ಸಿನಿವಾಣಿ

ಹಿರಿಯ ಕಲಾವಿದರ ಮನೆಗಳಿಗೆ ಸದ್ಯದಲ್ಲೇ ರೇಷನ್ ಕಿಟ್: ಉಪೇಂದ್ರ

ಬೆಂಗಳೂರು: ಕನ್ನಡ ಚಲನಚಿತ್ರ ಕಾರ್ವಿುಕರ ಮತ್ತು ತಂತ್ರಜ್ಞರ ಒಕ್ಕೂಟದ ಸದಸ್ಯರಿಗೆ ಇತ್ತೀಚೆಗಷ್ಟೇ ನಟ-ನಿರ್ದೇಶಕ ಉಪೇಂದ್ರ ಅವರು ರೇಷನ್ ಕಿಟ್​ಗಳನ್ನು ವಿತರಿಸಿದ್ದರು.

ಈಗ ಅವರು ಕನ್ನಡದ ಹಿರಿಯ ನಟ-ನಟಿಯರ ಮನೆಗಳಿಗೆ ರೇಷನ್ ಕಿಟ್​ಗಳನ್ನು ತಲುಪಿಸಿದ್ದಾರೆ. ಉಮೇಶ್, ಬೆಂಗಳೂರು ನಾಗೇಶ್, ಕಾಮಿನಿಧರನ್, ಶ್ರೀಲಲಿತಾ, ಮೋಹನ್ ಜನೇಜ, ಎ.ಟಿ. ರಘು ಸೇರಿದಂತೆ ಹಲವು ಕಲಾವಿದರು ಮತ್ತು ತಂತ್ರಜ್ಞರಿಗೆ ಕಿಟ್ ತಲುಪಿಸಲಾಗಿದ್ದು, ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಇನ್ನಷ್ಟು ಹಿರಿಯರ ಮನೆಗಳಿಗೆ ಸದ್ಯದಲ್ಲೇ ತಲುಪಿಸಲಾಗುತ್ತದೆ.