ಸಿನಿವಾಣಿ

ಮನೆಗೆ ತಲುಪಿದ ಚಿರು ಪಾರ್ಥಿವ ಶರೀರ; ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ ನಟ ದರ್ಶನ್​

ಬೆಂಗಳೂರು: ಚಿರಂಜೀವಿ ಸರ್ಜಾ ಅವರ ಮೃತದೇಹ ಜಯನಗರದ ಸಾಗರ್​ ಅಪೋಲೋ ಆಸ್ಪತ್ರೆಯಿಂದ ಬಸವನಗುಡಿಯಲ್ಲಿರುವ ಅವರ ಸ್ವಗೃಹಕ್ಕೆ ರವಾನೆಯಾಗಿದೆ.

ಆಸ್ಪತ್ರೆಯಿಂದ ಆಂಬುಲೆನ್ಸ್​ನಲ್ಲಿ ಚಿರು ಪಾರ್ಥಿವ ಶರೀರವನ್ನು ತರಲಾಗಿದೆ. ಪತ್ನಿ ಮೇಘನಾ ರಾಜ್​, ಸಹೋದರ ಧ್ರುವ ಸರ್ಜಾ, ನಟ ದರ್ಶನ್​ ಅವರು ಆಂಬುಲೆನ್ಸ್​ನಲ್ಲಿ ಆಗಮಿಸಿದ್ದಾರೆ.

ಬಸವನಗುಡಿಯಲ್ಲಿರುವ ಚಿರು ನಿವಾಸದ ಬಳಿ ಸ್ಯಾಂಡಲ್​ವುಡ್​ನ ಅನೇಕ ಕಲಾವಿದರು, ಅಭಿಮಾನಿಗಳು ಈಗಾಗಲೇ ಸೇರಿದ್ದಾರೆ. ಅಂತಿಮ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ದರ್ಶನ್​ ಅವರು ಮುಂದಾಗಿ ಎಲ್ಲ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: ‘ಚಿರಂಜೀವಿ’ ಎಂದು ಹೆಸರಿಟ್ಟುಕೊಂಡು ಅಕಾಲಿಕವಾಗಿ ಅಗಲಿದರು’; ಬಿಕ್ಕಿಬಿಕ್ಕಿ ಅತ್ತರು ನಟಿ ತಾರಾ…

ಈ ಮಧ್ಯೆ ಕೊವಿಡ್​ -19 ಭಯ ಕೂಡ ಶುರುವಾಗಿದೆ. ಅಲ್ಲಿ ಸಾಮಾಜಿಕ ಅಂತರ ನಿಯಮ ಸ್ವಲ್ಪವೂ ಪಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಚಿರು ಅಂತಿಮ ದರ್ಶನಕ್ಕೆ ಬರುವವರನ್ನು ತಡೆಯುವುದು ಕಷ್ಟವೇ ಸರಿ.

ಸುತ್ತಲಿನ ರಸ್ತೆ, ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದರೂ, ನೆಚ್ಚಿನ ನಟನನ್ನು ಕೊನೇ ಬಾರಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ‘ಅಪ್ಪ’ನಾಗುತ್ತಿರುವ ಖುಷಿಯಲ್ಲಿದ್ದರು ಚಿರು ಸರ್ಜಾ; ಮಗು ಹುಟ್ಟುವ ಮುನ್ನವೇ ಇವರು ಹೊರಟುಬಿಟ್ಟರು…