ಸಿನಿವಾಣಿ

ಹೋಮ್ ಐಸೋಲೆಷನ್​ನಲ್ಲಿ ಲೇಖಕಿಯಾದರಾ ಈ ಖ್ಯಾತ ನಟಿ? ಫೋಟೋ ವೈರಲ್...

ಎರಡು ದಿನಗಳ ಹಿಂದೆ ಸೌತ್ ನಟಿ ಖುಷ್ಬೂ ತಮ್ಮ ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅನುಯಾಯಿಗಳಿಗೆ ಅವರು ಕರೊನಾ ಪಾಸಿಟಿವ್ ಎಂದು ತಿಳಿಸಿದ್ದರು. ತಮ್ಮ ಫೋಟೋವೊಂದನ್ನು ಹಂಚಿಕೊಂಡು, 'ಕೊನೆಯ 2 ಅಲೆಗಳನ್ನು ತಪ್ಪಿಸಿಕೊಂಡು, ಈಗ ಕರೊನಾಗೆ ಸಿಕ್ಕಿಬಿದ್ದಿದ್ದೇನೆ. ಹಾಗಾಗಿ, ನಾನು ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ. ನೀವು ಕರೊನಾಗೆ ಪರೀಕ್ಷಿಸಿಕೊಂಡು ಹುಷಾರಾಗಿರಿ' ಎಂಬ ಕ್ಯಾಪ್ಷನ್ ಕೊಟ್ಟಿದ್ದರು. 
ಈಗ, ನಟಿ ತನ್ನ ಐಸೋಲೇಶನ್ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆಂದು ಹೇಳಿಕೊಂಡಿದ್ದಾರೆ. ಐಸೋಲೆಷನ್ ಸಮಯದಿಂದ ಎರಡು ಫೋಟೋಗಳನ್ಹು ಹಂಚಿಕೊಂಡ ನಟಿ, 'ಐಸೋಲೇಶನ್ ಸಮಯದಲ್ಲಿ ಬರೆಯುತ್ತಿದ್ದೇನೆ. ನನ್ನ ಆಲೋಚನೆಗಳನ್ನು ಒಂದು ಪುಸ್ತಕದಲ್ಲಿ ಸ್ಕ್ರಿಪ್ಟ್‌ಗಳನ್ನಾಗಿಸುತ್ತಿದ್ದೇನೆ. ನೀವು ನಿಮ್ಮ ಸಮಯವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಿ' ಎಂದು ತಿಳಿಸಿದ್ದಾರೆ. ಈ ಮೂಲಕ ಕರೊನಾದಿಂದ ಐಸೋಲೇಟ್ ಆಗಿರುವ ನಟಿ ತಾವು ಈಗ ಲೇಖಕಿಯಾಗಿದ್ದಾರೆಂದು ಅವರ ಅಭಿಮಾನಿಗಳಿಗೆ ತಿಳಿಸಿದ್ದಾರೆ. ನಟಿಯ ಈ ಹೊಸ ಪೋಸ್ಟ್​ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚಿಗೆ ವ್ಯಕ್ತವಾಗಿದೆ.