ಸಿನಿವಾಣಿ

ಎದ್ದು ಕುಳಿತ ಮಟ್ಕಾ ಹುಡುಗಿ ; ಎರಡೂವರೆ ತಿಂಗಳ ರೆಸ್ಟ್​ ಬಳಿಕ ಮತ್ತೆ ಓಡಾಡುತ್ತಿರುವ ನಟಿ ನೋರಾ

"ರೋರ್​' ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ ನಟಿ ನೋರಾ ಹೆಚ್ಚು ಮಿಂಚಿದ್ದು ಸ್ಪೆಷಲ್​ ಸಾಂಗ್​ಗಳಲ್ಲಿ. "ದಿಲ್ಬರ್​', "ಓ ಸಾಕಿ ಸಾಕಿ', "ಕುಸು ಕುಸು', "ಮಣಿಕೆ' ಸೇರಿ ಹಲವು ಐಟಂ ಸಾಂಗ್​ಗಳಲ್ಲಿ ಕುಣಿದು ಕುಪ್ಪಳಿಸಿರುವ ಅವರು, ಕೆಲ ಮ್ಯೂಸಿಕ್​ ವಿಡಿಯೋ ಆಲ್ಬಂ ಹಾಡುಗಳು ಸೇರಿ ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಾರೆ. ಹೀಗೆ ಕಳೆದ ಒಂದು ದಶಕದಲ್ಲಿ ಡಾನ್ಸ್​ ಲೋಕದಲ್ಲಿ ತಮ್ಮದೇ ಹೆಸರು ಮಾಡಿರುವ ಅವರಿಗೆ ಈ ವರ್ಷ ಅದೃಷ್ಟ ಕೈಹಿಡಿದಿತ್ತು.

ಬ್ಯಾಕ್​ ಟು ಬ್ಯಾಕ್​ "ಕ್ರಾಕ್​' ಮತ್ತು "ಮಡ್​ಗಾಂವ್​ ಎಕ್ಸ್​ಪ್ರೆಸ್​' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ನೋರಾ, ಪ್ಯಾನ್​ ಇಂಡಿಯಾ ಮೂಡಿಬರುತ್ತಿರುವ ತೆಲುಗಿನ "ಮಟ್ಕಾ' ಚಿತ್ರದಲ್ಲಿ ವರುಣ್​ ತೇಜ್​, ಮೀನಾ ಚೌಧರಿ ಜತೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದರು. ಈಗಾಗಲೇ ತೆಲುಗು, ತಮಿಳು ಚಿತ್ರಗಳ ಐಟಂ ಸಾಂಗ್​ಗಳಲ್ಲಿ ಕುಣಿದಿದ್ದ ನೋರಾ, ಇದೇ ಮೊದಲ ಬಾರಿಗೆ ದಣದ ಚಿತ್ರವೊಂದರಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಲು ಆಯ್ಕೆಯಾಗಿದ್ದ ಕಾರಣ, "ಮಟ್ಕಾ' ಬಗ್ಗೆ ಎಲ್ಲಿಲ್ಲದ ನಿರೀೆ ಇಟ್ಟುಕೊಂಡಿದ್ದರು. ಆದರೆ, ಚಿತ್ರದ ಶೂಟಿಂಗ್​ ವೇಳೆ ಪೆಟ್ಟು ಮಾಡಿಕೊಂಡು ಅವರಿಗೆ ವೈದ್ಯರು ಎರಡು ತಿಂಗಳು ವಿಶ್ರಾಂತಿ ಪಡೆಯಲು ಸೂಚಿಸಿದ ಕಾರಣ ಸದ್ಯ ಅವರ ಭಾಗದ ಶೂಟಿಂಗ್​ ಮುಂದೂಡಲಾಗಿದೆ.

ವೀಲ್​ಚೇರ್​ನಲ್ಲಿ ನಂತರ ಕ್ರಚಸ್​ ಹಿಡಿದು ಪ್ರತಿದಿನ ಫಿಸಿಯೋಥೆರಪಿಗೆ ಬರುತ್ತಿದ್ದ ನೋರಾ ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದು, ಕೆಲವೇ ದಿನಗಳಲ್ಲಿ ಶೂಟಿಂಗ್​ಗೆ ಮರಳುವ ಉತ್ಸಾಹದಲ್ಲಿದ್ದಾರೆ. "ಮಟ್ಕಾ' ಜತೆ "ಡಾನ್ಸಿಂಗ್​ ಡ್ಯಾಡ್​' ಎಂಬ ಮತ್ತೊಂದು ಚಿತ್ರದಲ್ಲಿ ನೋರಾ ಕಾಣಿಸಿಕೊಳ್ಳಲಿದ್ದಾರೆ.