Mind bending Malayalam climaxes 
ಸಿನಿವಾಣಿ

ನೀವು ಕ್ರೈಂ, ಥ್ರಿಲ್ಲರ್​ ಸಿನಿ ಪ್ರೇಮಿಗಳಾ?; ಮೆದುಳಿಗೆ ಕೆಲಸ ಕೊಡುವ ಮಲಯಾಳಂನ 8 ಅದ್ಭುತ ​ಚಿತ್ರ ಮಿಸ್ ಮಾಡ್ಕೋಬೇಡಿ!..Suspense Malayalam Films

ಪ್ರಮುಖ ಮುಖ್ಯಾಂಶಗಳು

  • ಮಲಯಾಳಂನ ಸಸ್ಪೆನ್ಸ್​ ಥ್ರಿಲ್ಲರ್​​ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳಬೇಡಿ
  • ಕಪ್ಪೆಲ್ಲ, ವರತನ್, ಮುಂಬೈ ಪೊಲೀಸ್​ ಸಿನಿಮಾಗಳು ಮಿದುಳಿಗೆ ಕೊಡುತ್ತೆ ಕೆಲಸ
  • ಕೊನೆಯ ಕ್ಲೈಮಾಕ್ಸ್​ವರೆಗೂ ಹಿಡಿದಿಡುವ ಸಿನಿಮಾಗಳು ಇವು
Suspense Malayalam Films: ಮಲಯಾಳ ಸಿನಿಮಾ ರಂಗವು ಎಂದಿಗೂ ತನ್ನದೇ ಆದ ಹೊಸ ತನಕ್ಕೆ ಹಲವರಿಗೆ ಇಷ್ಟವಾಗುತ್ತದೆ. ಅದಕ್ಕೆ ಉದಾಹರಣೆ ಎಂದರೆ, ಬೆಂಗಳೂರು ಡೇಸ್, ಆವೇಶಂ, ಸೂಕ್ಷ್ಮ ದರ್ಶಿನಿ, ಕುಂಬಳಂಗಿ ನೈಟ್ಸ್​​, ಮಹಿಶಿಂತೆ ಪ್ರತಿಕಾರಂ ಹೀಗೆ ಸಾಕಷ್ಟು ಸಿನಿಮಾಗಳು ನಿಮ್ಮನ್ನು ರಂಜಿಸದೆ ಇರೋದಿಲ್ಲ. ಹಾಗೆಯೇ ನಿಮ್ಮ ಸಿನಿಮಾ ಇಷ್ಟದ ಲಿಸ್ಟ್​​ನಲ್ಲಿ ಒಂದೆರಡಾದರೂ ಮಲಯಾಳಂ ಸಿನಿಮಾದ ಹೆಸರು ಇದ್ದೇ ಇರುತ್ತದೆ. ಹಾಗೆಯೇ ಮಾಲಿವುಡ್​ ಕ್ಲಾಸಿಕ್​, ಕಮರ್ಷಿಯಲ್​, ಸೈಕಾಲಜಿಕಲ್​ ಥ್ರಿಲ್ಲರ್ ಮೂವಿಗೂ ಸೈ ಎನಿಸಿಕೊಂಡಿದೆ. ಇದಕ್ಕೆ EKO, ಫಾರೆನ್ಸಿಕ್​, ಮಿನ್ನಾಲ್​ಮುರುಳಿ ಸಾಕ್ಷಿ. ಇಂತದ್ದೇ ಸೂಪರ್​ ಹಿಟ್​​ ಚಿತ್ರ ನೋಡಬೇಕು ಎಂದಿದ್ದರೇ ಮಾಹಿತಿ ಈ ಲೇಖನದಲ್ಲಿದೆ.
ಈ ಹಿಂದೆ ಮಲಯಾಳಂ ಭಾಷೆ ಅರ್ಥವಾಗದೇ ಚಿತ್ರವನ್ನು ನೋಡಿ ಅರ್ಥ ಮಾಡಿಕೊಳ್ಳುವುದು ಅಥವಾ ಸಬ್​ ಟೈಟಲ್ಸ್​ ಮಾತ್ರ ಓದಿ ಅರ್ಥ ಮಾಡಿಕೊಳ್ಳುತ್ತಿದ್ದೆವು. ಈಗ ಅಷ್ಟೆಲ್ಲ ಕಷ್ಟ ಪಡುವ ಅಗತ್ಯವೇ ಇಲ್ಲ. ಒಟಿಟಿ ಫ್ಲಾಟ್​ಫಾರ್ಮ್​ಗಳು ಲಗ್ಗೆಯಿಟ್ಟ ನಂತರ ಕನ್ನಡ, ಕನ್ನಡ, ತಮಿಳು, ತೆಲುಗು ಸೇರಿದಂತೆ ಪ್ಯಾನ್​ ಇಂಡಿಯಾ ಭಾಷೆಗಳಲ್ಲಿ ನಾವು ರೋಚಕ ಸಿನಿಮಾಗಳನ್ನು ಕಣ್ತುಂಬಿಕೊಳ್ಳಬಹುದು. ನೀವು ಮಾಲಿವುಡ್​ ಸಿನಿಮಾಗಳಲ್ಲಿ ಮಿಸ್​ ಮಾಡಿಕೊಳ್ಳದೇ ನೋಡಬೇಕಾದ ಏಳು ಸಿನಿಮಾಗಳು ಎಂದರೆ ಇವೆ ನೋಡಿ.

ಏಳು ಸಿನಿಮಾ ಯಾವುದು?
ಇರಟ್ಟ

ಮಲಯಾಳಂನಲ್ಲಿ ಇರಟ್ಟ ಎಂದರೆ ಅವಳಿ ಎಂದು ಅರ್ಥ, ಈಸನಿನಿಮಾವನ್ನು ರೋಹಿತ್ ಎಂ.ಜಿ. ಕೃಷ್ಣನ್. ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಟ ಜೋಜು ಜಾರ್ಜ್​ ನಟಿಸಿದ್ದರೆ, ಕನ್ನಡ ಮತ್ತು ಟಾಲಿವುಡ್​ನ ಖ್ಯಾತ ನಟಿ ಅಂಜಲಿ ನಟಿಯಾಗಿ ಬಣ್ಣ ಹಚ್ಚಿದ್ದಾರೆ. ಅವಳಿ ಸಹೋದರರ ಸಂಬಂಧ, ಜೈಲಿನಲ್ಲಿ ನಡೆಯುವ ಸಾವಿನ ತನಿಖೆಯುಳ್ಳ ಕತೆ ಇದಾಗಿದೆ. ಈ ಸಿನಿಮಾವನ್ನು ನೀವು ನೆಟ್​​ಫ್ಲಿಕ್ಸ್​ನಲ್ಲಿ ನೋಡಬಹುದಾಗಿದೆ.

ಕಿಷ್ಕಿಂದಾ ಕಾಂಡಂ

ಜಿಯೋ ಹಾಟ್​ಸ್ಟಾರ್​ನಲ್ಲಿ ಇರುವ ದಿಂಜಿತ್ ಅಯ್ಯತಾನ್ ನಿರ್ದೇಶಿಸಿದ್ದಾರೆ. ನಟ ಆಸಿಫ್​​ ಅಲಿ, ಅಪರ್ಣಾ ಬಾಲ ಮುರಳಿ ಹಾಗೂ ವಿಜಯ ರಾಘವನ್​ ನಟಿಸಿದ್ದಾರೆ. ಮಾಜಿ ಭಾರತೀಯ ಸೈನಿಕನ ಆತ್ಮ ರಕ್ಷಣೆಯ ಗನ್ ಇದ್ದಕ್ಕಿದ್ದಂತೆ ಕಳೆದು ಹೋಗುತ್ತದೆ. ಆ ಗನ್ ಏನಾಯ್ತು, ಪ್ರತಿ ಬಾರಿ ಕತಾ ನಾಯಕನ ಅಪ್ಪ ಸುಡುತ್ತಿದ್ದ ಪೇಪರ್​ಗಳೇನು, ಆತನ ಮಗ ಎಲ್ಲಿಗೆ ಕಾಣೆಯಾದ ಎನ್ನುವುದೇ ಸಿನಿಮಾದ ತಿರುವಾಗಿದೆ. ​​

ನಾಯಟ್ಟು

ಮಾರ್ಟಿನ್ ಪ್ರಕಾಟ್ ನಿರ್ದೇಶಿಸಿರುವ ನಾಯಟ್ಟು ಸಿನಿಮಾದಲ್ಲಿ ಬೊಬಾನ್​, ಜೋಜು ಜಾರ್ಜ್​, ನಿಮಿಷಾ ಸಜಯನ್​ ನಟಿಸಿದ್ದಾರೆ. ಸಿನಿಮಾದ ಕತೆ ಆಕಸ್ಮಿಕ ಸಾವಿನ ಪ್ರಕರಣದಲ್ಲಿ ಸುಳ್ಳು ಆರೋಪ ಹೊರಿಸಿ ತಪ್ಪಿಸಿಕೊಳ್ಳಲು ಒತ್ತಾಯಿಸಲ್ಪಡುವ ಮೂವರು ಪೊಲೀಸ್ ಅಧಿಕಾರಿಗಳನ್ನು ಅನುಸರಿಸುವ ಬದುಕುಳಿಯುವ ಸುತ್ತ ಸುತ್ತುತ್ತದೆ. ಸಿನಿಮಾವನ್ನು ಸೋನಿ ಲೈವ್​ನಲ್ಲಿ ನೋಡಬಹುದಾಗಿದೆ

ಕಪ್ಪೆಲ್ಲಾ

ಮುಹಮ್ಮದ್ ಮುಸ್ತಫಾ ನಿರ್ದೇಶಿಸಿರುವ ಕಪ್ಪೆಲ್ಲಾ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ನೋಡಬಹುದಾದ ಸಿನಿಮಾವಾಗಿದೆ. ಹಳ್ಳಿಯ ಹುಡುಗಿಯೊಬ್ಬಳು ತಾನು ಸಂಪರ್ಕ ಹೊಂದಿದ್ದ ಆಟೋರಿಕ್ಷಾ ಚಾಲಕನನ್ನು ಭೇಟಿಯಾಗಲು ಕೋಝಿಕೋಡ್‌ಗೆ ಪ್ರಯಾಣಿಸುತ್ತಾಳೆ, ಅಲ್ಲಿ ಆತನ ಬಗ್ಗೆ ತಿಳಿಯುವ ಕರಾಳ ಸತ್ಯದ ಸುತ್ತ ಸಿನಿಮಾವಿದೆ. ಈ ಸಿನಿಮಾವನ್ನು ಜಿಯೋ ಹಾಟ್​ಸ್ಟಾರ್​ನಲ್ಲಿ ನೋಡಬಹುದಾಗಿದೆ. ಅನ್ನಾಬೆನ್, ರೋಷನ್​ ಮ್ಯಾಥ್ಯೂ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಅಂಗಮಾಲಿ ಡೈರೀಸ್

ಅಂಗಮಾಲಿ ಡೈರೀಸ್ ಕೇರಳದ ಅಂಗಮಾಲಿಯಲ್ಲಿ ಬೆಳೆಯುತ್ತಿರುವ ವಿನ್ಸೆಂಟ್ ಪೆಪೆ ಮತ್ತು ಅವರ ಸ್ನೇಹಿತರ ಗುಂಪಿನ ಬಗ್ಗೆ ಹೇಳುವ ಕತೆ. ಅವರು ಸ್ಥಳೀಯ ಪ್ರಭಾವವನ್ನು ಪಡೆಯುವ ಕನಸು ಕಾಣುತ್ತಾರೆ. ವ್ಯವಹಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದಾಗ್ಯೂ, ಗ್ಯಾಂಗ್ ಜಗಳಗಳು, ಪೈಪೋಟಿಗಳು ಮತ್ತು ದ್ರೋಹಗಳಿಂದಾಗಿ ಅವರ ಯೋಜನೆಗಳು ಮುರಿದುಹೋಗುತ್ತವೆ. ಇದು ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ವರದನ್​

ಅಮಲ್​ ನಿರಾದ್​ ನಿರ್ದೇಶನ ಮಲಯಾಳಂ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾದಲ್ಲಿ ಫಹಾದ್​ ಫಾಸಿಲ್​ ನಟಿಸಿದ್ದಾರೆ. ಐಶ್ವರ್ಯ ಲಕ್ಷ್ಮಿ ಅವರಿಗೆ ಸಾಥ್​ ನೀಡಿದ್ದಾರೆ. ಕೆಲಸ ಕಳೆದುಕೊಂಡು ಕೇರಳಕ್ಕೆ ಬರುವ ಅಭಿನ್​ ಮತ್ತು ಆತನ ಪತ್ನಿ ಪ್ರಿಯಾಗೆ ಅಲ್ಲಿನ ಜನರು ಕೊಡುವ ಹಿಂಸೆ, ಮಾನಸಿಕ ಕಿರುಕುಳದ ವಿರುದ್ಧ ಹೋರಾಡುವುದೇ ಸಿನಿಮಾದ ಕತೆ. ಇದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ.

ಮುಂಬೈ ಪೊಲೀಸ್

ಪೃಥ್ವಿರಾಜ್ ಸುಕುಮಾರನ್ ನಟಿಸಿ, ರೋಶನ್​ ಆಂಡ್ರ್ಯೂಸ್​ ನಿರ್ದೇಶನದ ಸೈಕಲಾಜಿಕಲ್ ಥ್ರಿಲ್ಲರ್ ಚಲನಚಿತ್ರ ಮುಂಬೈ ಪೊಲೀಸ್ ಜಿಯೋ ಹಾಟ್​ಸ್ಟಾರ್​ನಲ್ಲಿ ನೋಡಬಹುದಾಗಿದೆ. ಮುಂಬೈ ಪೊಲೀಸರು ಎಸಿಪಿ ಆಂಥೋನಿ ಮೋಸೆಸ್ ಅವರನ್ನು ಹಿಂಬಾಲಿಸುತ್ತಾರೆ, ಅವರು ತಮ್ಮ ಸಹೋದ್ಯೋಗಿ ಎಸಿಪಿ ಆರ್ಯನ್ ಕೊಲೆಯನ್ನು ಭೇದಿಸಿದ ಸ್ವಲ್ಪ ಸಮಯದ ನಂತರ ಅಪಘಾತದಲ್ಲಿ ಭಾಗಶಃ ಸ್ಮರಣಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಪ್ರಕರಣವನ್ನು ಆರಂಭದಿಂದಲೇ ರಹಸ್ಯವಾಗಿ ಮರುತನಿಖೆ ಮಾಡಲು ಒತ್ತಾಯಿಸಲ್ಪಟ್ಟ ಆಂಥೋನಿ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸುತ್ತಾರೆ.

ರಾಂತ್

ಶಾಹಿ ಕಬೀರ್ ನಿರ್ದೇಶನದ ರಾಂತ್​ ಸಿನಿಮಾವು ನೋಡುಗರನ್ನು ಹಿಡಿದಿಟ್ಟು ಕೂರಿಸುತ್ತದೆ. ಸಾಕಷ್ಟು ತಿರುವು, ಅಬ್ಬಾ ಎನಿಸುವ ದೃಶ್ಯಗಳು ಸಿನಿಮಾದಲ್ಲಿದೆ. ಪೊಲೀಸ್​ ಅಧಿಕಾರಿಯೊಬ್ಬರನ್ನು ತಪ್ಪೇ ಮಾಡದ ಕೇಸಿನಲ್ಲಿ ಸಿಕ್ಕಿ ಹಾಕಿಸುವುದರ ಸುತ್ತ ಈ ಸಿನಿಮಾವಿದೆ