ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ನಟ ದರ್ಶನ್ ಕೊಲೆ ಪ್ರಕರಣವೊಂದರಲ್ಲಿ ಬಂಧನವಾಗಿದ್ದಾರೆ. ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಯ ಕೊಲೆಯಲ್ಲಿ ದರ್ಶನ್ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಅಲ್ಲದೆ, ಒಳಸಂಚು ನಡೆಸಿದ ಆರೋಪದ ಮೇಲೆ ಪವಿತ್ರಾ ಗೌಡಳನ್ನು ವಶಕ್ಕೆ ಪಡೆಯಲಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಮತ್ತೊಂದು ಸ್ಪೋಟಕ ಸಂಗತಿ ಇದೀಗ ಬಯಲಾಗಿದೆ. ಅದೇನೆಂದರೆ, ಇಡೀ ಪ್ರಕರಣ ಪವಿತ್ರಾ ಗೌಡ ವಿಚಾರಕ್ಕೆ ನಡೆದಿರುವುದರಿಂದ ನಟ ದರ್ಶನ್, ಕೋಪದಿಂದ ಆಕೆಯೂ ಮೇಲೂ ಹಲ್ಲೆ ಮಾಡಿದ್ದರು ಎಂಬ ಸಂಗತಿ ಬಯಲಾಗಿದೆ.
ನಟಿ ಪವಿತ್ರಾ ಗೌಡ ಮತ್ತು ನಟ ದರ್ಶನ್ ನಡುವಿನ ಸಂಬಂಧ ಏನೂ ಎಂಬುದು ಬಹುತೇಕರಿಗೆ ತಿಳಿದಿದೆ. ಇತ್ತಿಚೆಗಷ್ಟೇ ದರ್ಶನ್ ಬರ್ತಡೇ ಸಮಯದಲ್ಲಿ ಪವಿತ್ರಾ ಗೌಡ ದರ್ಶನ್ ಜತೆಗಿನ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಇದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರ ಗೌಡ ನಡುವಿನ ಕಿತ್ತಾಟಕ್ಕೆ ಕಾರಣವಾಗಿತ್ತು. ಬಳಿಕ ಈ ಸುದ್ದಿ ತಣ್ಣಗಾಗಿತ್ತು. ಇದಾದ ಕೆಲವೇ ತಿಂಗಳಲ್ಲಿ ರಾಜ್ಯವೇ ಒಂದು ಕ್ಷಣ ಶಾಕ್ ಆಗುವಂತಹ ಸುದ್ದಿ ಹೊರಬಿದ್ದಿದೆ.
ರೇಣುಕಾಸ್ವಾಮಿ ಕೊಲೆಯಾದ ಬಳಿ ಅದೇ ಕೋಪದಲ್ಲಿ ಪವಿತ್ರಾ ಗೌಡಳ ಮೇಲೆ ದರ್ಶನ್ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಇದೆಲ್ಲವು ನಿನ್ನಿಂದಲೇ ನಡೆದಿದ್ದು, ಈ ರೀತಿ ಆಗಲು ನೀನೇ ಕಾರಣ ಎಂದು ಪವಿತ್ರಾರ ಮೇಲೆ ಹಲ್ಲೆ ಮಾಡಿ ಕೂಗಾಡಿದ್ದರಂತೆ. ದರ್ಶನ್ರಿಂದ ಹಲ್ಲೆಗೆ ಒಳಗಾದ ಪವಿತ್ರಾ ಆರ್ಆರ್ ನಗರದ ಆಸ್ಪತ್ರೆಯೊಂದಕ್ಕೆ ದಾಖಲಾಗಿ, ನಿನ್ನೆಯಷ್ಟೇ (ಜೂನ್ 10) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ರೇಣುಕಾಸ್ವಾಮಿ ಅಪೋಲೋ ಮೆಡಿಕಲ್ನಲ್ಲಿ ಕೆಲಸ ಮಾಡುತ್ತಿದ್ದರು. ಜೂನ್ 9ರಂದು ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಹತ್ತಿರದ ಮೋರಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಅಪಾರ್ಟ್ಮೆಂಟ್ ಭದ್ರತಾ ಸಿಬ್ಬಂದಿ ರಾಮ್ ದೋರ್ ಜೀ ಎಂಬುವರು ಮೃತದೇಹ ಕಂಡು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಮೋರಿಯ ಬಳಿ ವ್ಯಕ್ತಿಯೊಬ್ಬರು ಶವ ಪತ್ತೆಯಾಗಿದೆ ಎಂದು ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಅಪರಿಚಿತ ಶವ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಪೊಲೀಸರಿಗೆ ಪ್ರಕರಣದಲ್ಲಿ ಒಂದೊಂದೆ ಮಹತ್ವದ ಮಾಹಿತಿಗಳು ಸಿಗಲಾರಂಭಿಸಿದವು.
ಕೊಲೆಯಾದ ರೇಣುಕಾಸ್ವಾಮಿಯ ಮುಖ, ತಲೆ ಹಾಗೂ ಕಿವಿಯಲ್ಲಿ ರಕ್ತಗಾಯವಾಗಿರೋದು ಕಂಡು ಬಂದಿರುತ್ತದೆ. ಯಾರೋ ಕೊಲೆ ಮಾಡಿ ತಂದು ಬಿಸಾಡಿರುವ ಅನುಮಾನ ಅಂತ ದೂರು ದಾಖಲಿಸಲಾಗಿತ್ತು. ಜೂನ್ 8ರಂದು ಬೇರೆಡೆ ಕೊಲೆ ಮಾಡಲಾಗಿದೆ. ಜೂನ್ 9ರಂದು ಮೃತದೇಹ ಸಿಕ್ಕಿದೆ. ಬಳಿಕ ಮಾಹಿತಿ ಆಧರಿಸಿ ಆರೋಪಿಗಳ ಬಂಧನ ಮಾಡಲಾಗಿದೆ. ಕೊಲೆಯಾದ ರೇಣುಕಾಸ್ವಾಮಿಯ ಮುಖ, ತಲೆ ಹಾಗೂ ಕಿವಿಯಲ್ಲಿ ರಕ್ತಗಾಯವಾಗಿರೋದು ಕಂಡು ಬಂದಿರುತ್ತದೆ. ಯಾರೋ ಕೊಲೆ ಮಾಡಿ ತಂದು ಬಿಸಾಡಿರುವ ಅನುಮಾನ ಅಂತ ದೂರು ದಾಖಲಿಸಲಾಗಿತ್ತು. ಜೂನ್ 8ರಂದು ಬೇರೆಡೆ ಕೊಲೆ ಮಾಡಲಾಗಿದೆ. ಜೂನ್ 9ರಂದು ಮೃತದೇಹ ಸಿಕ್ಕಿದೆ. ಬಳಿಕ ಮಾಹಿತಿ ಆಧರಿಸಿ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಪಶ್ವಿಮ ವಿಭಾಗದ ಡಿಸಿಪಿ ಗಿರೀಶ್ ಹೇಳಿದ್ದಾರೆ.
ಆರೋಪಿಗಳು ದರ್ಶನ್ ಹೆಸರನ್ನು ಬಹಿರಂಗಪಡಿಸಿದ್ದಾರೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ ಸೇರಿ 10 ಮಂದಿಯನ್ನು ಬಂಧಿಸಲಾಗಿದೆ.