ಸಿನಿವಾಣಿ

'Aakasamlo Oka Tara' X ರಿವ್ಯೂ; ಫೀಲ್​​ ಗುಡ್​​​ ಸಿನಿಮಾ, ದುಲ್ಕರ್ ಸಲ್ಮಾನ್, ಸಾತ್ವಿಕಾ ನಟನೆಗೆ ಫಿದಾ ಆದ ವೀಕ್ಷಕರು

  • ಪವನ್ ಸಾಧಿನೇನಿ ನಿರ್ದೇಶನದ 'ಆಕಾಶಂಲೋ ಒಕ ತಾರ' ರಿಲೀಸ್, ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತ.

  • ಶ್ರುತಿ ಹಾಸನ್, ರುಹಾನಿ ಶರ್ಮಾ, ದುಲ್ಕರ್, ಸಾತ್ವಿಕಾ ನಟನೆಯ ಸಿನಿಮಾ.

  • ಭಾರತದ ಸಿನಿಮಾ ಮಂದಿರದಲ್ಲಿ ಅಪ್ಪ ಮಮ್ಮುಟಿ-ಮಗ ದುಲ್ಕರ್ ಸಲ್ಮಾನ್ ಸಿನಿಮಾ ಅಬ್ಬರ.

  • ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತ..ಥಿಯೇಟರ್​ನಲ್ಲಿ ಮಸ್ಟ್ ವಾಚ್ ಸಿನಿಮಾ ಎಂದ ಸಿನಿ ಪ್ರೇಮಿಗಳು.

Aakasamlo Oka Tara: ಪವನ್ ಸಾಧಿನೇನಿ ನಿರ್ದೇಶನದ 'ಆಕಾಶಂಲೋ ಒಕ ತಾರ' ರಿಲೀಸ್​ ಆಗಿದ್ದು, ಈಗಾಗಲೇ ಸಿನಿಮಾ ವೀಕ್ಷಿಸಿರುವ ಸಿನಿ ಪ್ರೇಮಿಗಳು ದುಲ್ಕರ್ ಸಲ್ಮಾನ್ ಮತ್ತು ಸಾತ್ವಿಕಾ ವೀರವಲ್ಲಿ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೇ ಕತೆಯ ನಿರೂಪಣೆ ತುಂಬಾನೆ ಸ್ಲೋ ಇದೆ. ಕೆಲವರು ಸಿನಿಮಾಕ್ಕೆ ಈಗಾಗಲೇ 5ಕ್ಕೆ 3.75 ರೇಟಿಂಗ್ ಕೊಟ್ಟಿದ್ದಾರೆ. ಫೀಲ್​ ಗುಡ್​ ಸಿನಿಮಾ ಎನ್ನುವ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಸೀತಾ ರಾಮಮ್​​ ನಂತರ ಐ ಆಮ್ ಗೇಮ್, ಕಾಂತ, ಲೋಕ: ಚಾಪ್ಟರ್ 1 - ಚಂದ್ರ ಸಿನಿಮಾಗಳಿಂದ ಇತ್ತೀಚೆಗೆ ಮತ್ತೆ ಸಿನಿಮಾ ರಂಗದಲ್ಲಿ ಮಿಂಚಿದ್ದ ಮಲಯಾಳಂ ನಟ ದುಲ್ಕರ್ ಸಲ್ಮಾನ್​​​​ ಸದ್ಯ ಆಕಾಶಂಲೋ ಒಕ ತಾರ ಸಿನಿಮಾದ ಮೂಲಕ ಅಬ್ಬರಿಸಲು ರೆಡಿಯಾಗಿದ್ದಾರೆ.

ಪವನ್ ಸಾಧಿನೇನಿ ನಿರ್ದೇಶನದ ಆಕಾಶಂಲೋ ಒಕ ತಾರ ಸೈನ್ಸ್ ಫಿಕ್ಷನ್ ಡ್ರಾಮಾದಲ್ಲಿ ದುಲ್ಕರ್ ಸಲ್ಮಾನ್ ಜೊತೆಗೆ ಸಾತ್ವಿಕಾ ವೀರವಲ್ಲಿ ನಟಿಸಿದ್ದಾರೆ. ಶ್ರುತಿ ಹಾಸನ್, ರುಹಾನಿ ಶರ್ಮಾ ಮತ್ತು ಸ್ವಾಸಿಕ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾ ನೋಡಿದ ವೀಕ್ಷಕರು ಏನೆಲ್ಲ ಕಾಮೆಂಟ್ ಮಾಡಿದ್ದಾರೆ, ಅವರ ರೇಟಿಂಗ್ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.

ನೆಟ್ಟಿಗರ ವಿಮರ್ಶೆ ಹೀಗಿದೆ

ಹೃದಯವಂತಿಕೆಯುಳ್ಳ ಒಂದು ಸಾಧಾರಣ ಫೀಲ್ ಗುಡ್ ಸಿನಿಮಾ. ಇದೊಂದು ಸರಳ ಮತ್ತು ನೇರವಾದ ಸ್ಫೂರ್ತಿದಾಯಕ ಕಥೆಯಾಗಿದ್ದು, ಊಹಿಸಬಹುದಾದರೂ ಬಹುತೇಕ ಭಾಗ ಆಕರ್ಷಕವಾಗಿ ಸಾಗುತ್ತದೆ. ಹೃದಯಸ್ಪರ್ಶಿ ಸೀನ್​ಗಳಿವೆ. ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಸುಲಭವಾಗಿ ತಿಳಿಯುವುದರಿಂದ ದ್ವಿತೀಯಾರ್ಧದ ಮಧ್ಯಭಾಗದಲ್ಲಿ ನಿಧಾನಗತಿಯಲ್ಲಿ ಸಿನಿಮಾ ಸಾಗುತ್ತದೆ ಎನಿಸುವ ಭಾವನೆ ಮೂಡುತ್ತದೆ.

ಈ ಸಿನಿಮಾದ ಅತಿದೊಡ್ಡ ನ್ಯೂನತೆ ಅಂದ್ರೆ, ಅದು ತುಂಬಾ ಸುರಕ್ಷಿತವಾಗಿ ಸಾಗುತ್ತೆ. ಪರಿಚಿತ ದೃಶ್ಯಗಳು ಮತ್ತೆ ಬಳಕೆಯಾಗಿರುವಂತೆ ಎನಿಸುತ್ತದೆ. ನಟನೆಯ ವಿಚಾರದಲ್ಲಿ ದುಲ್ಕರ್ ಮತ್ತೊಮ್ಮೆ ಪ್ರಾಮಾಣಿಕವಾಗಿ ಜೀವಂತ ಎನಿಸುತ್ತದೆ. ನಟಿ ಸಾತ್ವಿಕಾ ವೀರವಲ್ಲಿ ಉತ್ತಮ ಆಯ್ಕೆ, ಮುಂದೆ ಗಮನಿಸಬೇಕಾದ ಪ್ರತಿಭೆ ಅನ್ನೋದ್ರಲ್ಲಿ ಅನುಮಾನ ಇಲ್ಲ. ಜಿ.ವಿ. ಪ್ರಕಾಶ್ ಅವರ ಸಂಗೀತ ಕೂಡ ಸಿನಿಮಾಗೆ ಚೆನ್ನಾಗಿ ಕೆಲಸ ಮಾಡಿದೆ ಎಂದು ವೆಂಕಿ ರಿವ್ಯೂ ಎಂಬ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಸಿನಿಮಾಕ್ಕೆ 2.7 ರೇಟಿಂಗ್ ಕೊಟ್ಟಿದ್ದಾರೆ.

ಮತ್ತೊಬ್ಬ ವೀಕ್ಷಕರು, ಆಕಾಶಂಲೋ ಒಕ ತಾರ ಚಿತ್ರವು ಕನಸುಗಳು, ಹೋರಾಟಗಳು ಮತ್ತು ಭಾವನೆಗಳ ಸುತ್ತ ಹೆಣೆಯಲಾದ ಸ್ಫೂರ್ತಿದಾಯಕ ಪಯಣ ಎಂದು ವಿವರಿಸಿದ್ದಾರೆ. ದುಲ್ಕರ್ ಸಲ್ಮಾನ್ ಮತ್ತು ಶ್ರುತಿ ಹಾಸನ್ ನಡುವಿನ ಕೆಮಿಸ್ಟ್ರಿಯನ್ನೂ ಆ ವಿಮರ್ಶೆ ಎತ್ತಿ ತೋರಿಸಿದೆ. ತಾಂತ್ರಿಕವಾಗಿಯೂ ಸಿನಿಮಾ ಗಟ್ಟಿಯಾಗಿದೆ. ಒಟ್ಟಾರೆಯಾಗಿ, ಉತ್ತಮ ನಟನೆ, ಕಥೆ ಹೇಳುವ ಶೈಲಿ ಹಾಗೂ ಭಾವನೆ ಮತ್ತು ಸ್ಫೂರ್ತಿಯ ಸುಂದರ ಮಿಶ್ರಣವಿರುವ ಸೊಗಸಾದ ಫೀಲ್-ಗುಡ್ ಸಿನಿಮಾ ಎಂದಿದ್ದಾರೆ!

ದುಲ್ಕರ್ ಸಲ್ಮಾನ್ ಮತ್ತು ಸಾತ್ವಿಕಾ ಚಂದ

ಮತ್ತೊಂಬ್ಬರು ಚಿತ್ರಕ್ಕೆ 5ಕ್ಕೆ 3.75 ರೇಟಿಂಗ್ ನೀಡಿದ್ದಾರೆ. ದ್ವಿತೀಯಾರ್ಧದಲ್ಲಿ ಕೆಲವು ಏರಿಳಿತಗಳಿದ್ದರೂ, ವೀಕ್ಷಕರು ನಟನೆ ಮತ್ತು ಪವನ್ ಸಾಧಿನೇನಿ ಅವರ ಕತೆ ಚೆನ್ನಾಗಿದೆ. ದುಲ್ಕರ್​ ಹಾಗೂ ಸಾತ್ವಿಕಾ ನಟನೆ ತುಂಬಾ ಚೆನ್ನಾಗಿದೆ. ಚಿತ್ರವು ನಿಧಾನಗತಿಯಲ್ಲಿ ಸಾಗುತ್ತದೆಯಾದರೂ ಚೆನ್ನಾಗಿದೆ. ಕೆಲವೊಂದು ಸೀನ್​ಗಳು ಮುಂದೇನಾಗುತ್ತದೆ ಎಂದು ಹೇಳುತ್ತದೆ. ಸಿನಿಮಾದ ಅವಧಿಯನ್ನು ಇನ್ನಷ್ಟು ಕಡಿಮೆ ಮಾಡಬಹುದಿತ್ತು. ಶ್ರುತಿ ಹಾಸನ್, ರುಹಾನಿ ಮತ್ತು ಸ್ವಾಸಿಕ ತಮಗೆ ನೀಡಿದ ಪಾತ್ರಗಳನ್ನು ಪರಿಪೂರ್ಣವಾಗಿ ನಿಭಾಯಿಸಿದ್ದಾರೆ. ನಿಧಾನಗತಿಯ ಫೀಲ್ ಗುಡ್ ಸಿನಿಮಾ ಎನ್ನಲಾಗಿದೆ.

ದುಲ್ಕರ್​ಗಾಗಿ ಸಿನಿಮಾ ನೋಡ್ಬಹುದು

ದುಲ್ಕರ್ ಸಲ್ಮಾನ್ ಅವರ ನಟನೆಗಾಗಿ ಸಿನಿಮಾ ನೋಡಬಹುದು. ಚಿತ್ರದ ಕಥಾಹಂದರದಲ್ಲಿ ಹೊಸತನದ ಕೊರತೆಯಿದೆ. ಸಾತ್ವಿಕಾ ವೀರವಲ್ಲಿ ನಟನೆ ಚೆನ್ನಾಗಿದೆ. ಜಿ.ವಿ. ಪ್ರಕಾಶ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವು ಚಿತ್ರದುದ್ದಕ್ಕೂ ಆಸಕ್ತಿಯನ್ನು ಉಳಿಸಿಕೊಳ್ಳುತ್ತದೆ ಎನ್ನಲಾಗಿದೆ.

ಆಕಾಶಂ ಲೋ ಒಕ ತಾರಾ ಸಿನಿಮಾವು ಒಂದು ಶುದ್ಧ, ಸರಳ ಡ್ರಾಮಾ ಆಗಿದ್ದು, ಅತ್ಯುತ್ತಮ ನಟನೆಯಿಂದಾಗಿ ಇದು ಯಶಸ್ವಿಯಾಗಿದೆ. ಕಾದಂಬರಿಯಂತೆ ಒಂದೊಂದಾಗಿ ಬಿಚ್ಚಿಕೊಳ್ಳುತ್ತದೆ. ದೊಡ್ಡ ತಿರುವುಗಳ ಕಡೆಗೆ ಧಾವಿಸುವ ಬದಲು, ಸಣ್ಣ ಸಂವಹನಗಳು ಮತ್ತು ಅನುಭವದ ವಿವರಗಳ ಮೂಲಕ ತನ್ನ ಆಳವನ್ನು ತೋರಿಸುತ್ತಾ ಕಥೆಯು ನಿಮ್ಮೊಳಗೆ ಇಳಿಯುವಂತೆ ಮಾಡುತ್ತದೆ. ಸಿನಿಮಾ ನೋಡಿದಂತೆ ಅನ್ನಿಸುವುದಕ್ಕಿಂತ ಹೆಚ್ಚಾಗಿ ಪುಸ್ತಕದ ಪುಟಗಳನ್ನು ತಿರುವಿದಂತಿದಂತೆ ಭಾಸವಾಗುತ್ತೆ.

ಅಪ್ಪ-ಮಗನ ಸಿನಿಮಾ ಒಂದೇ ದಿನ ರಿಲೀಸ್

ದುಲ್ಕರ್ ಸಲ್ಮಾನ್ ಅಭಿನಯದ ತೆಲುಗು ಚಿತ್ರ 'ಆಕಾಶಂಲೋ ಒಕ ತಾರ' ಇಂದು ಬಿಡುಗಡೆಯಾಗಿದೆ. ಇದೇ ದಿನ ಅವರ ತಂದೆ ಮಮ್ಮುಟ್ಟಿ ನಟಿಸಿರುವ 'ಓಂ' ಸಿನಿಮಾ ಕೂಡ ರಿಲೀಸ್ ಆಗಿದೆ.ಒಂದೇ ದಿನ ಅಪ್ಪ-ಮಗನ ಸಿನಿಮಾ ಬಿಡುಗಡೆಯಾಗಿರೋದು ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಎರಡು ಸಿನಿಮಾಗಳಲ್ಲಿ ಜನ ಮೆಚ್ಚಿಕೊಳ್ಳುವ ಸಿನಿಮಾ ಯಾವುದು, ಬಾಕ್ಸ್ ಆಫೀಸ್‌ನಲ್ಲಿ ಯಾವ ಸಿನಿಮಾ ಭರ್ಜರಿ ಗಳಿಕೆ ಕಾಣುತ್ತೆ ಅನ್ನೋದನ್ನ ಕಾದು ನೋಡಬೇಕು, (ಏಜೆನ್ಸೀಸ್).