ಸಿನಿವಾಣಿ

ಬಾಲಿವುಡ್​ನ ಹಿರಿಯ ನಟ ದಿಲೀಪ್ ಕುಮಾರ್​ ನಿಧನ

arunakunigal

ಮುಂಬೈ: ಬಾಲಿವುಡ್​ನ ಹಿರಿಯ ನಟ ದಿಲೀಪ್ ಕುಮಾರ್​(98) ಬುಧವಾರ ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ದಿಲೀಪ್​ ಕುಮಾರ್​ ಅವರ ಆರೋಗ್ಯ ಸ್ಥಿತಿ ಕಳೆದ ವಾರ ಗಂಭೀರವಾಗಿತ್ತು. ಜೂ.30ರಂದು ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

1922ರ ಡಿಸೆಂಬರ್​ 11ರಂದು ಜನಿಸಿದ್ದ ದಿಲೀಪ್​, ತನ್ನ 98ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಇವರ ಮೊದಲ ಹೆಸರಲು ಮಹಮ್ಮದ್​ ಯೂಸೂಫ್​ ಖಾನ್​. ಇವರ ಪತ್ನಿ ಹೆಸರು ಸಾಯಿರಾ ಬಾನು.

ಫಿಲಂ ಫೇರ್​ ಪ್ರಶಸ್ತಿ ಆರಂಭವಾದಾಗ ಅದನ್ನು ಪಡೆದ ಮೊದಲ ನಟ ದಿಲೀಪ್​ ಕುಮಾರ್​. 1944ರಲ್ಲಿ ಜ್ವರ್​ ಭಾತ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಕೊಟ್ಟ ದಿಲೀಪ್​ ಕುಮಾರ್​ ಅವರು ಸಂದಾಜ್​, ದಾಗ್​, ಆಜಾದದ್​, ಶಕ್ತಿ, ಕ್ರಾಂತಿ, ಮಘಲ್​ ಎ ಅಜಮ್​, ದೇವದಾಸ್​.. ಮುಂತಾದ ಸಿನಿಮಾಗಳಲ್ಲಿ ನಟಿ ಅಭಿಮಾನಿಗಳ ಮನ ಗೆದ್ದಿದ್ದರು.