ಸಿನಿವಾಣಿ

ಅಂಜನಾ ಹಾಟ್​ ಲುಕ್​… ಅರ್ಜುನ್​ ಸರ್ಜಾರ ಕಿರಿಯ ಪುತ್ರಿಯ ಗ್ಲಾಮರಸ್​ ಅವತಾರಕ್ಕೆ ನೆಟ್ಟಿಗರು ಫಿದಾ!

ಚೆನ್ನೈ: ಆ್ಯಕ್ಸನ್​ ಕಿಂಗ್​ ಅರ್ಜುನ್​ ಸರ್ಜಾ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಮೂಲತಃ ಕನ್ನಡದವರೇ ಆದ ಅರ್ಜುನ್​ ಹೆಚ್ಚಾಗಿ ಮಿಂಚಿದ್ದು ಮಾತ್ರ ಕಾಲಿವುಡ್​ನಲ್ಲಿ. ಸದ್ಯ ಅರ್ಜುನ್​ ಕುಟುಂಬ ಚೆನ್ನೈನಲ್ಲೇ ನೆಲೆಸಿದೆ. ಹೀಗಿದ್ದರೂ ಅರ್ಜುನ್​ ಅವರಿಗೆ ಕನ್ನಡದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಆಗಾಗ ಕನ್ನಡ ಸಿನಿಮಾಗಳನ್ನು ಸಹ ಮಾಡುತ್ತಿರುತ್ತಾರೆ.

ಅರ್ಜುನ್​ ಸರ್ಜಾರ ಅವರ ಪುತ್ರಿ ಐಶ್ವರ್ಯಾ ಕೂಡ ಓರ್ವ ನಟಿ. ನಟ ವಿಶಾಲ್​ ಅಭಿನಯದ ಪಟ್ಟತ್ತು ಆನೈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ, ಐಶ್ವರ್ಯಾಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಹೀಗಾಗಿ ಅವರ ಸಿನಿ ಜರ್ನಿ ಮೂರೇ ಸಿನಿಮಾಗೆ ಸೀಮಿತವಾಯಿತು. ಪಟ್ಟತ್ತು ಆನೈ ಹೊರತುಪಡಿಸಿ ಸೊಲ್ಲಿವಿಧವ ಎಂಬ ಮತ್ತೊಂದು ತಮಿಳು ಸಿನಿಮಾದಲ್ಲಿ ಐಶ್ವರ್ಯಾ ನಟನೆ ಮಾಡಿದ್ದಾರೆ. ಕನ್ನಡದಲ್ಲಿ ನಟಿಸಿದ್ದು ಒಂದೇ ಸಿನಿಮಾ. ಪ್ರೇಮ ಬರಹ ಸಿನಿಮಾದಲ್ಲಿ ನಟ ಚಂದನ್​ ಜತೆ ನಟಿಸಿದರು. ಈ ಚಿತ್ರವನ್ನು ಸ್ವತಃ ಅರ್ಜುನ್​ ಸರ್ಜಾ ಅವರೇ ನಿರ್ದೇಶನ ಮಾಡಿದರು. ಸದ್ಯ ಐಶ್ವರ್ಯಾ ಅವರು ತಮಿಳಿನ ಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ ಹಾಗೂ ನಟ ಉಮಾಪತಿ ರಾಮಯ್ಯರನ್ನು ಮದುವೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

ಅಂದಹಾಗೆ ಅರ್ಜುನ್​ ಸರ್ಜಾಗೆ ಮತ್ತೊಬ್ಬ ಮಗಳಿರುವುದು ಬಹುತೇಕರಿಗೆ ತಿಳಿದಿಲ್ಲ. ಹೌದು, ಅರ್ಜುನ್​ಗೆ ಅಂಜನಾ ಹೆಸರಿನ ಮತ್ತೊಬ್ಬ ಮಗಳಿದ್ದಾಳೆ. ಈಕೆ ಕುಟುಂಬದ ಕಿರಿಯ ಮಗಳು. ಆದರೆ, ಅಂಜನಾ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಹೀಗಿದ್ದರೂ ತಮ್ಮ ಬೋಲ್ಡ್​ ಲುಕ್​ನಿಂದಲೇ ಅನೇಕರ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅಂಜನಾ ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುತ್ತಾರೆ. ಈ ಮೂಲಕ ನೆಟ್ಟಿಗರ ಗಮನವನ್ನು ಸೆಳೆಯುತ್ತಿರುತ್ತಾರೆ.

ಇದೀಗ ದಕ್ಷಿಣ ಅಮೆರಿಕದ ಪೆರು ದೇಶದಲ್ಲಿ ಪ್ರವಾಸದಲ್ಲಿರುವ ಅಂಜನಾ ಅಲ್ಲಿನ ಸುಂದರ ತಾಣದಲ್ಲಿ ಫೋಟೋಶೂಟ್​ ಮಾಡಿಸಿದ್ದು, ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಲಾಂಗ್​ ಗೌನ್​ನಲ್ಲಿ ಅಂಜನಾ ತುಂಬಾ ಗ್ಲಾಮರಸ್​ ಆಗಿ ಪೋಸ್​ ನೀಡಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಂಜನಾ ಬ್ಯೂಟಿಗೆ ಫಿದಾ ಆಗಿರುವ ನೆಟ್ಟಿಗರು ನೀವು ಯಾವಾಗ ಹೀರೋಯಿನ್​ ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ.

ಅಂದಹಾಗೆ ಅರ್ಜುನ್​ ಸರ್ಜಾ, ಕನ್ನಡದ ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ಅವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಆದರೆ ತಮಿಳು ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕರಾಗಿ ಹೆಸರು ಗಳಿಸಿದ್ದಾರೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ. ಅರ್ಜುನ್​ ಸರ್ಜಾ ಅವರ ಮಡದಿಯ ಹೆಸರು ನಿವೇದಿತ ಅರ್ಜುನ್. ಇವರು ಶಿವರಾಜ್​ಕುಮಾರ್​ ಅಭಿನಯದ ರಥಸಪ್ತಮಿ ಚಿತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)