ಸಿನಿವಾಣಿ

ಪುತ್ರನನ್ನು ಪರಿಚಯಿಸಿದ ನಟಿ ಮಹಾಲಕ್ಷ್ಮೀ! ಇಷ್ಟು ದೊಡ್ಡ ಮಗನಿದ್ದಾನಾ ಎಂದು ಹುಬ್ಬೇರಿಸಿದ ನೆಟ್ಟಿಗರು

ಚೆನ್ನೈ: ಕಳೆದ ವರ್ಷವಷ್ಟೇ ದಡೂತಿ ದೇಹದ ನಿರ್ಮಾಪಕನನ್ನು ಮದುವೆ ಆಗಿ ಭಾರೀ ಸುದ್ದಿಯಾಗಿದ್ದ ನಟಿ ಮಹಾಲಕ್ಷ್ಮೀ ತನ್ನ ಮಗನನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿದ್ದಾರೆ. ಫೋಟೋ ನೋಡಿದವರು ಮಹಾಲಕ್ಷ್ಮೀಗೆ ಇಷ್ಟು ದೊಡ್ಡ ಮಗನಿದ್ದಾನಾ ಎಂದು ಹುಬ್ಬೇರಿಸಿದ್ದಾರೆ.

ಮಹಾಲಕ್ಷ್ಮೀ ಅವರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಫೋಟೋದಲ್ಲಿ ಮಗನ ಜೊತೆಗೆ ಆಕೆಯ ತಂದೆಯು ಸಹ ಇದ್ದಾರೆ. ಅಂದಹಾಗೆ ಮಹಾಲಕ್ಷ್ಮೀ ಅವರ ಮಗನ ಹೆಸರು ಸಚಿನ್​. ಮೊದಲ ಪತಿ ಅನಿಲ್​ ನೇರಡಿಮಿಲ್​ಗೆ ಜನಿಸಿದ ಮಗ. 2019ರಲ್ಲಿ ಮಹಾಲಕ್ಷ್ಮೀ ಮತ್ತು ಅನಿಲ್​ ಡಿವೋರ್ಸ್​ ಪಡೆದುಕೊಂಡರು. ಇದಾದ ಬಳಿಕ 2022ರಲ್ಲಿ ನಿರ್ಮಾಪಕ ರವೀಂದರ್​ ಚಂದ್ರಶೇಖರನ್​ ಅವರನ್ನು ಮಹಾಲಕ್ಷ್ಮೀ ವರಿಸಿದರು.

ರವೀಂದರ್​ ಅವರನ್ನು ಮದುವೆ ಆಗಲು ಮಹಾಲಕ್ಷ್ಮೀ ತೆಗೆದುಕೊಂಡ ನಿರ್ಧಾರ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಹಣಕ್ಕಾಗಿ ಮದುವೆ ಆಗಲು ಒಪ್ಪಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು. ಅಲ್ಲದೆ, ರವೀಂದರ್​ ಕೂಡ ಬಾಡಿ ಶೇಮಿಂಗ್​ ಅಪಹಾಸ್ಯಕ್ಕೆ ಗುರಿಯಾಗಿದ್ದರು. ಆದರೆ, ಇದಕ್ಕೆಲ್ಲ ಸೆಡ್ಡು ಹೊಡೆದ ರವೀಂದರ್ ಮತ್ತು ಮಹಾಲಕ್ಷ್ಮೀ ಸಪ್ತಪದಿ ತುಳಿದು, ಸುಖಕರ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ದಂಪತಿಗಳು ಬೇರ್ಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮಹಾಲಕ್ಷ್ಮೀ ಮತ್ತು ರವೀಂದರ್​ ಒಟ್ಟಿಗೆ ಇರುವ ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ಸುಳ್ಳು ಸುದ್ದಿ ಹರಡುವವರಿಗೆ ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್​)