ಕ್ಯಾಪ್ಟನ್ಸಿ ಟಾಸ್ಕ್ ರೇಸ್ನಲ್ಲಿ ಸೌಂದರ್ಯಾ ಮತ್ತು ಆಸಿಯಾ.
ಸೌಂದರ್ಯಾ ಮತ್ತು ಆಸಿಯಾ ಭಾರೀ ಪೈಪೋಟಿ.
ಯಾರಾಗ್ತಾರೆ ಈ ಬಿಗ್ಬಾಸ್ ಮನೆಯ ಮುಂದಿನ ಕ್ಯಾಪ್ಟನ್?.
Bigg Boss Kannada: ಕ್ಯಾಪ್ಟನ್ಸಿ ಟಾಸ್ಕ್ ರೇಸ್ನಲ್ಲಿ ಸೌಂದರ್ಯಾ ಮತ್ತು ಆಸಿಯಾ ಮುಖಾಮುಖಿಯಾಗಿದ್ದು, ತೀವ್ರ ಪೈಪೋಟಿ ನಡೆದಿದೆ. ಗಗನ್ ನಂತ್ರ ಬಿಗ್ಬಾಸ್ ಮನೆಯ ಮುಂದಿನ ಕ್ಯಾಪ್ಟನ್ ಯಾರು ಎನ್ನುವ ಕುತೂಹಲವನ್ನು ಕೆರಳಿಸಿದೆ.
ಲೂಟಿಕೋರರು ಮತ್ತು ರಕ್ಷಕರು ಟಾಸ್ಕ್ನಲ್ಲಿ ಥ್ರಿಲ್ಲಿಂಗ್ ಆಗಿ ಲೂಟಿ ಮಾಡಿದ ತಾಂಡವ್, ಸೌಂದರ್ಯ ಮತ್ತು ಆಸಿಯಾ ಹಾಗೂ ಲಕ್ಷ್ಮಿ, ಸೋನಿಕಾ, ಕುಮಾರಿ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾದರು. ಕ್ಯಾಪ್ಟನ್ಸಿ ಪಟ್ಟಕ್ಕೆ ದಾರಿ ಎನ್ನುವ ಪಜಲ್ ಚಟುವಟಿಕೆಯಲ್ಲಿ ಆಸಿಯಾ ಮತ್ತು ಸೌಂದರ್ಯ ಭರ್ಜರಿಯಾಗಿ ಗೆದ್ದರು. ಸದ್ಯ ಗಗನ್ ನಂತ್ರ ಮನೆಯ ಮುಂದಿನ ಕ್ಯಾಪ್ಟನ್ ಯಾರು ಎನ್ನುವ ಕುತೂಹಲಕ್ಕೆ ತೆರೆ ಇಂದಿನ ಎಪಿಸೋಡ್ನಲ್ಲಿ ಬೀಳಲಿದೆ.
ಕ್ಯಾಪ್ಟನ್ಸಿ ಓಟಕ್ಕಾಗಿ ಬಿಗ್ಬಾಸ್ ಕೊಟ್ಟ ಆಟದ ನಿಯಮದ ಪ್ರಕಾರ, ಒಂದು ಕಡೆ ಫ್ರೇಮ್ಗೆ ಕಟ್ಟಿರುವ ಹಗ್ಗವನ್ನು ಎಳೆದು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾ, 18 ಸ್ಥಾನ ಸೇರಿದಂತೆ ಒಟ್ಟು 36 ಕಡೆ ಬಿಲ್ಲೆಯನ್ನು ಒಂದರ ಮೇಲೊಂದರಂತೆ ನೇರವಾಗಿ ಜೋಡಿಸುತ್ತಾ ಹೋಗಬೇಕು. ಕೊನೆಗೆ ಮುಗಿದ ನಂತರ 1ರಿಂದ5ರವರೆಗೂ ಗಟ್ಟಿಯಾಗಿ ಎಣಿಸಬೇಕು. ಬಿಲ್ಲೆ ಬೀಳದಿದ್ದರೆ ಅವರು ಟಾಸ್ಕ್ ಗೆದ್ದು ಮನೆಯ ಮುಂದಿನ ಕ್ಯಾಪ್ಟನ್ ಆದಂತೆ.
ಸದ್ಯ ರಿಲೀಸ್ ಆದ ಪ್ರೋಮೋದಲ್ಲಿ ಆಸಿಯಾ ಮತ್ತು ಸೌಂದರ್ಯಾ ಇಬ್ಬರು ಸಹ ಒಟ್ಟಾಗಿ ಗಮನವಿಟ್ಟು ಬಿಲ್ಲದೆಗಳನ್ನು ಜೋಡಿಸಿದ್ದಾರೆ. ಒಬ್ಬರ ಬಿಲ್ಲೆ ಉರುಳಿದೆ. ಅದು ಯಾರದ್ದು?, ತಾಳ್ಮೆಯಿಂದ ಆಟ ಗೆದ್ದ ಸ್ಪರ್ಧಿ ಯಾರು? ಎನ್ನುವುದನ್ನು ಇಂದಿನ ಎಪಿಸೋಡ್ನಲ್ಲಿ ನೋಡಬೇಕಾಗಿದೆ.
ನಾಮಿನೇಟ್ ಆಗಿ ಲೂಟಿಕೋರರ ಲಿಸ್ಟ್ನಲ್ಲಿದ್ದ ಆಸಿಯಾ, ಸೌಂದರ್ಯಾ, ತಾಂಡವ್, ಲಕ್ಷ್ಮಿ, ಕುಮಾರಿ, ಸೋನಿಕಾ ಮನೆಯ ಮ್ಯೂಸಿಯಂನಲ್ಲಿದ್ದ ವಜ್ರ, ಮೆಡಲ್ ಹಾಗೂ ಕಿರೀಟ ಕದ್ದು ನಕಲಿ ಇಡಬೇಕಿತ್ತು. ಇದಕ್ಕೆ ತಾಂಡವ್ ಮತ್ತು ಸೌಂದರ್ಯ ಭಾರಿ ಮಾಸ್ಟರ್ ಪ್ಲ್ಯಾನ್ ಹಾಕಿಕೊಂಡಿದ್ದರು. ಅದರಂತೆ ಸಕ್ಸಸ್ಫುಲ್ ಆಗಿ ಕದ್ದು ಆಟ ಗೆದ್ದರು. ಅವರ ಈ ಆಟವನ್ನು ನೆಟ್ಟಿಗರು, ವೀಕ್ಷಕರು ಮೆಚ್ಚಿಕೊಂಡು ಶಹಬ್ಬಾಸ್ ಗಿರಿ ಕೊಟ್ಟರು. ಯಾವ ಥ್ರಿಲ್ಲರ್ ಮೂವಿಗಳಿಗೂ ಕಮ್ಮಿ ಇಲ್ಲ ಎಂದಿದ್ದರು.
ಟಾಸ್ಕ್ ಗೆದ್ದ ಲೂಟಿಕೋರರಿಗೆ ಪಜಲ್ ಜೋಡಿಸುವ ಟಾಸ್ಕ್ ನೀಡಲಾಯಿತು. ಕ್ಯಾಪ್ಟನ್ ಪಟ್ಟಕ್ಕೆ ದಾರಿ ಎನ್ನುವ ಪಜಲ್ ಅನ್ನು ಒಬ್ಬರು ಗೈಡ್ ಮಾಡುತ್ತಾ ಮತ್ತೊಬ್ಬರು ಜೋಡಿಸುತ್ತಾ ಕಂಪ್ಲೀಟ್ ಮಾಡಬೇಕಿತ್ತು. ತಾಂಡವ್-ಲಕ್ಷ್ಮಿ, ಸೌಂದರ್ಯಾ-ಆಸಿಯಾ, ಸೋನಿಕಾ-ಕುಮಾರಿ ಜೋಡಿಯಾದರು. ತಾಂಡವ್ ಲಕ್ಷ್ಮಿ ಕೊನೆಯ ಹಂತದಲ್ಲಿದ್ದರು, ಆದರೆ ಸೌಂದರ್ಯಾ ಆಸಿಯಾರ ತಾಳ್ಮೆ ಮತ್ತು ಕೋಆರ್ಡಿನೇಷನ್ನಿಂದ ಕ್ಯಾಪ್ಟನ್ ರೇಸ್ಗೆ ಸೆಲೆಕ್ಟ್ ಆಗಿದ್ದರು. ಸದ್ಯ ಇಬ್ಬರ ಮಧ್ಯೆ ಪೈಪೋಟಿ ಏರಿದ್ದು ಯಾರು ಕ್ಯಾಪ್ಟನ್ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).