ಸಿನಿವಾಣಿ

ಹಿರಿಯ ನಟಿ ಕವಿತಾರ ಮಗ ಕರೊನಾಗೆ ಬಲಿ, ಪತಿಯ ಸ್ಥಿತಿ ಗಂಭೀರ

ಚೆನ್ನೈ: ಮಹಾಮಾರಿ ಕರೊನಾಗೆ ಬಹುಭಾಷಾ ನಟಿ ಕವಿತಾ ಅವರ ಪುತ್ರ ಬಲಿಯಾಗಿದ್ದಾರೆ. ಅವರ ಗಂಡನಿಗೂ ಕರೊನಾ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಕನ್ನಡ, ತೆಲಗು, ತಮಿಳು ಮತ್ತು ಮಲಯಾಳಂ ಸಿನಿಮಾ ನಟಿ ಕವಿತಾ ಅವರ ಮಗ ಸಂಜಯ್​ ರೂಪ್​ ಕೆಲ ದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಕರೊನಾ ಟೆಸ್ಟ್​ ಮಾಡಿಸಿದಾಗ ವರದಿ ಪಾಸಿಟಿವ್​ ಬಂದಿತ್ತು. ಹಾಗಾಗಿ ಮನೆಯಲ್ಲೇ ಕ್ವಾರಂಟೈನ್​ ಆಗಿದ್ದರು. ಇತ್ತೀಚಿಗೆ ಆರೋಗ್ಯ ಸ್ಥಿತಿ ಗಂಬೀರವಾಗಿದ್ದು, ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮಂಗಳವಾರ ಕೊನೆಯುಸಿರೆಳೆದರು.

ಇತ್ತ ಕವಿತಾರ ಪತಿ ದಶರಥ್ ರಾಜ್​ಗೂ ಕರೊನಾ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಕವಿತಾರ ಮಗನ ಸಾವಿಗೆ ಚಿತ್ರರಂಗ ಕಂಬನಿ ಮಿಡಿದಿದೆ.

1971ರಿಂದ ಸಿನಿಮಾ ಜರ್ನಿ ಆರಂಭಿಸಿದ ನಟಿ ಕವಿತಾ, ತೆಲಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ 300ಕ್ಕೂ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.