ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದ ಜತೆಗೆ ಪ್ರಾಣಿಗಳ ಮೇಲೂ ಅತೀವ ಆಸಕ್ತಿ ಮತ್ತು ಪ್ರೀತಿ. ಹಾಗಾಗಿಯೇ ಅವರ ಮೈಸೂರಿನ ಫಾರ್ಮ್ ಹೌಸ್ನಲ್ಲಿ ಸಾಕಷ್ಟು ಸಾಕು ಪ್ರಾಣಿಗಳಿವೆ. ಅಷ್ಟೇ ಅಲ್ಲ ಮೈಸೂರಿನ ಮೃಗಾಲಯದಲ್ಲಿನ ಹಲವು ಪ್ರಾಣಿ ಪಕ್ಷಿಗಳನ್ನೂ ದತ್ತು ಪಡೆದಿದ್ದಾರವರು. ಬಿಡುವಿನ ಸಮಯದಲ್ಲಿ ಕಾಡಿಗೆ ತೆರಳಿ ಅಲ್ಲಿನ ಪ್ರಾಣಿಗಳ ಫೋಟೋ ತೆಗೆಯುವುದೂ ದರ್ಶನ್ಗಿಷ್ಟ. ಅದೇ ರೀತಿ ಇದೀಗ ನಾಗರಹೊಳೆಯಲ್ಲಿ ಬಿಡಾರ ಹೂಡಿದ್ದಾರೆ.
ಇದನ್ನೂ ಓದಿ: ಮನುರಂಜನ್ ಮನದಾಳ: ಸೋಲಿನ ಪರಾಮರ್ಶೆಯೋ? ಅವಲೋಕನವೋ?
ಅರಣ್ಯದಲ್ಲಿ ಸಫಾರಿ ತೆರಳಿರುವ ದರ್ಶನ್, ಹುಲಿಯ ಫೋಟೋ ತೆಗೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೀಪ್ನಲ್ಲಿ ಕುಳಿತು ಹುಲಿಯ ಬಗೆಬಗೆ ಭಂಗಿಗಳನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯುತ್ತಿದ್ದಾರೆ. ಈ ಹಿಂದೆ ಆನೆಯ ಫೋಟೋವನ್ನು ದರ್ಶನ್ ಸೆರೆಹಿಡಿದಿದ್ದರು. ಆ ಫೋಟೋವನ್ನು ನಟ ಚಿಕ್ಕಣ್ಣ ಒಂದು ಲಕ್ಷ ಮೊತ್ತ ಕೊಟ್ಟ ಖರೀದಿಸಿದ್ದರು.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಮಾರ್ಚ್ 11ರ ಮಹಾಶಿವರಾತ್ರಿ ದಿನದಂದು ಕನ್ನಡದ ಜತೆಗೆ ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಅದೇ ರೀತಿ ಇನ್ನೇನು ಶೀಘ್ರದಲ್ಲಿ ಟ್ರೇಲರ್ ರಿಲೀಸ್ ಮಾಡುವ ಬಗ್ಗೆಯೂ ಚಿತ್ರತಂಡ ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ.