ಸಿನಿವಾಣಿ

PHOTOS: ನಟಿ ಮಿಶ್ತಿ ಮುಖರ್ಜಿ ಬೆಂಗಳೂರಿನಲ್ಲಿ ಸಾವು; ಕಿಟೋ ಡಯಟ್​ ಮುಳ್ಳಾಯಿತಾ?

ಬೆಂಗಳೂರು: ಹಲವು ಹಿಂದಿ ಹಾಗೂ ಬಂಗಾಳಿ ಸಿನಿಮಾಗಳಲ್ಲಿ, ವಿಡಿಯೋ ಮ್ಯೂಸಿಕ್​​​ನಲ್ಲಿ ಅಭಿನಯಿಸಿದ್ದ ನಟಿ ಮಿಶ್ತಿ ಮುಖರ್ಜಿ (27) ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದಾರೆ.

ಮೂಲತಃ ಪಶ್ಚಿಮ ಬಂಗಾಳದವರಾದ ಮಿಶ್ತಿ 2012ರಲ್ಲಿ ಲೈಫ್ ಕಿ ತೋಹ್ ಲಗ್​ ಗಯಿ ಎಂಬ ಹಿಂದಿ ಚಿತ್ರದ ಮೂಲಕ ಸಿನಿರಂಗಕ್ಕೆ ಪ್ರವೇಶಿಸಿದ್ದರು. ಸದ್ಯ ಕಿಟೋ ಡಯಟ್​​​ನಲ್ಲಿ ತೊಡಗಿಕೊಂಡಿದ್ದರು. ಇದೇ ಅವರ ಪ್ರಾಣಕ್ಕೆ ಮುಳುವಾಯಿತು ಎಂಬ ಮಾತೂ ಕೇಳಿಬಂದಿದೆ. ಇದನ್ನೂ ಓದಿ: VIDEO| ಮದ್ಯದ ನಶೆಯಲ್ಲಿ ಟಂಬಲ್​ ಡ್ರೈಯರ್ ಒಳಗಿಳಿದ ಯುವತಿಯ ಪಾಡು ಹೇಳತೀರದು..!

ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮಿಶ್ತಿ, ಅಕ್ಟೋಬರ್​ 2ರಂದು ರಾತ್ರಿ ಮೃತಪಟ್ಟಿದ್ದಾರೆ. ಸಾವಿಗೂ ಮುನ್ನ ಸಿಕ್ಕಾಪಟೆ ನೋವು ಅನುಭವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಿಶ್ತಿ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ ನಡೆದಿದೆ.

ಮಿಶ್ತಿ ಮುಖರ್ಜಿ ತಮ್ಮ ಅಭಿನಯದಿಂದಲೂ ಜನಮೆಚ್ಚುಗೆ ಗಳಿಸಿದ್ದರು. ಹಾಗೇ ವಿವಾದಗಳಿಂದಲೂ ಸುದ್ದಿಯಾಗಿದ್ದರು. 2014ರಲ್ಲಿ ವೇಶ್ಯಾವಾಟಿಕೆ ದಂಧೆ ಆರೋಪದಡಿ ತಂದೆ ಮತ್ತು ಸೋದರನೊಂದಿಗೆ ಬಂಧನಕ್ಕೊಳಗಾಗಿದ್ದರು. ಅದಾದ ನಂತರ ಸುಳ್ಳು ಆರೋಪದಡಿ ನಮ್ಮನ್ನು ಬಂಧಿಸಲಾಗಿತ್ತು ಎಂದು ಸಮರ್ಥನೆ ಕೊಟ್ಟಿದ್ದರು.