ಕಾಫಿ ವಿತ್ ಕರಣ್ ಜೋಹರ್ ಟಾಕ್ ಶೋ ನಂತರ ಒಟ್ಟಾಗಿ ಕಾಣಿಸಿಕೊಂಡ ವಿಜಯ್-ರಶ್ಮಿಕಾ.
ಜಪಾನ್‌ನಲ್ಲಿ ಆತ್ಮೀಯವಾಗಿ ತೆಗೆಸಿಕೊಂಡ ಫೋಟೋಗಳು ವೈರಲ್.
ವಿವಾದದ ಬಳಿಕ ಟ್ರೋಲರ್ಸ್ಗಳಿಗೆ ಟಾಂಗ್ ಕೊಟ್ರ ವಿಜಯ್-ರಶ್ಮಿಕಾ ಜೋಡಿ.
Vijay- Rashmikas Japan: 'ಕಾಫಿ ವಿತ್ ಕರಣ್ ಜೋಹರ್ ಟಾಕ್ ಶೋ' ನಂತರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿರುದ್ಧ ವಿವಾದಾತ್ಮಕ ಪೋಸ್ಟ್ಗಳು ವೈರಲ್ ಆಗಿದ್ದವು. ಜೊತೆಗೆ ಅನನ್ಯಾ ಪಾಂಡೆಯೊಂದಿಗೆ ವಿಜಯ್ ಅವರಿಗಿದ್ದ ಸಲುಗೆ, ರಶ್ಮಿಕಾ ಅವರೊಂದಿಗೆ ಇಲ್ಲ ಎನ್ನುವ ಟೀಕೆ ಕೇಳಿಬಂದ ಬೆನ್ನಲ್ಲೇ, ಜಪಾನ್ ಪ್ರವಾಸದಲ್ಲಿ, ವಿಜಯ್ ಅವರು ರಶ್ಮಿಕಾ ಮೂಗಿನ ಮೇಲೆ ಮುತ್ತಿಡುತ್ತಿರುವ ಫೋಟೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ವಿವಾಹದ ಬಳಿಕ ಬಂದಿರುವ ಮೊದಲ ದೀಪಾವಳಿ ಹಬ್ಬದ ಪ್ರಯುಕ್ತ ವಿಜಯ್ ದೇವರಕೊಂಡ ಕುಟುಂಬವು ಜಪಾನ್ ಪ್ರವಾಸಕ್ಕೆ ತರಳಿದ್ದಾರೆ. ಇಬ್ಬರು ಏರ್ಪೋರ್ಟ್ನಲ್ಲಿ ಆತ್ಮೀಯವಾಗಿ ಕಾಣಿಸಿಕೊಂಡಿರುವುದು ಎಲ್ಲೆಡೆ ವೈರಲ್ ಆಗಿತ್ತು. ಸದ್ಯ ಇಬ್ಬರು ಒಟ್ಟಾಗಿ, ಆತ್ಮೀಯವಾಗಿ ಕಾಣಿಸಿಕೊಂಡಿರುವ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿವೆ.
ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ವಿಡಿಯೋ ಹಂಚಿಕೊಂಡಿದ್ದು, ದೀಪಾವಳಿ ಹಬ್ಬಕ್ಕೆ ತಮ್ಮ ಫ್ಯಾನ್ಸ್ಗೆ ಶುಭಾಷಯ ಕೋರಿದ್ದಾರೆ. 'ನಮ್ಮ ಕುಟುಂಬಸ್ಥರ ಪರವಾಗಿ ನಿಮ್ಮೆಲ್ಲರಿಗೂ ಹ್ಯಾಪೀ ದೀಪಾವಳಿ ನೀವು ಮಾಡುವ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವಿಷಯಗಳಲ್ಲಿ ನಿಮಗೆ ಸಂತೋಷ ಸಿಗಲಿ, ನಿಮಗೆ ಯಾವಾಗಲೂ ಉತ್ತಮ ಆರೋಗ್ಯ, ಸಾಕಷ್ಟು ಸಂತೋಷ ಮತ್ತು ಅಂತ್ಯವಿಲ್ಲದ ಪ್ರೀತಿ ಸಿಗಲಿ' ಎಂದು ಹಾರೈಸುತ್ತೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ವಿಜಯ್ ಕುಟುಂಬವು ಹಬ್ಬದ ಸಂಭ್ರಮಕ್ಕಾಗಿ ಜಪಾನ್ ತೆರಳಿದೆ. ಈ ಬಗ್ಗೆ ಸ್ಪಷ್ಟಪಡಿಸಿದ್ದು ವಿಜಯ್ ದೇವರಕೊಂಡ, ತಮ್ಮ ಪೋಸ್ಟ್ನಲ್ಲಿ 'ಜಪಾನ್ನಲ್ಲಿಯೇ ಸನಾತನ ಸಂಸ್ಕೃತಿಯ ಗೋಮಾ ಮಾಡಿಕೊಳ್ಳಲು ದಾರಿ ಸಿಕ್ಕಾಗ' ಎಂದು ಬರೆದುಕೊಂಡು, ದೇವರಕೊಂಡ ಕುಟುಂಬದವರಿಂದ ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಷಯ ಎಂದು ಹೇಳಿದ್ದಾರೆ
ಕಾಫಿ ವಿತ್ ಕರಣ್ ಜೋಹರ್ ಟಾಕ್ ಶೋ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಈ ಜೋಡಿ ಕಾಣಿಸಿಕೊಂಡಿದೆ. ಏರ್ಪೋರ್ಟ್ನಲ್ಲಿ ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರನ್ನು ಹಿಡಿದೆಳೆದು ಭುಜಕ್ಕೆ ಕೈ ಹಾಕಿದ್ದ ವಿಡಿಯೋವು ಸಾಕಷ್ಟು ಸಂಚಲನವನ್ನು ಸೃಷ್ಟಿಸಿತ್ತು. ವಿವಾದದ ಬಳಿಕ ಇಬ್ಬರ ಫೋಟೋ ಶೂಟ್ ವಿಧಾನವು ಬದಲಾಗಿದಎ ಎಂದು ಹೇಳಲಾಗುತ್ತಿದೆ.
ಕಾಫಿ ವಿತ್ ಕರಣ್ ಜೋಹರ್ ಟಾಕ್ ಶೋದಲ್ಲಿ ವಿಜಯ್ ದೇವರಕೊಂಡ ಅವರು, 'ರಶ್ಮಿಕಾ ತಮಗೆ ನೂರು ಬಾರಿ ಮದುವೆಯಾಗುತ್ತೀಯಾ' ಎಂದು ಕೇಳಿದ್ದಳು ಎಂದರು. ಇದಕ್ಕೆ ರಶ್ಮಿಕಾ 'ಇಲ್ಲ ಇಡೀ ವರ್ಷ ಕೇಳಿದ್ದೆ' ಎನ್ನುವ ಒಂದು ಮಾತು ಇಡೀ ಸೋಶಿಯಲ್ ಮೀಡಿಯಾವನ್ನು ಕೆರಳಿಸಿತ್ತು. ವಿಜಯ್ ಹೀಗೆ ಮಾತನಾಡಿದ್ದು ಸರಿಯಲ್ಲ. ಅವರಿಗೆ ಅನನ್ಯಾ ಪಾಂಡೆ ಮೇಲೆ ಪ್ರೇಮವಿದೆ. ಆಕೆಯೊಟ್ಟಿಗೆ ಇದ್ದಂತೆ ರಶ್ಮಿಕಾ ಅವರೊಂದಿಗೆ ಇಲ್ಲ. ರಶ್ಮಿಕಾ ಅವರಿಗೆ ಅನ್ಯಾಯವಾಗಿದೆ ಎಂಬೆಲ್ಲ ಕಾಮೆಂಟ್ಗಳು ಕೇಳಿಬಂದಿದ್ದವು. ಸದ್ಯ ಆ ಬೆನ್ನಲ್ಲೇ ನೆಟ್ಟಿಗರಿಗೆ ಟಾಂಗ್ ಕೊಡಲು ಹೀಗೆ ನಡೆದುಕೊಂಡ್ರಾ ಎನ್ನುವ ಮಾತುಗಳು ಕೇಳಿ ಬರುತ್ತಿದೆ, (ಏಜೆನ್ಸೀಸ್).