ಬೆಂಗಳೂರು: ಮೂಲತಃ ತುಮಕೂರು ಜಿಲ್ಲೆಯ ನಟಿ ಪ್ರಕೃತಿ ಸೌಂದರ್ಯ ಮೊದಲಿಗೆ ಗಾಯಕಿಯಾಗಿ, ರಂಗಭೂಮಿ ಕಲಾವಿದೆಯಾಗಿ ಗುರುತಿಸಿಕೊಂಡವರು. ಬಳಿಕ ಕನ್ನಡದ ‘ಕನ್ಯಾದಾನ’ ಹಾಗೂ ‘ಗೀತಾ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಮುಂದೆ ಇವರಿಗೆ ‘ಭೀಮ’ ಚಿತ್ರದಲ್ಲಿ ಡ್ರಾೃಗನ್ ಮಂಜು ಪತ್ನಿ ಪಾತ್ರಕ್ಕೆ ಅವಕಾಶ ದೊರೆಯಿತು. ಆ ಪಾತ್ರದಲ್ಲಿ ಮಿಂಚಿದ ಬಳಿಕ ಇದೀಗ ಕನ್ನಡದ ದೊಡ್ಡ ಸಿನಿಮಾಕ್ಕೆ ಅವಕಾಶ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರಕೃತಿ, ‘ಮೊದಲಿಗೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಇದೀಗ, ಆ ಪಾತ್ರಗಳೇ ನನ್ನನ್ನು ಇಲ್ಲಿಯವರೆಗೆ ಕರೆತಂದಿವೆ. ಸದ್ಯ ನಾನು ವಶಿಷ್ಠ ಸಿಂಹ ಅವರ ಮುಂದಿನ ಸಿನಿಮಾಕ್ಕೆ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದೇನೆ. ಸಿನಿಮಾದ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟುಕೊಡುವಂತಿಲ್ಲ. ಅಲ್ಲದೇ ತೆಲುಗು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದೇನೆ. ಟಾಲಿವುಡ್ ಚಿತ್ರತಂಡದಿಂದ ಅಧಿಕೃತವಾಗಿ ಅನೌನ್ಸ್ ಆದರೆ ನಾನು ಆ ಸಿನಿಮಾ ಬಗ್ಗೆ ಮಾತನಾಡಬಹುದು. ಸಣ್ಣ ಪಾತ್ರವಾದರೂ ಗಟ್ಟಿ ರೋಲ್ ಆಗಿದ್ದರೆ ಚಂದ. ಉತ್ತಮ ಪಾತ್ರಗಳ ಮೂಲಕ ಗುರುತಿಸಿಕೊಳ್ಳಬೇಕೆಂಬ ಆಸೆಯಿದೆ’ ಎಂದು ಮಾಹಿತಿ ನೀಡುತ್ತಾರೆ.
ದಿನಕ್ಕೆ ಐದು ತಾಸು ವರ್ಕೌಟ್: ನಟಿ ಪ್ರಕೃತಿ ದೈನಂದಿನ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡಿದ್ದಾರೆ. ನಿತ್ಯ ಐದು ತಾಸು ವರ್ಕೌಟ್ ಮಾಡುತ್ತಾರಂತೆ. ಈ ಬಗ್ಗೆ ಅವರು, ‘ಬೆಳಗ್ಗೆ ಐದಕ್ಕೆ ಬೇಗ ಎದ್ದು ಮೊದಲು ಒಂದು ತಾಸು ಯೋಗಾಭ್ಯಾಸ ಮಾಡುತ್ತೇನೆ. ಬಳಿಕ ಜಿಮ್‌ಗೆ ತೆರಳಿ ಅಲ್ಲಿ ವರ್ಕೌಟ್ ಮಾಡುತ್ತೇನೆ. ನನಗೆ ಕುದುರೆ ಸವಾರಿ ಅಂದರೆ ಇಷ್ಟ. ಹೀಗಾಗಿ ಸಂಜೆ ಹಾರ್ಸ್ ರೈಡಿಂಗ್ ಕೂಡ ಕಲಿಯುತ್ತಿದ್ದೇನೆ. ಉಳಿದ ಸಮಯದಲ್ಲಿ ಡಾನ್ಸ್ ಪ್ರಾಕ್ಟೀಸ್ ಮಾಡುತ್ತೇನೆ’ ಎನ್ನುತ್ತಾರೆ. ಇನ್ನು ಜಂಕ್‌ುಡ್‌ಗಳಿಂದ ದೂರ ಇರುವ ಇವರು ಸಸ್ಯಾಹಾರಕ್ಕೆ ಹೆಚ್ಚು ಒತ್ತು ನೀಡುತ್ತಾರಂತೆ.