರೖೆವರ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಕುಲ್​ಗೆ ಡ್ರೖೆವಿಂಗ್ ಹೊಸದಲ್ಲ. ಆದರೆ, ಟ್ರಕ್ ಓಡಿಸುವುದು ಹೊಸ ವಿಷಯವೇ. ಹಾಗಾಗಿ ಸ್ವಲ್ಪ ಟ್ರೖೆನಿಂಗ್ ಪಡೆದು ಅವರು ಡ್ರೖೆವಿಂಗ್ ಸೀಟ್​ನಲ್ಲಿ ಕುಳಿತಿದ್ದಾರೆ. ಹಾಗಾಗಿ ಸುಲಭವಾಯಿತಂತೆ. ಈ ಅನುಭವದ ಬಗ್ಗೆ ಮಾತನಾಡಿರುವ ಅವರು, ‘ಆರಂಭದಲ್ಲಿ ಸ್ವಲ್ಪ ಕಷ್ಟ ಆಯ್ತು. ಆ ನಂತರ ಎಲ್ಲರೂ ನನ್ನ ಡ್ರೖೆವಿಂಗ್ ಬಗ್ಗೆ ಮೆಚ್ಚುಗೆಯಿಂದ ಮಾತನಾಡಿದರು’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ರಾಕುಲ್. ‘ಸರ್ದಾರ್ ಕಾ ಗ್ರಾ್ಯಂಡ್​ಸನ್’ ಚಿತ್ರದಲ್ಲಿ ಅರ್ಜುನ್ ಕಪೂರ್ ಮತ್ತು ರಾಕುಲ್ ಜತೆಗೆ ನೀನಾ ಗುಪ್ತಾ, ಜಾನ್ ಅಬ್ರಹಾಂ, ಅದಿತಿ ರಾವ್ ಹೈದರಿ ಮುಂತಾದವರು ನಟಿಸಿದ್ದು, ಮೇ 18ರಂದು ಈ ಚಿತ್ರ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗುತ್ತಿದೆ. (-ಏಜೆನ್ಸೀಸ್).