Ranveer Singh ಚಿತ್ರ Instagram 
ಸಿನಿವಾಣಿ

ಬಾಲಿವುಡ್ ಹಿಸ್ಟರಿಯಲ್ಲೇ ಬಿಗ್ ಡೀಲ್! 'ಧುರಂಧರ್' ಫ್ರಾಂಚೈಸಿಯಿಂದ ನಟನಿಗೆ ಸಿಕ್ಕಿತೇ 325 ಕೋಟಿಗೂ ಅಧಿಕ ಲಾಭಾಂಶ? Ranveer Singh

ಪ್ರಮುಖ ಮುಖ್ಯಾಂಶಗಳು

  • ಸಿನಿಪ್ರೇಮಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಆಕ್ಷನ್ ಕ್ರಾಂತಿ 'ಧುರಂಧರ್: ದಿ ರಿವೆಂಜ್'
  • ಮಾರ್ಚ್ 19 ರಂದು ವಿಶ್ವಾದ್ಯಂತ ತೆರೆಕಂಡ ಈ ಸಿನಿಮಾ ತನ್ನ ಬಿಡುಗಡೆಯ ಮೊದಲ ದಿನದಿಂದಲೇ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ
  • ಆದಿತ್ಯ ಧಾರ್ ಮತ್ತು ರಣವೀರ್ ಸಿಂಗ್ ಇಬ್ಬರೂ ತಲಾ ಶೇ. 25 ರಷ್ಟು ಫಲಾನುಭವಿಗಳಾಗಿದ್ದಾರೆ
  • ಚಿತ್ರವು ಈಗಾಗಲೇ ಬರೋಬ್ಬರಿ 325 ಕೋಟಿಗಿಂತ ಹೆಚ್ಚಿನ ನಿವ್ವಳ ಲಾಭವನ್ನು ಹೊಂದಿದೆ ಎಂಬ ಊಹಾಪೋಹ
Ranveer Singh: ಸಿನಿಪ್ರೇಮಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಆಕ್ಷನ್ ಕ್ರಾಂತಿ 'ಧುರಂಧರ್: ದಿ ರಿವೆಂಜ್' ಚಿತ್ರವು ಗ್ಲೋಬಲ್ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುವತ್ತ ಮುನ್ನುಗ್ಗುತ್ತಿದೆ. ಮಾರ್ಚ್ 19 ರಂದು ವಿಶ್ವಾದ್ಯಂತ ತೆರೆಕಂಡ ಈ ಸಿನಿಮಾ ತನ್ನ ಬಿಡುಗಡೆಯ ಮೊದಲ ದಿನದಿಂದಲೇ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ. ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ಆದಾಯವು ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಹರಿದು ಬರುತ್ತಿದೆ.

325 ಕೋಟಿಗೂ ಅಧಿಕ ಲಾಭದ ವದಂತಿ!

ಬಾಕ್ಸ್​ ಆಫೀಸ್ ವಿಶ್ಲೇಷಕರ ಪ್ರಕಾರ, ಆದಿತ್ಯ ಧಾರ್ ಮತ್ತು ರಣವೀರ್ ಸಿಂಗ್ ಇಬ್ಬರೂ ತಲಾ ಶೇ. 25 ರಷ್ಟು ಫಲಾನುಭವಿಗಳಾಗಿದ್ದು, ಧುರಂಧರ್ ಡ್ಯುಯಾಲಜಿಯಲ್ಲಿ ಶೇ. 50 ರಷ್ಟು ಪಾಲನ್ನು ಜಿಯೋ ಸ್ಟುಡಿಯೋಸ್​ ತನ್ನದಾಗಿಸಿಕೊಂಡಿದೆ. ಈ ಚಿತ್ರವು ಈಗಾಗಲೇ ಬರೋಬ್ಬರಿ 325 ಕೋಟಿಗಿಂತ ಹೆಚ್ಚಿನ ನಿವ್ವಳ ಲಾಭವನ್ನು ಹೊಂದಿದೆ ಎನ್ನಲಾಗುತ್ತಿದೆ.

'ಡಾನ್ 3' ವಿವಾದ: ಮುಂದಿನ 18 ತಿಂಗಳು ರಣವೀರ್ ಸಿಂಗ್ ಸೈಲೆಂಟ್!

'ಡಾನ್ 3' ಚಿತ್ರದಿಂದ ರಣವೀರ್ ಸಿಂಗ್ ವಿವಾದಾತ್ಮಕವಾಗಿ ನಿರ್ಗಮಿಸಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ನಟ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅವರ ಮುಂದಿನ ಚಿತ್ರ ಜಯ್ ಮೆಹ್ತಾ ನಿರ್ದೇಶನದ 'ಪ್ರಲೇ' ಬಿಡುಗಡೆಯಾಗುವವರೆಗೆ, ಅಂದರೆ ಮುಂದಿನ 18 ತಿಂಗಳ ಕಾಲ ಯಾವುದೇ ಪತ್ರಕರ್ತರು ಅಥವಾ ಸಂದರ್ಶನಗಳಲ್ಲಿ ಈ ಬಗ್ಗೆ ಮಾತನಾಡದಿರಲು ರಣವೀರ್​ ನಿರ್ಧರಿಸಿದ್ದಾರೆ ಎಂದು ಫ್ರೀ ಪ್ರೆಸ್​ ಜರ್ನಲ್​ ವರದಿ ಮಾಡಿದೆ.

'ಡಾನ್ 3' ವಿವಾದದ ನಡುವೆಯೇ 6.36 ಕೋಟಿ ಕಾರು ಖರೀದಿಸಿದ ನಟ

ಇತ್ತೀಚೆಗೆ ರಣವೀ‌ರ್ ಸಿಂಗ್ ಇನ್ನೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ಅದು ಸಿನಿಮಾ ಕಾರಣಕ್ಕಲ್ಲ ಬದಲಾಗಿ ಗೆಲುವು ಮತ್ತು ವಿವಾದದ ನಡುವೆಯೂ 6.36 ಕೋಟಿ ಮೌಲ್ಯದ ಐಷಾರಾಮಿ ಫೆರಾರಿ ಕಾರು ಖರೀದಿಸಿ ಮುಂಬೈ ಬೀದಿಗಳಲ್ಲಿ ಸ್ವತಃ ಅವರೇ ಚಾಲನೆ ಮಾಡಿಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್​ ಆಗಿದ್ದಕ್ಕೆ.
ಇದು ಕಪ್ಪು ಬಣ್ಣದ ಫೆರಾರಿ 296 ಜಿಟಿಬಿ ಮಾಡೆಲ್, ಸದ್ಯದ ಮಾರುಕಟ್ಟೆ ಮೌಲ್ಯ 6.36 ಕೋಟಿ ಆಗಿದ್ದು, ಗಂಟೆಗೆ 330 ಕಿಮೀ ವೇಗದಲ್ಲಿ ಸಾಗುವ ಸಾಮರ್ಥ್ಯವಿದೆ. ಇನ್ನು ರಣವೀ‌ರ್ ಸಿಂಗ್‌ಗೆ ದುಬಾರಿ ಕಾರುಗಳ ಮೇಲೆ ವಿಶೇಷ ಪ್ರೀತಿ. ಈಗಾಗಲೇ ಅವರ ಹತ್ತಿರ ಲ್ಯಾಂಬೋರ್ಗಿನಿ, ಮರ್ಸಿಡೀಸ್-ಮೇಬಾಕ್, ಆಸ್ಟನ್ ಮಾರ್ಟಿನ್ ಮತ್ತು ರೇಂಜ್ ರೋವ‌ರ್ ಕಾರುಗಳಿದ್ದು, ಇದೀಗ ಫೆರಾರಿ 296 ಜಿಟಿಬಿ ಹೊಸ ಸೇರ್ಪಡೆಯಾಗಿದೆ (ಏಜೆನ್ಸೀಸ್​).