ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೇ ಸಿನಿಮಾ ಜು. 24ರಂದು ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಿದೆ. ಸಿನಿಮಾಗಾಗಿಯೇ ಕಾದಿದ್ದ ಕೋಟ್ಯಂತರ ಅಭಿಮಾನಿಗಳು ಕೊನೆಗೂ ಆ ಸಿನಿಮಾ ಕಣ್ತುಂಬಿಕೊಂಡು, ಮತ್ತೆ ಮತ್ತೆ ಸುಶಾಂತ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಈ ನಡುವೆ ಚಿತ್ರಕ್ಕೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಬಾಲಿವುಡ್ನ ಸಾಕಷ್ಟು ಸೆಲೆಬ್ರಿಟಿಗಳು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆ ದಿಲ್ ಬೇಚಾರಾ ಚಿತ್ರದ ಒಂದಷ್ಟು ಡೈಲಾಗ್ಗಳು ತುಂಬ ಆಪ್ತ ಎನಿಸುತ್ತವೆ. ಅಂತ ಕೆಲ ಡೈಲಾಗ್ಗಳು ಇಲ್ಲಿವೆ..
1. ಹಾಡೇಕೆ ಅಪೂರ್ಣ ಇತ್ತು? ಯಾಕಂದ್ರೆ ಜೀವನವೇ ಅಪೂರ್ಣವಾಗಿದೆ,,2. ಯಾರು ಯಾವಾಗ ಸತ್ತೋಗುತ್ತಾರೋ, ಅವರೊಂದಿಗೆ ಬದುಕುಬೇಕೆಂಬ ಉತ್ಸಾಹವೂ ಸತ್ತೋಗುತ್ತೆ..3. ನನ್ನ ರಾಣಿ ಜೀವಂತವಾಗಿದ್ದಾಳೆ.. ಅಲ್ಲಿಯವರೆಗೂ ನಮ್ಮ ಕಥೆಯೂ ಜೀವಂತವಾಗಿರುತ್ತದೆ..4. ನಾನು ಜೀವಂತವಾಗಿದ್ದೇನೆ.. ನನಗನಿಸಿದ ಮಟ್ಟಿಗೆ ಕಿಜಿ ಹೇಳುವ ಪ್ರಕಾರ.. ಅಂಟಿಕೊಳ್ಳುವುದು ಇದ್ದೇ ಇರುತ್ತದೆ..ಜೀವನ ಜೀವನದ ಜತೆ ಅಂಟಿಕೊಳ್ಳೋಕೆ ಕಾರಣ ಸಿಕ್ಕಿದೆ...5. ಪ್ರೀತಿ ನಿದ್ದೆ ಥರ ಅಂತ ಹೇಳ್ತಾರೆ.. ನಿಧಾನವಾಗಿ ಬರುತ್ತದೆ.. ಒಮ್ಮೆಲ್ಲೇ ಅದರ ಆಳಕ್ಕೆ ಇಳಿದು ಬಿಡುತ್ತೇವೆ..6. ಹುಟ್ಟೋದ್ಯಾವಾಗೋ, ಸಾಯೋದ್ಯಾವಾಗೊ ಅದನ್ನು ನಾವು ನಿರ್ಧರಿಸಲ್ಲ, ಆದರೆ, ಹೇಗೆ ಬದುಕಬೇಕೆನ್ನುವುದನ್ನು ನಾವೇ ನಿರ್ಧರಿಸಬೇಕು..