ಸಿನಿವಾಣಿ

ಲವ್​ ಸೆಕ್ಸ್ ಧೋಖಾ, ಡರ್ಟಿ ಪಿಕ್ಚರ್ ನಟಿ ಆರ್ಯಾ ಬ್ಯಾನರ್ಜಿ ಶವವಾಗಿ ಪತ್ತೆ

ಕೋಲ್ಕತ: ವಿದ್ಯಾ ಬಾಲನ್ ಜತೆಗೆ ಡರ್ಟಿ ಪಿಕ್ಚರ್​ನಲ್ಲಿ ಕಾಣಿಸಿಕೊಂಡಿದ್ದ ನಟಿ ಆರ್ಯಾ ಬ್ಯಾನರ್ಜಿ ಅವರ ಅಸಹಜ ರೀತಿಯಲ್ಲಿ ಮೃತಪಟ್ಟಿದ್ದಾರೆ. ಆರ್ಯಾ ಮೃತದೇಹ ದಕ್ಷಿಣ ಕೋಲ್ಕತದ ಅವರ ನಿವಾಸದಲ್ಲೆ ಶುಕ್ರವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಬಾಗಿಲನ್ನು ಆರ್ಯಾ ಶುಕ್ರವಾರ ಬೆಳಗ್ಗೆ ತೆರೆಯದೇ ಇದ್ದುದನ್ನು ಕಂಡ ಮನೆಗೆಲಸದ ಮಹಿಳೆ ನೆರೆಮನೆಯವರ ಬಳಿ ಹೇಳಿದಾಗ, ಸಂದೇಹಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪಾರ್ಟ್​ಮೆಂಟ್​ನ ಮೂರನೇ ಮಹಡಿಯಲ್ಲಿರುವ ಅವರ ಫ್ಲ್ಯಾಟ್​ನ ಬಾಗಿಲು ಮುರಿದು ಒಳ ಪ್ರವೇಶಿಸಿದ ಪೊಲೀಸರಿಗೆ ಆರ್ಯಾ ಹೆಣವಾಗಿ ಬಿದ್ದಿರುವುದು ಕಂಡುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಪ್ರಸಿದ್ಧ ಸಿತಾರ್ ವಾದಕ ದಿವಂಗತ ಪಂಡಿತ್ ನಿಖಿಲ್ ಬಂಡೋಪಾಧ್ಯಾಯರ ಪುತ್ರಿ ಆರ್ಯಾ ಬ್ಯಾನರ್ಜಿ. ವಯಸ್ಸು 33. ಒಂಟಿಯಾಗಿ ಇದ್ದರು. ಅವರು ಮುಂಬೈನಲ್ಲಿ ಕೆಲ ಕಾಲ ಮಾಡೆಲಿಂಗ್ ಮಾಡಿದ್ದರು. 2010ರಲ್ಲಿ ಅವರುಯ ಎಲ್​​ಎಸ್​ಡಿ- ಲವ್ ಸೆಕ್ಸ್ ಧೋಖಾ, 2011ರಲ್ಲಿ ದ ಡರ್ಟಿ ಪಿಕ್ಚರ್ ನಲ್ಲಿ ಅಭಿನಯಿಸಿ ಗಮನಸೆಳೆದಿದ್ದರು. ಇದಲ್ಲದೆ ಹಲವು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..