ಸಿನಿವಾಣಿ

'ಮಮ್ಮಿ ಡಿಸ್ಟನ್ಸಿಂಗ್​​....' : ಕ್ವಾರಂಟೈನ್​ನಲ್ಲಿ ಇರುವ ಅಮ್ಮನ ಫೋಟೋ ಶೇರ್​ ಮಾಡಿದ ಅಭಿಷೇಕ್​ ಅಂಬರೀಷ್​

ಕರೊನಾ ಸೋಂಕಿಗೆ ಒಳಗಾಗಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಸದ್ಯ ಕ್ವಾರಂಟೈನ್​ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಮಲತಾ ಅವರು ಜುಲೈ 6ರಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ತಮಗೆ ಕರೊನಾ ಸೋಂಕು ತಗುಲಿದ್ದನ್ನು ಹೇಳಿಕೊಂಡಿದ್ದರು. ಹಾಗೇ, ಮನೆಯಲ್ಲೇ ಕ್ವಾರಂಟೈನ್​ ಆಗಿ, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ತಿಳಿಸಿದ್ದರು.

ಇದೀಗ ಅವರ ಪುತ್ರ ಅಭಿಷೇಕ್​ ಅಂಬರೀಷ್​ ಅವರು ತನ್ನ ಅಮ್ಮ ಕ್ವಾರಂಟೈನ್​ನಲ್ಲಿರುವ ಫೋಟೋವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿದ್ದಾರೆ. ಮಮ್ಮಿ ಡಿಸ್ಟನ್ಸಿಂಗ್​ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾನೀಗ ಚೆನ್ನಾಗಿದ್ದೇನೆ ಮತ್ತು ಸುರಕ್ಷಿತವಾಗಿದ್ದೇನೆ; ಜಯಶ್ರೀ ರಾಮಯ್ಯ

ನನ್ನ ಅಮ್ಮ ಚೇತರಿಸಿಕೊಳ್ಳುತ್ತಿದ್ದಾರೆ. ದೇವರ ದಯೆಯಿಂದ ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖರಾಗಲಿದ್ದಾರೆ. ಹಾಗೇ, ನನ್ನ ತಾಯಿಯ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಅಭಿ ತಿಳಿಸಿದ್ದಾರೆ.

ಕೊವಿಡ್​-19 ಯಾರಿಗೆ ಬೇಕಾದರೂ ಬರಬಹುದು. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ದಯವಿಟ್ಟು ಎಲ್ಲರೂ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ನಿಯಮಗಳನ್ನು ಸರಿಯಾಗಿ ಪಾಲಿಸಿ. ಸ್ಯಾನಿಟೈಸರ್​ ಬಳಕೆ ಮಾಡಿ..ಆಗಾಗ ಕೈ ತೊಳೆಯುತ್ತಿರಿ ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)