ಸಿನಿವಾಣಿ

ಹಳೇ ಲಯಕ್ಕೆ ಅನುಷ್ಕಾ ಶೆಟ್ಟಿ; ಕೌಟುಂಬಿಕ ಸಿನಿಮಾದಲ್ಲಿ ನಟನೆ

Webdesk - Ravikanth

ಕಳೆದ ಕೆಲ ವರ್ಷಗಳಿಂದ ಹೊಸ ಹೊಸ ಪಾತ್ರ ಮತ್ತು ವಿಭಿನ್ನ ಶೈಲಿಯ ಸಿನಿಮಾ ಮೂಲಕ ಪ್ರೇಕ್ಷಕರೆದುರು ಬಂದಿದ್ದ ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ, ಇದೀಗ ಮತ್ತೆ ಹಳೇ ಲಯಕ್ಕೆ ಮರಳುತ್ತಿದ್ದಾರೆ. ಅಂದರೆ, ಪಕ್ಕಾ ಕೌಟುಂಬಿಕ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಪ್ಲಾನ್ ಹಾಕಿದ್ದಾರೆ. ಅದರಂತೆ ಈಗಾಗಲೇ ಒಂದು ಕಥೆಯನ್ನೂ ಅವರು ಆಯ್ದುಕೊಂಡಿದ್ದು, ಇನ್ನೇನು ಶೀಘ್ರದಲ್ಲಿ ಆ ಸಿನಿಮಾ ಬಗ್ಗೆ ಹೇಳಿಕೊಳ್ಳಲಿದ್ದಾರೆ.

ಅನುಷ್ಕಾ ಅವರ ಇತ್ತೀಚಿನ ಕೆಲ ವರ್ಷಗಳ ಸಿನಿಮಾ ಜರ್ನಿಯನ್ನು ಅವಲೋಕಿಸಿದರೆ, ‘ಭಾಗಮತಿ’, ‘ನಿಷ್ಯಬ್ದಂ’ ಹೀಗೆ ಫ್ಯಾಂಟಸಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾಗಳಲ್ಲಿಯೇ ಅವರು ಕಾಣಿಸಿಕೊಂಡಿದ್ದಾರೆ. ಆದರೆ, ಫ್ಯಾಮಿಲಿ ಎಂಟರ್​ಟೈನರ್ ಥರದ ಸಿನಿಮಾ ಮಾಡಿ ತುಂಬ ವರ್ಷಗಳೇ ಕಳೆದಿವೆ. ಹಾಗಾಗಿ ಇದೀಗ ಆ ಕಡೆ ಹೊರಳಿದ್ದಾರೆ. ಈ ಹಿಂದೆ ‘ರಾ ರಾ ಕೃಷ್ಣಯ್ಯ’ ಸಿನಿಮಾ ನಿರ್ದೇಶನ ಮಾಡಿದ್ದ ಪಿ. ಮಹೇಶ್ ಹೊಸ ಕಥೆ ಸಿದ್ಧಪಡಿಸಿದ್ದು, ಆ ಚಿತ್ರದಲ್ಲಿ ಅನುಷ್ಕಾ ನಟಿಸುವುದು ಪಕ್ಕಾ ಆಗಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್​ನಲ್ಲಿ ಈ ಸಿನಿಮಾ ನಿರ್ವಣವಾಗಲಿದೆ. ಶೀರ್ಷಿಕೆ ಮತ್ತು ಇನ್ನುಳಿದ ತಾರಾಗಣದ ಬಗ್ಗೆ ಶೀಘ್ರದಲ್ಲಿ ಮಾಹಿತಿ ನೀಡಲಿದೆಯಂತೆ ತಂಡ. -ಏಜೆನ್ಸೀಸ್