ಕಲಬುರಗಿ: ತೊಗರಿ ಕಣಜ ಹಾಗೂ ಬಿಸಿಲ ನಗರಿ ಕಲಬುರಗಿಯಲ್ಲಿ ಬುಧವಾರದಿಂದ ಮೂರು ದಿನ ನಡೆಯಲಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಕಟೌಟ್, ಬ್ಯಾನರ್, ವಿದ್ಯುತ್ ದೀಪಾಲಂಕಾರ, ನಾಡ ಧ್ವಜಗಳೊಂದಿಗೆ ಮಹಾನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಗರವನ್ನು ಸ್ವಚ್ಛ ಮತ್ತು ಸೌಂದರ್ಯದ ಜತೆಗೆ ಅಲ್ಲಲ್ಲಿ ಹಿರಿಯ ಸಾಹಿತಿಗಳ ಭಾವಚಿತ್ರ, ರಸ್ತೆ ಬದಿ ಗೋಡೆ ಬರಹ ಕಾಣಿಸುತ್ತಿದೆ. ಕನ್ನಡಾಭಿಮಾನಿಗಳನ್ನು ಸೆಳೆಯಲು ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ. ಒಟ್ಟಾರೆ ಸಾಹಿತ್ಯಾಸಕ್ತರ ಹಬ್ಬವಾಗಿರುವ ನುಡಿ ಜಾತ್ರೆಯ ಸಿದ್ಧತೆಯನ್ನು ವಿಜಯವಾಣಿ ಛಾಯಾಗ್ರಾಹಕ ಸುಧೀಂದ್ರ ಶ್ರೀರಂಗರಾಜು ಅವರು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದು, ಅವುಗಳನ್ನು ಈ ಕೆಳಗಿನ ಫೋಟೋ ಗ್ಯಾಲರಿಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.