ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಶಭಾಷ್ ಬಡ್ಡಿಮಗ್ನೆ' ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಂಡ್ಯದ ಹುಡುಗಿ ಆದ್ಯಪ್ರಿಯ. ಸದ್ಯ ಅವರು ಬ್ಯಾಕ್ ಟು ಬ್ಯಾಕ್ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. "ನಾನು ಬಾಲ್ಯದಿಂದಲೂ ಸಾಂಸತಿಕ ಚಟುವಟಿಕೆ ಮತ್ತು ಕ್ರೀಡೆಗಳಲ್ಲಿ ಸಕ್ರಿಯಳಾಗಿದ್ದೆ. ಸಣ್ಣ ವಯಸ್ಸಿನಿಂದಲೂ ಸಿನಿಮಾಗಳಲ್ಲಿ ನಟಿಸುವ ಆಸೆ ಇತ್ತು. ಒಮ್ಮೆ ಫೇಸ್ಬುಕ್ನಲ್ಲಿ ಕಿರುಚಿತ್ರಕ್ಕಾಗಿ ನಟಿಯರ ಆಯ್ಕೆಯ ಬಗ್ಗೆ ಪೋಸ್ಟ್ ನೋಡಿದೆ. ಅದಕ್ಕೆ ನನ್ನ ಫೋಟೋ ಕಳುಹಿಸಿದೆ. ತಂಡದವರು ಫೋಟೋಶೂಟ್ ಮಾಡಿಸಲು ತಿಳಿಸಿದರು. ಅದರಂತೆ ಫೋಟೋಶೂಟ್ ಮಾಡಿಸಿದೆ. ಕೆಲ ಫೋಟೋಗಳನ್ನು ನೋಡಿದ ಸಿನಿಮಾತಂಡದವರು "ಶಭಾಷ್ ಬಡ್ಡಿಮಗ್ನೆ' ಚಿತ್ರದಲ್ಲಿ ಅವಕಾಶ ನೀಡಿದರು. ಹೀಗೆ ನನ್ನ ಸಿನಿಮಾಜರ್ನಿ ಆರಂಭವಾಯಿತು' ಎಂದು ಹೇಳಿಕೊಳ್ಳುತ್ತಾರೆ.
"ಶಭಾಷ್ ಬಡ್ಡಿಮಗ್ನೆ' ಬೆನ್ನಲ್ಲೇ ಆದ್ಯಪ್ರಿಯ ನಟಿಸಿರುವ ನಾಲ್ಕು ಚಿತ್ರಗಳು ಸದ್ಯ ರಿಲೀಸ್ಗೆ ರೆಡಿಯಿವೆ. ಯಶೋಧರ ನಿರ್ದೇಶನದಲ್ಲಿ, ಅಭಿಮನ್ಯು ಜತೆ ನಟಿಸಿರುವ "ಹಚ್ಚೆ', ವಿನೋದ್ ಪ್ರಭಾಕರ್, ಲೂಸ್ ಮಾದ ಯೋಗಿ ನಟಿಸುತ್ತಿರುವ "ಲಂಕಾಸುರ', ಜತೆಗೆ ಹೊಸಬರ "ಗುಡ್ ಗುಡರ್ ಗುಡೆಸ್ಟ್' ಮತ್ತು "ಬಂಬೂ ಸವಾರಿ' ಸಿನಿಮಾಗಳು ರಿಲೀಸ್ ಆಗಲಬೇಕಿದೆ. "ನಾನು ಮೊದಲು ನಟಿಸಿದ್ದು "ಲಂಕಾಸುರ' ಚಿತ್ರದಲ್ಲಿ. ಲೂಸ್ ಮಾದ ಯೋಗಿಗೆ ಜೋಡಿಯಾಗಿ ನಟಿಸಿದ್ದೇನೆ. ಆದರೆ, ರಿಲೀಸ್ ಆದ ಮೊದಲ ಸಿನಿಮಾ "ಶಭಾಷ್ ಬಡ್ಡಿಮಗ್ನೆ'. "ಲಂಕಾಸುರ' ಬಳಿಕ ಹಲವು ಆಫರ್ಸ್ ಬಂದವು. ಆದರೆ, ನಾನು ನಾಲ್ಕು ಚಿತ್ರಗಳನ್ನಷ್ಟೇ ಆಯ್ಕೆ ಮಾಡಿಕೊಂಡೆ. ಈ ಚಿತ್ರಗಳು ಬಿಡುಗಡೆಯಾದ ಬಳಿಕ ನನ್ನ ನಟನೆ ನೋಡಿ ಇನ್ನೂ ಉತ್ತಮ ಆರ್ಸ್ ಬರುವ ನಿರೀೆಯಲ್ಲಿದ್ದೇನೆ. ಹೀಗಾಗಿ ಕೆಲ ಚಿತ್ರಗಳ ಮಾತುಕತೆ ನಡೆಯುತ್ತಿದ್ದರೂ ಒಪ್ಪಿಕೊಂಡಿಲ್ಲ' ಎನ್ನುತ್ತಾರೆ ಆದ್ಯ.
ಕನ್ನಡದ ಜತೆಗೆ ಈಗಾಗಲೇ ತಮಿಳಿನಲ್ಲೂ "ಧ್ವನಿ" ಎಂಬ ಚಿತ್ರದಲ್ಲಿ ಆದ್ಯಪ್ರಿಯ ನಟಿಸಿದ್ದು, ತಮಿಳು ಮನತ್ತು ತೆಲುಗಿನಲ್ಲೂ ಹೊಸ ಕಥೆಗಳನ್ನು ಕೇಳುತ್ತಿದ್ದಾರಂತೆ. ಕನ್ನಡ ವಿಷಯದಲ್ಲಿ ಬಿಎ ಪೂರ್ಣಗೊಳಿಸಿರುವ ಅವರು, ಕೇವಲ ಸಿನಿಮಾಗಳ ಮೇಲೆ ಅವಲಂಬಿಸದೇ, ಸಲೂನ್ ಮತ್ತು ಸ್ಕಿನ್ ಕೇರ್ ಹಾಗೂ ಡಿಸೈನರ್ ವೇರ್ ಶಾಪ್ಗಳನ್ನು ನಡೆಸುತ್ತಿದ್ದಾರೆ.