ಅದಾ ಶರ್ಮಾ 
ಸಿನಿವಾಣಿ

Adah Sharma - ರಾಮರಸದಲ್ಲಿ ಅದಾ ಶರ್ಮಾ : ದಶಕದ ಬಳಿಕ ಮತ್ತೆ ಕನ್ನಡಕ್ಕೆ ಬಂದ ಬಹುಭಾಷಾ ನಟಿ

ಗಿರಿರಾಜ್​ ಬಿ.ಎಂ. ನಿರ್ದೇಶಿಸುತ್ತಿರುವ ಮಿಸ್ಟಿಕಲ್​ ಥ್ರಿಲ್ಲರ್​ ಡ್ರಾಮಾ "ರಾಮರಸ'. ಬಿಗ್​ಬಾಸ್​ ಕನ್ನಡ ಸೀಸನ್​ 10ರ ವಿನ್ನರ್​ ಕಾರ್ತಿಕ್​ ಮಹೇಶ್​, ಪ್ರಜ್ವಲ್​ ದೇವರಾಜ್​, ಶರಣ್​, ಹೆಬಾ ಪಟೇಲ್​ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಇದೀಗ ಚಿತ್ರದ ತಾರಾಗಣ ಮತ್ತಷ್ಟು ಹಿಗ್ಗಿದೆ. ಕನ್ನಡದ "ರಣವಿಕ್ರಮ' ಚಿತ್ರದಲ್ಲಿ ಪುನೀತ್​ ರಾಜಕುಮಾರ್​ಗೆ ನಾಯಕಿಯಾಗಿ ಮಿಂಚಿದ್ದ ಅದಾ ಶರ್ಮಾ ಇದೀಗ "ರಾಮರಸ' ಮೂಲಕ 11 ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ವಾಪಸ್ಸಾಗಿದ್ದಾರೆ.

ಬೆಂಗಳೂರು: ಗಿರಿರಾಜ್​ ಬಿ.ಎಂ. ನಿರ್ದೇಶಿಸುತ್ತಿರುವ ಮಿಸ್ಟಿಕಲ್​ ಥ್ರಿಲ್ಲರ್​ ಡ್ರಾಮಾ "ರಾಮರಸ'. ಬಿಗ್​ಬಾಸ್​ ಕನ್ನಡ ಸೀಸನ್​ 10ರ ವಿನ್ನರ್​ ಕಾರ್ತಿಕ್​ ಮಹೇಶ್​, ಪ್ರಜ್ವಲ್​ ದೇವರಾಜ್​, ಶರಣ್​, ಹೆಬಾ ಪಟೇಲ್​ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಇದೀಗ ಚಿತ್ರದ ತಾರಾಗಣ ಮತ್ತಷ್ಟು ಹಿಗ್ಗಿದೆ. ಕನ್ನಡದ "ರಣವಿಕ್ರಮ' ಚಿತ್ರದಲ್ಲಿ ಪುನೀತ್​ ರಾಜಕುಮಾರ್​ಗೆ ನಾಯಕಿಯಾಗಿ ಮಿಂಚಿದ್ದ ಅದಾ ಶರ್ಮಾ ಇದೀಗ "ರಾಮರಸ' ಮೂಲಕ 11 ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ವಾಪಸ್ಸಾಗಿದ್ದಾರೆ. ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ "ರಾಮರಸ' ಚಿತ್ರದಲ್ಲಿ ದೇವಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವ ಗುರು, ""ರಣವಿಕ್ರಮ' ಬಳಿಕ ಅದಾ ಕನ್ನಡದಲ್ಲಿ ನಟಿಸಿರಲಿಲ್ಲ. ಹಿಂದಿಯ "1920', "ಕಮಾಂಡೋ' ಸರಣಿ, "ದ ಕೇರಳ ಸ್ಟೋರಿ', "ಬಸ್ತರ್​: ದ ನಕ್ಸಲ್​ ಸ್ಟೋರಿ', ತೆಲುಗಿನ "ಸನ್​ ಆ್​ ಸತ್ಯಮೂರ್ತಿ' ಬಹುಭಾಷೆಗಳಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ, ವೆಬ್​ಸರಣಿಗಳು, ಮ್ಯೂಸಿಕ್​ ವಿಡಿಯೋಗಳಲ್ಲಿ "ದ ಕೇರಳ ಸ್ಟೋರಿ' ಬಳಿಕ ಅವರು ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ. ಸಮರ ಕೆಲ ಕಲಿತಿದ್ದಾರೆ. ಅವರು ಈ ಪಾತ್ರಕ್ಕೆ ಹೊಂದುತ್ತಾರೆ ಅಂತನ್ನಿಸಿ, ಸಂಪರ್ಕಿಸಿದೆವು. ಅವರೂ ಖುಷಿಯಿಂದ ಒಪ್ಪಿಕೊಂಡರು. ಅದಾ ಇಲ್ಲಿ ದೇವಿಯ ಪಾತ್ರದಲ್ಲಿ ನಟಿಸಿದ್ದು, 13 ದಿನಗಳ ಕಾಲ ಅವರ ಭಾಗದ ಚಿತ್ರೀಕರಣ ನಡೆಸಿದೆವು. ಸಿನಿಮಾಗೆ ಟರ್ನಿಂಗ್​ ಪಾಯಿಂಟ್​ ನೀಡುವ ಮುಖ್ಯ ಪಾತ್ರವದು. ಅವರು ಬರುವವರೆಗೂ ಕಥೆ ಒಂದು ರೀತಿಯಿದ್ದರೆ, ಅವರು ಬಂದ ಬಳಿಕ ಹೊಸ ರೂಪ ಪಡೆಯುತ್ತದೆ. ಹೀಗಾಗಿ ಅವರ ಪಾತ್ರದ ಬಗ್ಗೆ ಹೆಚ್ಚು ಈಗಲೇ ಹೇಳಲಾಗುವುದಿಲ್ಲ. ಈಗಾಗಲೇ ಶೂಟಿಂಗ್​ ಪೂರ್ಣಗೊಂಡಿದೆ' ಎಂದು ಹೇಳಿಕೊಳ್ಳುತ್ತಾರೆ. ಇದೇ ನವೆಂಬರ್​ನಲ್ಲಿ "ರಾಮರಸ' ರಿಲೀಸ್​ ಮಾಡುವ ಪ್ಲಾ$್ಯನ್​ ಚಿತ್ರತಂಡದ್ದು. ಚಿತ್ರಕ್ಕೆ ಕೃಷ್ಣಕುಮಾರ್​ ಛಾಯಾಗ್ರಹಣ, ಬಿ.ಜೆ. ಭರತ್​ ಸಂಗೀತ, ಅರ್ಜುನ್​ ಕಿಟ್ಟು ಸಂಕಲನವಿರಲಿದೆ.

ರಾಮರಸ ಚಿತ್ರದಲ್ಲಿ ದೇವಿಯಾಗಿ ಅದಾ ಶರ್ಮಾ
ಕಾರ್ತಿಕ್​ ಮಹೇಶ್​, ಪ್ರಜ್ವಲ್​ ದೇವರಾಜ್​, ಶರಣ್​, ಹೆಬಾ ಪಟೇಲ್​ ಜತೆಗೆ ಇದೀಗ ಅದಾ ಶರ್ಮಾ ಪಾತ್ರ ಪರಿಚಯಿಸಿದ್ದೇವೆ. ಅವರಲ್ಲದೇ ಇನ್ನೂ ಹಲವು ಪ್ರಮುಖ ಪಾತ್ರಗಳು, ಯಾರೂ ಊಹಿಸದ ಸ್ಟಾರ್​ ನಟರೂ ಇದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ಪರಿಚಯಿಸಲಿದ್ದೇವೆ. ಸದ್ಯ ಸಂಕಲನ, ವಿಎಫ್​ಎಕ್ಸ್​​ ಮತ್ತು ಸೌಂಡ್​ ಡಿಸೈನಿಂಗ್​ ಕೆಲಸಗಳು ನಡೆಯುತ್ತಿವೆ. ಕೆಲವೇ ದಿನಗಳಲ್ಲಿ ಟೀಸರ್​ ಬಿಡುಗಡೆ ಮಾಡಲಿದ್ದೇವೆ.
-ಗುರು ದೇಶಪಾಂಡೆ, ನಿರ್ಮಾಪಕ