ಬೆಂಗಳೂರು: ಮಹಾಮಾರಿ ಕರೊನಾ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂನಂತೆ ರಾಜ್ಯಾದಂತ ಇಂದು(ಏ.27) ರಾತ್ರಿ 9ರಿಂದ 14 ದಿನ ಕರ್ನಾಟಕ ಲಾಕ್ ಆಗಲಿದ್ದು, ಲಕ್ಷಾಂತರ ಮಂದಿ ಬೆಂಗಳೂರಿಂದ ಸ್ವಗ್ರಾಮದತ್ತ ಗಂಟು ಮೂಟೆ ಕಟ್ಟಿಕೊಂಡು ಹೊರಟರು. ಸೋಮವಾರ ರಾತ್ರಿಯಿಂದಲೇ ಸಾವಿರಾರು ಮಂದಿ ಬಸ್, ರೈಲು ನಿಲ್ದಾಣದ ಬಳಿ ಜಮಾಯಿಸಿದ್ದರು. ಮಂಗಳವಾರ ಹಲವರು ಆಟೋ, ಕಾರು, ಟ್ರ್ಯಾಕ್ಟರ್, ಟೆಂಪೋ, ಬೈಕ್ಗಳಲ್ಲಿ ಲಗೇಜು ತುಂಬಿಕೊಂಡು ಆತಂಕದಲ್ಲೇ ಊರು ಬಿಟ್ಟರು. ಇದಕ್ಕೆ ಸಾಕ್ಷೀಕರಿಸುವ ದೃಶ್ಯಗಳು ವಿಜಯವಾಣಿ ಫೋಟೋಗ್ರಾಫರ್ ರಾಘವೇಂದ್ರ ಸಿ. ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.