ಸಿನಿವಾಣಿ

ಭಾಗ್ಯಲಕ್ಷ್ಮೀ ಬೃಂದಾ ; ಐದು ಚಿತ್ರಗಳಲ್ಲಿ ಬಿಜಿಯಾಗಿರುವ "ಪ್ರೇಮಂ ಪೂಜ್ಯಂ' ಹುಡುಗಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಪ್ರೇಮಂ ಪೂಜ್ಯಂ' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದ ಬೃಂದಾ ಆಚಾರ್ಯ, "ಜೂಲಿಯೆಟ್​ 2' ಚಿತ್ರದಲ್ಲಿ ಆ್ಯಕ್ಷನ್​ ಅವತಾರದಲ್ಲಿ ಮಿಂಚಿದ್ದರು. ಬಳಿಕ ಶಶಾಂಕ್​ ನಿರ್ದೇಶನದ "ಕೌಸಲ್ಯಾ ಸುಪ್ರಜಾ ರಾಮ' ಚಿತ್ರದಲ್ಲಿ "ಡಾರ್ಲಿಂಗ್​' ಕೃಷ್ಣಗೆ ನಾಯಕಿಯಾಗಿ ನಟಿಸಿದ್ದರು. ಆ ಸಿನಿಮಾ ಬಾಕ್ಸಾಫಿಸಿನಲ್ಲಿ ಗೆದ್ದಿದ್ದು, ಜತೆಗೆ ಬೃಂದಾ ನಟಿಸಿದ್ದ ಶಿವಾನಿ ಪಾತ್ರಕ್ಕೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಅದರ ಬೆನ್ನಲ್ಲೇ ಬೃಂದಾ ಬ್ಯಾಕ್​ ಟು ಬ್ಯಾಕ್​ ಐದು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ಅಕೌಂಟಂಟ್​ ಆದ ಮಿಸ್​ ಆಚಾರ್ಯ
ಅಭಿಷೇಕ್​ ಚೊಚ್ಚಲ ಬಾರಿಗೆ ಆ್ಯಕ್ಷನ್​&ಕಟ್​ ಹೇಳುತ್ತಿರುವ, ದೀತ್​ ಶೆಟ್ಟಿ ನಾಯಕನಾಗಿರುವ "ಬ್ಯಾಂಕ್​ ಆಫ್​​ ಭಾಗ್ಯಲಕ್ಷ್ಮೀ' ಚಿತ್ರದಲ್ಲಿ ಬೃಂದಾ ಆಚಾರ್ಯ ಅಕೌಂಟಂಟ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಬಗ್ಗೆ ಅವರು, "ಸ್ವಲ್ಪ ಸೀರಿಯಸ್​ ಪಾತ್ರ. ಸಿನಿಮಾ ಪೂರ್ತಿ ಒಂದೇ ಕಾಸ್ಟ್ಯೂಮ್​ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇದುವರೆಗೂ ಈ ರೀತಿಯ ಕಥೆ ಕನ್ನಡದಲ್ಲಿ ಬಂದಿದೆ ಅಂತ ನನಗಂತೂ ಅನ್ನಿಸಲ್ಲ. ಹಲವು ಸಿನಿಮಾಗಳ ವಿಎ್​ಎಕ್ಸ್​ ಕೆಲಸ ಮಾಡಿರುವ ಪಿನಾಕಾ ಸ್ಟುಡಿಯೋ ಮಾಲೀಕ ಅಭಿಷೇಕ್​ ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ. ಬರೀ ರಾಬರಿ ಮಾತ್ರವಲ್ಲ ಒಂದು ಉತ್ತಮ ಸಂದೇಶ ಕೂಡ ಚಿತ್ರದಲ್ಲಿದೆ' ಎಂದು ಹೇಳಿಕೊಳ್ಳುತ್ತಾರೆ.

ಎಕ್ಸ್​ ಜತೆ ವೈ
"ರಾಮಾ ರಾಮಾ ರೇ', "ಒಂದಲ್ಲಾ ಎರಡಲ್ಲಾ' ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್​ ನಿರ್ದೇಶಿಸುತ್ತಿರುವ, ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಸಿನಿಮಾ "ಎಕ್ಸ್​ ಆ್ಯಂಡ್​ ವೈ'ನಲ್ಲೂ ಬೃಂದಾ ನಾಯಕಿಯಾಗಿದ್ದಾರೆ. "ನನಗೆ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸಲು ಇಷ್ಟ. "ಎಕ್ಸ್​ ಆ್ಯಂಡ್​ ವೈ'ನಲ್ಲೂ ಡಿಫರೆಂಟ್​ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇದೊಂದು ಸೈಂಟಿಫಿಕ್​ ಫಿಕ್ಷನಲ್​ ಸ್ಟೋರಿ. ಅದಕ್ಕೆ ಕಮರ್ಷಿಯಲ್​ ಸ್ಪರ್ಶ ನೀಡಲಾಗಿದೆ. ಹಿಂದಿ ಸಿನಿಮಾ "ಜಿಂದಗಿ ನಾ ಮಿಲೇಗಿ ದೊಬಾರಾ' ಫೀಲ್​ ಕೊಡುವ ಸಿನಿಮಾ' ಎನ್ನುತ್ತಾರೆ ಬೃಂದಾ ಆಚಾರ್ಯ.

ಹೊಸ ಚಿತ್ರಗಳ ಲೈನಪ್​
"ಬ್ಯಾಂಕ್​ ಆಫ್​ ಭಾಗ್ಯಲಕ್ಷ್ಮೀ', "ಎಕ್ಸ್​ ಆ್ಯಂಡ್​ ವೈ' ಜತೆ ಬೃಂದಾ ನಿರೂಪ್​ ಭಂಡಾರಿ ಮತ್ತು ಸಾಯಿ ಕುಮಾರ್​ ಮುಖ್ಯ ಭೂಮಿಕೆಯಲ್ಲಿರುವ "ಸತ್ಯ ಸನ್​ ಆ್​ ಹರಿಶ್ಚಂದ್ರ', ದುನಿಯಾ ವಿಜಯ್​ ಮತ್ತು ಶ್ರೇಯಸ್​ ಮಂಜು ನಟಿಸುತ್ತಿರುವ "ಒಂದ್​ ಸಲ ಮೀಟ್​ ಮಾಡಣ' ಹಾಗೂ ಇನ್ನೂ ಹೆಸರಿಡದ ಮತ್ತೊಂದು ಹೊಸ ಸಿನಿಮಾದಲ್ಲೂ ಬಿಜಿಯಿದ್ದಾರೆ. "ಈ ಐದು ಚಿತ್ರಗಳೂ ಜನವರಿಯಲ್ಲೇ ಪ್ರಾರಂಭವಾದವು. "ಬ್ಯಾಂಕ್​ ಆಫ್​​ ಭಾಗ್ಯಲಕ್ಷ್ಮೀ' ಮತ್ತು "ಎಕ್ಸ್​ ಆ್ಯಂಡ್​ ವೈ' ಇದೇ ವರ್ಷ ತೆರೆಗೆ ಬರುವ ನಿರೀೆಯಿದೆ. ಜತೆಗೆ ಇನ್ನೂ ಹೆಸರಿಡದ ಹೊಸ ಸಿನಿಮಾದ ಶೂಟಿಂಗ್​ ಈಗಾಗಲೇ ಶೇಕಡಾ 85ರಷ್ಟು ಪೂರ್ಣಗೊಂಡಿದೆ. ಜತೆಗೆ ಕಳೆದ ಹತ್ತು ದಿನಗಳಿಂದ ಬ್ರೇಕ್​ನಲ್ಲಿದ್ದು, ಪ್ರತಿದಿನ ಎರಡು, ಮೂರು ಕಥೆಗಳನ್ನು ಕೇಳುತ್ತಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.