ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ಟಾಲಿವುಡ್ನ ಮೋಸ್ಟ್ ಅವೇಟೆಡ್ ಸಿನಿಮಾ ಆಚಾರ್ಯ ಸಿನಿಮಾ ಕುರಿತು ಹಲವು ಸುದ್ದಿಗಳು ಹರಿದಾಡುತ್ತಿವೆಯಾದರೂ, ಒಂದೇ ಒಂದು ಲುಕ್ ಇಲ್ಲಿಯವರೆಗೂ ಬಹಿರಂಗವಾಗಿಲ್ಲ. ಇದೀಗ ಗಣೇಶ ಹಬ್ಬ ಮತ್ತು ಮೆಗಾಸ್ಟಾರ್ ಚಿರಂಜೀವಿ ಜನ್ಮ ದಿನದ ಪ್ರಯುಕ್ತ ಆಚಾರ್ಯ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಅಂದಹಾಗೆ, ಈ ಹಿಂದೆ ಭರತ್ ಅನೇ ನೇನು, ಶ್ರೀಮಂತುಡು ಸಿನಿಮಾ ನಿರ್ದೇಶನ ಮಾಡಿದ್ದ ಕೊರಟಾಲ ಶಿವ ಈ ಸಿನಿಮಾಕ್ಕೂ ನಿರ್ದೇಶನ ಮಾಡುತ್ತಿದ್ದು, ನಕ್ಸಲೈಟ್ ಅವತಾರದಲ್ಲಿ ಚಿರಂಜೀವಿ ಎದುರಾಗಿದ್ದಾರೆ. ದ್ವಿಪಾತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದಿನ ಕೈದಿ ಸಿನಿಮಾದಲ್ಲಿ ಚಿರುಗೆ ಜೋಡಿಯಾಗಿದ್ದ ಕಾಜಲ್ ಅಗರ್ವಾಲ್ ಇಲ್ಲಿಯೂ ನಾಯಕಿಯಾಗಿದ್ದಾರೆ.
ಇನ್ನು ರಾಮ್ಚರಣ್ ತೇಜ 30 ನಿಮಿಷಗಳ ಕಾಲ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋನು ಸೋದ್ ಖಳನಾಗಿ ಅಬ್ಬರಿಸಲಿದ್ದು, ಇನ್ನು ಕೆಲ ದಿನಗಳಲ್ಲಿ ಶೂಟಿಂಗ್ ಸಹ ಶುರುವಾಗಲಿದೆ.