Aamir Khan reportedly exits Ashneer Grover biopic  
ಸಿನಿವಾಣಿ

ಉದ್ಯಮಿ ಅಶ್ನೀರ್ ಗ್ರೋವರ್ ಬಯೋಪಿಕ್ ಸಿನಿಮಾ​ದಲ್ಲಿ ನಟಿಸಲು ಆಮೀರ್​ ಖಾನ್ ಹಿಂದೇಟು!; ಅಸಲಿಗೆ ಕಾರಣವೇನು?..Aamir Khan

ಮಮತಾ

ಪ್ರಮುಖ ಮುಖ್ಯಾಂಶಗಳು

  • ನಿರ್ದೇಶಕ ರಾಹುಲ್ ಮೋದಿ ಅವರೊಂದಿಗೆ ಭಿನ್ನಾಭಿಪ್ರಾಯ, ಬಯೋಪಿಕ್ ಸಿನಿಮಾದಿಂದ ಆಮೀರ್ ಖಾನ್ ಔಟ್.
  • ಅಶ್ನೀರ್ ಪಾತ್ರಕ್ಕಾಗಿ 2-3 ಪ್ರಮುಖ ಯುವ ನಟರೊಂದಿಗೆ ಮಾತುಕತೆ .
  • ಅಶ್ನೀರ್ ಗ್ರೋವರ್ ಪತ್ನಿಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಚಿತ್ರ ನಿರ್ಮಾಣದ ಹೊಣೆ ಹೊತ್ತ ಶ್ರದ್ಧಾ .
Aamir Khan reportedly exits Ashneer Grover biopic: ಬಾಲಿವುಡ್​​ನ ಮಿಸ್ಟರ್​​ ಪರ್ಫೆಕ್ಟ್​ ಆಮೀರ್​ ಖಾನ್​ ಅವರು ಉದ್ಯಮಿ ಅಶ್ನೀರ್ ಗ್ರೋವರ್ ಅವರ ಜೀವನ ಆಧಾರಿತ ಮುಂಬರುವ ಬಯೋಪಿಕ್ ಚಿತ್ರದಿಂದ ಹೊರನಡೆದಿದ್ದಾರೆ ಎನ್ನುವ ಮಾಹಿತಿ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ನಿರ್ಮಾಪಕರೊಂದಿಗಿನ ಕೆಲವು ಕ್ರಿಯೇಟಿವ್ ನಿರ್ದೇಶನದ ಕುರಿತು ಚರ್ಚೆ ನಡೆಸಿದ ನಂತರ ಉಂಟಾದ,​ ಭಿನ್ನಾಭಿಪ್ರಾಯಗಳಿಂದಾಗಿ, ಭಾರತ್​ ಪೇ ಸಹ ಸಂಸ್ಥಾಪಕ ಉದ್ಯಮಿ ಅಶ್ನೀರ್ ಗ್ರೋವರ್ ಅವರ ಜೀವನಾಧಾರಿತ ಸಿನಿಮಾದಲ್ಲಿ ನಟಿಸಲು ಆಮೀರ್ ಖಾನ್​ ಹಿಂದೇಟು ಹಾಕಿದ್ದಾರೆ ಎಂದು ಬಾಲಿವುಡ್​ ಹಂಗಾಮಾ ವರದಿ ಮಾಡಿದೆ.
ಸಿನಿಮಾದಲ್ಲಿ ನಟಿಸುತ್ತಿರುವ ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ಅವರು ಇಲ್ಲಿ ನಾಯಕಿ ಮಾತ್ರವಲ್ಲದೇ ಸಿನಿಮಾದ ಪ್ರೊಡಕ್ಷನ್​​​ ಕೆಲಸವನ್ನು ಹೊತ್ತಿಕೊಂಡಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ರಾಹುಲ್ ಮೋದಿ ನಿರ್ದದೇಶಿಸಲಿದ್ದಾರೆ ಎನ್ನಲಾಗಿದೆ.

ಆಮಿರ್ ನಿರ್ಗಮನ

ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ನವನಿರ್ದೇಶಕ ರಾಹುಲ್ ಮೋದಿ ಅವರೊಂದಿಗೆ ಸೇರಿ ಸ್ಟಾರ್ಟ್‌ಅಪ್ ಉದ್ಯಮಿ ಅಶ್ನೀರ್ ಗ್ರೋವರ್ ಅವರ ಜೀವನಾಧಾರಿತ ಚಿತ್ರ ಮಾಡಲು ಆಮಿರ್ ಖಾನ್ ಮುಂದಾಗಿದ್ದರು. ಅಶುತೋಷ್ ಗೋವಾರಿಕರ್ ಅವರ ಪೀರಿಯಡ್ ಡ್ರಾಮಾ ಚಿತ್ರದ ಕೆಲಸ ಮುಗಿದ ನಂತರ, ಮಾರ್ಚ್ 2027 ರಲ್ಲಿ ಈ ಬಯೋಪಿಕ್‌ನ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿತ್ತು.
​ಆಮಿರ್ ಖಾನ್‌ಗೆ ಸ್ಟಾರ್ಟ್‌ಅಪ್ ಪ್ರಪಂಚದ ಬಗ್ಗೆ ಅಪಾರ ಆಸಕ್ತಿಯಿದ್ದು, ಈ ಪಾತ್ರವನ್ನು ಅತ್ಯಂತ ಶ್ರದ್ಧೆಯಿಂದ ಪೋಷಿಸಲು ಸ್ಕ್ರಿಪ್ಟ್ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಆದರೆ, ಅಂತಿಮವಾಗಿ ನಿರ್ದೇಶಕ ರಾಹುಲ್ ಮೋದಿ ಅವರೊಂದಿಗೆ ಸೃಜನಶೀಲ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ ಹಿನ್ನೆಲೆಯಲ್ಲಿ ಇಬ್ಬರೂ ಪರಸ್ಪರ ಒಪ್ಪಂದದೊಂದಿಗೆ ದೂರವಾಗಲು ನಿರ್ಧರಿಸಿದ್ದಾರೆ.

ನಟನಿಗಾಗಿ ಹುಡುಕಾಟ

ಸಿನಿಮಾದಿಂದ ಆಮೀರ್​ ಖಾನ್​ ಅವರು ಹೊರನಡೆದ ನಂತರ ನಿರ್ದೇಶಕ ರಾಹುಲ್ ಮೋದಿ ಮತ್ತು ನಟಿ ಶ್ರದ್ಧಾ ಕಪೂರ್ ಜಂಟಿಯಾಗಿ ಅಶ್ನೀರ್ ಗ್ರೋವರ್ ಪಾತ್ರಕ್ಕೆ ಸೂಕ್ತವಾದ ಯುವ ನಟನ ಹುಡುಕಾಟವನ್ನು ನಡೆಸುತ್ತಿದ್ದಾರೆ.
ಉದ್ಯಮದ ಇಬ್ಬರು-ಮೂವರು ಪ್ರಮುಖ ಯುವ ನಟರೊಂದಿಗೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ನಟರ ಆಯ್ಕೆ ಅಂತಿಮಗೊಳ್ಳಲಿದೆ.

ನಿರ್ಮಾಪಕಿಯಾಗಿ ಹೊರಹೊಮ್ಮಲಿರುವ ಶ್ರದ್ಧಾ

ಸಿನಿಮಾದಲ್ಲಿ ಶ್ರದ್ಧಾ ಕಪೂರ್​ ಅವರು ನಟಿಯಾಗಿ ಮಾತ್ರವಲ್ಲದೇ ಇದರ ಮೂಲಕ ನಿರ್ಮಾಪಕಿಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಪ್ರಮುಖ . ಸಿನಿಮಾದಲ್ಲಿ ಶ್ರದ್ಧಾ, ಅಶ್ನೀರ್ ಗ್ರೋವರ್ ಅವರ ಪತ್ನಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ, (ಏಜೆನ್ಸೀಸ್).