ಸಿನಿವಾಣಿ

ಈ ಫೋಟೋದಲ್ಲಿರುವ ಪುಟ್ಟ ಮಗು ಯಾರು ಗೊತ್ತಾ? ಸ್ಟಾರ್​ ಕ್ರಿಕೆಟರ್​ನ ಮುದ್ದಿನ ಮಡದಿ ಈಕೆ! Actress Childhood Photo

Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.

ಪ್ರಸ್ತುತ ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಆ ಫೋಟೋವನ್ನು ನೀವು ಮೇಲೆ ನೋಡಬಹುದು. ನೆಲದಲ್ಲಿ ತೆವಳಲು ಪ್ರಯತ್ನಿಸುತ್ತಿರುವ ಪುಟ್ಟ ಮಗು ಇಂದು ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗನ ಧರ್ಮಪತ್ನಿ. ಅಷ್ಟೇ ಅಲ್ಲ, ಒಂದು ಕಾಲದಲ್ಲಿ ಬಾಲಿವುಡ್​ ಚಿತ್ರರಂಗದಲ್ಲಿ ಭಾರಿ ಬೇಡಿಕೆಯ ನಟಿಯಾಗಿದ್ದರು. ಆಮೀರ್​ ಖಾನ್​ ಹಾಗೂ ಶಾರುಖ್​ ಖಾನ್ ಸೇರಿದಂತೆ ಸ್ಟಾರ್​ ನಾಯಕರ ಜೊತೆ ನಟಿಸಿದ್ದಾರೆ. ಇಷ್ಟೆಲ್ಲ ಸುಳಿವು ನೀಡಿದರೂ ಅವರು ಯಾರೆಂದು ಗೊತ್ತಾಗುತ್ತಿಲ್ಲವೇ? ಹಾಗಾದರೆ, ಮುಂದೆ ಓದಿ ಉತ್ತರ ಸಿಗಲಿದೆ.

ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ಅವರೇ ಅನುಷ್ಕಾ ಶರ್ಮಾ. ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ, ದಾಖಲೆಗಳ ಸರದಾರ ವಿರಾಟ್​ ಕೊಹ್ಲಿಯ ಮುದ್ದಿನ ಮಡದಿ.

ಅಂದಹಾಗೆ, ಅನುಷ್ಕಾ ಶರ್ಮಾ ಅವರು 1988ರ ಮೇ 1ರಂದು ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಜನಿಸಿದರು. ಆದರೆ, ಬೆಂಗಳೂರಿನಲ್ಲಿ ಬೆಳೆದರು. ತಂದೆ ಅಜಯ್ ಕುಮಾರ್ ಶರ್ಮಾ ಸೇನಾ ಅಧಿಕಾರಿ ಮತ್ತು ತಾಯಿ ಅಶಿಮಾ ಶರ್ಮಾ ಗೃಹಿಣಿ. ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ ಅನುಷ್ಕಾ, 2007ರಲ್ಲಿ ವೆಂಡೆಲ್ ರೊಡ್ರಿಕ್ಸ್‌ಗೆ ಮಾಡೆಲ್ ಆಗಿ ಕೆಲಸ ಮಾಡಿ, ಆಮೇಲೆ ಮುಂಬೈಗೆ ತೆರಳಿ ಚಲನಚಿತ್ರ ರಂಗಕ್ಕೆ ಕಾಲಿಟ್ಟರು. ಅವರ ಮೊದಲ ಸಿನಿಮಾ ರಬ್ ನೆ ಬನಾ ದಿ ಜೋಡಿ. ಇದು 2008ರಲ್ಲಿ ತೆರೆಕಂಡಿತು. ಮೊದಲ ಸಿನಿಮಾದಲ್ಲೇ ಶಾರುಖ್​ ಖಾನ್​ರೊಂದಿಗೆ ನಟಿಸುವ ಮೂಲಕ ತಕ್ಷಣವೇ ಜನಪ್ರಿಯತೆ ಗಳಿಸಿದರು.

ಅನೇಕ ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ, ಬ್ಯಾಂಡ್ ಬಾಜಾ ಬಾರಾತ್' (2010) ರಲ್ಲಿ ಅವರ ಪಾತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದರು. ಇದು ಅವರ ಕೆರಿಯರ್‌ನಲ್ಲಿ ಮಹತ್ವದ ಸಿನಿಮಾ ಆಯಿತು. 'ಪಿಕೆ' (2014), 'ಜೀರೋ' (2018), 'ಸುಲ್ತಾನ್' (2016) ಮತ್ತು 'ಜನ್ಹ್ವಿ' (2018) ಇತ್ಯಾದಿ ಚಿತ್ರಗಳಲ್ಲಿ ಅವರ ನಟನೆಯು ವಿಮರ್ಶಾತ್ಮಕ ಮತ್ತು ಕಮರ್ಷಿಯಲ್​ ಯಶಸ್ಸನ್ನು ಕಂಡಿತು. ಅವರು ನಿರ್ಮಾಪಕಿ ಕೂಡ ಹೌದು. ಕ್ಲೀನ್ ಸ್ಲೇಟ್ ಫಿಲ್ಮ್ಜ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ 'ಪಹುನ್' (2017) ಮತ್ತು 'ಫಿಲ್ಮ್ ಇಸ್ಟಂಬುಲ್' (2019) ಚಿತ್ರಗಳನ್ನು ನಿರ್ಮಿಸಿದ್ದಾರೆ.

ವೈಯಕ್ತಿಕ ಜೀವನದ ವಿಚಾರಕ್ಕೆ ಬಂದರೆ, ಅನುಷ್ಕಾ ಅವರು ಟೀಮ್​ ಇಂಡಿಯಾ ಸ್ಟಾರ್​ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು 2017ರಲ್ಲಿ ವಿವಾಹವಾದರು. ದಂಪತಿಗೆ 2020ರಲ್ಲಿ ಮಗಳು ವಾಮಿಕಾ ಜನಿಸಿದಳು. ಅಲ್ಲದೆ, ಕಳೆದ ವರ್ಷದ ಅಕಾಯ್​ ಹೆಸರಿನ ಗಂಡು ಮಗು ಜನಿಸಿದೆ. (ಏಜೆನ್ಸೀಸ್​)