ಬೆಂಗಳೂರು: ‘ಜಾಲಿಡೇಸ್’ ಖ್ಯಾತಿಯ ನಿರಂಜನ್ ಶೆಟ್ಟಿ ‘ಶಾನುಭೋಗರ ಮಗಳು’ ಚಿತ್ರದ ಬಳಿಕ ನಟಿಸುತ್ತಿರುವ ಸಿನಿಮಾ ‘31 ಡೇಸ್’. ಚಿತ್ರ ನಾಳೆ (ಸೆ.5) ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಮೈಸೂರು, ಶಿವಮೊಗ್ಗದಲ್ಲಿ ಏರ್ಪಡಿಸಲಾಗಿದ್ದ ಪೇಯ್ಡ ಪ್ರೀಮಿಯರ್ ಶೋಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜಾ ರವಿಕುಮಾರ್ ನಿರ್ದೇಶನದ ಈ ಯೂಥ್‌ಫುಲ್ ಲವ್‌ಸ್ಟೋರಿಯಲ್ಲಿ ನಿರಂಜನ್ ಶೆಟ್ಟಿಗೆ ಕರಾವಳಿ ಮೂಲದ ನಟಿ ಪ್ರಜ್ವಲಿ ಸುವರ್ಣ ಜೋಡಿಯಾಗಿದ್ದಾರೆ. ಈಗಾಗಲೇ ತುಳುವಿನ ‘ಮಿ. ಮದಿಮಯೆ’, ‘ಅಭಿಮಾ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಪ್ರಜ್ವಲಿ ‘31 ಡೇಸ್’ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದು, ‘ನನ್ನ ಮೊದಲ ಕನ್ನಡ ಸಿನಿಮಾ ಬಗ್ಗೆ ತುಂಬ ನಿರೀಕ್ಷೆಯಿದ್ದು, ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ. ನನ್ನ ತುಳು ಚಿತ್ರಗಳನ್ನು ನೋಡಿದ್ದ ‘31 ಡೇಸ್’ ತಂಡದವರು ಕರೆ ಮಾಡಿದರು. ಬೆಂಗಳೂರಿಗೆ ಬಂದು ಕಥೆ ಕೇಳಿ, ಇಷ್ಟವಾಗಿ ಒಪ್ಪಿಕೊಂಡೆ. ನನ್ನದಿಲ್ಲಿ ನಿಖಿತಾ ಎಂಬ ಕಾಲೇಜು ಹುಡುಗಿಯ ವಿಭಿನ್ನ ಪಾತ್ರವಾಗಿದ್ದು ಹಲವು ಶೇಡ್‌ಗಳಿವೆ. ಆಧುನಿಕ ಕಾಲದ ಯುವತಿಯರ ತವಕ-ತಲ್ಲಣಗಳು ಹಾಗೂ ಅವರ ಭಾವನೆಗಳನ್ನು ನನ್ನ ಪಾತ್ರ ಪ್ರತಿನಿಧಿಸುತ್ತದೆ. ಸಂಬಂಧಗಳ ಮೌಲ್ಯ ಹಾಗೂ ಇಂದಿನ ಜನರೇಷನ್‌ಗೆ ಒಂದು ಉತ್ತಮ ಸಂದೇಶ ನೀಡುವ ಚಿತ್ರವಿದು. ನನ್ನದು ಮಂಗಳೂರು ಶೈಲಿಯ ಭಾಷೆ. ಈ ಚಿತ್ರಕ್ಕೆ ಬೆಂಗಳೂರು ಶೈಲಿಯ ಕನ್ನಡ ಬೇಕಿತ್ತು. ಅದಕ್ಕಾಗಿ ಸ್ವಲ್ಪ ವರ್ಕ್‌ಶಾಪ್ ಮಾಡಿದೆ’ ಎಂದು ಕನ್ನಡ ಚಿತ್ರದ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡರು.
ಈಗಾಗಲೇ ಶಿವಮೊಗ್ಗ, ಮೈಸೂರಿನಲ್ಲಿ ಆಯೋಜಿಸಿದ್ದ ‘31 ಡೇಸ್’ ಚಿತ್ರದ ಪ್ರೀಮಿಯರ್ ಶೋಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ನಾವು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದೇವೆ. ‘31 ಡೇಸ್’ ನವಿರಾದ ಕಥೆಯ ಜತೆಗೆ ಮನುಷ್ಯನ ಸಂಬಂಧಗಳ ಸುತ್ತ ಸುತ್ತುತ್ತದೆ. ಹಳ್ಳಿ-ನಗರ ಸಂಘರ್ಷ, ತಂದೆ-ಮಗನ ಸಂಬಂಧ ಹಾಗೂ ನವ ಯುವಕರ ಭಾವನೆಗಳನ್ನು ಇಲ್ಲಿ ವ್ಯಕ್ತಪಡಿಸಲಾಗಿದೆ. ನಿರಂಜನ್ ಶೆಟ್ಟಿ, ನಾಯಕ