ಮುಂಬೈ: ಕರೊನಾದಿಂದ ಗುಣಮುಖರಾಗಿ ಬಂದವರು ತಮ್ಮ ರಕ್ತವನ್ನು ದಾನ ಮಾಡುವ ಮೂಲಕ ಸೋಂಕಿತರ ಉಳಿವಿಗೆ ನೆರವಾಗಿ ಎನ್ನುತ್ತಿದ್ದಾರೆ ಬಾಲಿವುಡ್ ಸ್ಟಾರ್ ನಟರು. ಇತ್ತೀಚೆಗಷ್ಟೇ ಟಾಲಿವುಡ್ ನಟ ಚಿರಂಜೀವಿ ರಕ್ತದಾನ ಮಾಡುವ ಮೂಲಕ ಇತರರಿಗೂ ರಕ್ತದಾನ ಮಾಡುವಂತೆ ಪ್ರೇರೇಪಿಸಿದ್ದರು. ಹೃತಿಕ್ ರೋಷನ್, ಅಜಯ್ ದೇವಗನ್ ಸಹ ರಕ್ತದಾನಕ್ಕೆ ಬೆಂಬಲಿಸಿದ್ದರು. ಇದೀಗ ಆಮೀರ್ ಖಾನ್, ಶಾಹೀದ್ ಕಪೂರ್ ಸಹ ರಕ್ತದಾನದ ಬಗ್ಗೆ ಮಾತನಾಡಿದ್ದಾರೆ. ಸೋಂಕಿತರ ಉಳಿವಿಗೆ ಅದರಿಂದ ಗುಣಮುಖರಾಗಿ ಹೊರಬಂದವರು ರಕ್ತ ನೀಡಿದರೆ ಕರೊನಾದಿಂದ ಗುಣಮುಖರಾಗುವ ಸಾಧ್ಯತೆ ಇದೆ ಎಂದಿದ್ದಾರೆ. (ಏಜೆನ್ಸೀಸ್)