ಸಿನಿವಾಣಿ

ಬಚ್ಚನ್​ ಕುಟುಂಬಕ್ಕೆ ಕರೊನಾ; ಆತಂಕದಲ್ಲಿ ಬ್ರೀಥ್​ ವೆಬ್​ಸರಣಿ ತಂಡ

ಬಾಲಿವುಡ್ ನಟ ಅಮಿತಾಬ್​ ಬಚ್ಚನ್​ಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಅಭಿಷೇಕ್​ ಬಚ್ಚನ್​ ಅವರಲ್ಲಿಯೂ ಸೋಂಕು ದೃಢಪಟ್ಟಿತ್ತು. ಬಳಿಕ ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಾಗೂ ಕರೊನಾ ಪಾಸಿಟಿವ್​ ವರದಿ ಬಂದಿತ್ತು. ಇದೀಗ ಅಭಿಷೇಕ್​ ಬಚ್ಚನ್​ ಜತೆ ವೆಬ್​ಸಿರೀಸ್​ನಲ್ಲಿ ಕೆಲಸ ಮಾಡಿದ ಅಮಿತ್​ ಸಾದ್​ಗೂ ಇದೀಗ ಆತಂಕ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರವೇ ಅವರು ಪರೀಕ್ಷೆಗೊಳಪಟ್ಟಿದ್ದು, ಇದೀಗ ಆ ವರದಿ ನೆಗೆಟಿವ್​ ಬಂದಿದೆ.

ಅಂದಹಾಗೆ, ಕರೊನಾ ಲಾಕ್​ಡೌನ್​ಗೂ ಮುನ್ನ ವೆಬ್​ಸರಣಿಯ ಚಿತ್ರೀಕರಣ ಮುಗಿಸಿಕೊಂಡಿದ್ದ ಬ್ರೀಥ್​ ವೆಬ್​ ತಂಡ, ಲಾಕ್​ಡೌನ್​ ವೇಳೆ ಒಂದಷ್ಟು ಭಾಗದ ಡಬ್ಬಿಂಗ್​ ಪ್ರಕ್ರಿಯೆ ಮುಗಿಸಿಕೊಂಡಿತ್ತು. ಆ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಅಭಿಷೇಕ್​ ಡಬ್ಬಿಂಗ್​ ಮಾಡಿದ್ದ ಸ್ಟುಡಿಯೋದಲ್ಲಿಯೇ ಅಮಿತ್​ ಸಹ ಡಬ್ಬಿಂಗ್ ಮಾಡಿದ್ದರು. ಆ ಕಾರಣಕ್ಕೆ ಅಮಿತ್​ ಸಹ ಕರೊನಾ ಪರೀಕ್ಷೆಗೆ ಮುಂದಾಗಿದ್ದರು. ಖುಷಿಯ ವಿಚಾರ ಏನೆಂದರೆ ಅವರ ವರದಿ ನೆಗೆಟಿವ್​ ಬಂದಿದೆ.

ಇನ್ನು ಬ್ರೀಥ್​ ವೆಬ್​ಸರಣಿಗೂ ಕರೊನಾ ಆತಂಕ ಮನೆ ಮಾಡಿದ್ದು, ಇಡೀ ತಂಡ ಮತ್ತು ಡಬ್ಬಿಂಗ್​ನಲ್ಲಿ ಪಾಲ್ಗೊಂಡವರೆಲ್ಲ ಪರೀಕ್ಷೆ ಮಾಡಿಸಿಕೊಳ್ಳುವಂತೆ ತನ್ನಲ್ಲ ಸದಸ್ಯರಿಗೆ ತಂಡ ತಿಳಿಸಿದೆ. ಸದ್ಯ ಬಾಲಿವುಡ್​ ಸೇರಿ ಕಿರುತೆರೆ ಕಲಾವಿದರಲ್ಲಿಯೂ ಪಾಸಿಟಿವ್​ ಕೇಸ್​ಗಳು ಪತ್ತೆಯಾಗುತ್ತಿದ್ದು, ಹಲವು ಸೀರಿಯಲ್​ ತಂಡಗಳು ಶೂಟಿಂಗ್​ ಅನ್ನೇ ಸ್ಥಗಿತಗೊಳಿಸಿವೆ. (ಏಜೆನ್ಸೀಸ್​)​