ಬೆಂಗಳೂರು: ಖ್ಯಾತ ನಟ ದರ್ಶನ್ ತೂಗದೀಪ ಅವರ ಹುಟ್ಟು ಹಬ್ಬಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಉತ್ಸಾಹ ಅಧಿಕವಾಗತೊಡಗಿದೆ.
ಫೆ.16ರಂದು ನಟ ದರ್ಶನ್ ಹುಟ್ಟು ಹಬ್ಬ. ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಷಯ ಕೋರಲು ಅಭಿಮಾನಿ ಲೋಕಿ ಎಂಬಾತ ರಾಬರ್ಟ್ ಸಿನಿಮಾದ ಟ್ಯಾಟು ಬರೆಸಿಕೊಂಡಿದ್ದಾನೆ.
ರಾಬರ್ಟ್ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಅವರ ಕಾರು ಚಾಲಕನಾಗಿರುವ ಲೋಕಿಗೆ ದರ್ಶನ್ ಅಂದರೆ ಪ್ರಾಣ. ಹೀಗಾಗಿ ಆತ ತನ್ನ ಬೆನ್ನಮೇಲೆ ದೊಡ್ಡದಾದ ಟ್ಯಾಟು ಬರೆಸಿಕೊಂಡಿದ್ದಾನೆ.
ಲೋಕಿ ಸತತ 5 ತಾಸುಗಳ ಕಾಲ ಟ್ಯಾಟು ಹಾಕಿಸಿಕೊಂಡಿದ್ದಾನೆ. ಅಲ್ಲದೆ ಆತ ಫೆ.16ರಂದು ದರ್ಶನ್ಗೆ ವಿಶೇಷವಾಗಿ ಶುಭಾಷಯ ಹೇಳಲು ನಿರ್ಧರಿಸಿದ್ದಾನೆ.
ದರ್ಶನ್ ಹುಟ್ಟುಹಬ್ಬದ ದಿನ ಸಮೀಪಿಸುತ್ತಿದ್ದಂತೆ ಅಭಿಮಾನಿಗಳು ಯಾವ ರೀತಿ ಸಂಭ್ರಮ ಆಚರಿಸಲು ನಿರ್ಧಾರ ಮಾಡಿದ್ದಾರೋ ಗೊತ್ತಿಲ್ಲ. ಅಂತು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನಟನ ಹುಟ್ಟುಹಬ್ಬದ ಆಚರಿಸಲು ಮುಂದಾಗಿದ್ದಾರೆ. (ದಿಗ್ವಿಜ ನ್ಯೂಸ್)