- ರಾಜಕುಮಾರ್ ಹಿರಾನಿಯಿಂದ 3 ಈಡಿಯಟ್ಸ್ ಸೀಕ್ವೆಲ್ ನಿರ್ದೇಶನ
- 4ನೇ ಈಡಿಯಟ್ ಆಗಿ ನಟನೆ ಮಾಡಲಿದ್ದಾರೆ ವಿಕ್ಕಿ ಕೌಶಲ್?
- 2027ರಿಂದ ಚಿತ್ರದ ಶೂಟಿಂಗ್ ಆರಂಭವಾಗುವ ಸಾಧ್ಯತೆ?
3 Idiots :
2009ರಲ್ಲಿ ರಾಜ್ ಕುಮಾರ್ ಹಿರಾನಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ 3 ಈಡಿಯಟ್ಸ್ ಸಿನಿಮಾ ಇಡೀ ಭಾರತದ ಚಿತ್ರರಂಗದಲ್ಲೇ ಭಾರೀ ಸದ್ದು ಮಾಡಿತ್ತು. ಅಷ್ಟೇ ಅಲ್ಲದೇ ಬಾಕ್ಸ್ ಆಫೀಸ್ನ ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿದ್ದ ಸಿನಿಮಾ ಇದು. ಈ ಸಿನಿಮಾ ಬಂದು ಹತ್ತು ವರ್ಷವಾಗಿದೆ. ಇಂದು ಸಹ ಸಿನಿಮಾದ ಕೆಲವೊಂದು ತುಣುಕುಗಳು ಹಾಡನ್ನು ಕೆಲವರು ಗುನುಗುತ್ತಾರೆ. ಈ ಮಧ್ಯೆ ಅಮೀರ್ ಖಾನ್ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ.
ಹೌದು ಬ್ಲಾಕ್ ಬ್ಲಸ್ಟರ್ ಸಿನಿಮಾವಾದ 3 ಈಡಿಯಟ್ಸ್ ನಂತರ ಅದರ ಮುಂದುವರೆದ ಭಾಗವಾಗಿ 3 ಈಡಿಯಟ್ಸ್ 2 ಬರಲಿದೆ ಎಂದು ಅಮೀರ್ ಖಾನ್ ಇತ್ತೀಚೆಗೆ ಸ್ಪಷ್ಟ ಪಡಿಸಿದ್ದರು. ಜೊತೆಗೆ ಈ ಬಾರಿಯ ವಿಶೇಷತೆ ಎಂದರೆ ಈಡಿಯಟ್ಸ್ ಮೂವರಲ್ಲ ನಾಲ್ವರು ಇರುತ್ತಾರೆ ಎನ್ನಲಾಗಿದೆ. 4 ನೇ ಈಡಿಯಟ್ ಬಾಲಿವುಡ್ ನಟ ವಿಕ್ಕಿ ಕೌಶಲ್ ಎನ್ನಲಾಗಿದೆ. ಈ ಚಿತ್ರವು ಖ್ಯಾತ ಕಾದಂಬರಿಕಾರ ಚೇತನ್ ಭಗತ್ ಅವರ ಕಾದಂಬರಿ ಫೈವ್ ಪಾಯಿಂಟ್ ಸಮ್‌ಒನ್‌ನಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತಿದೆ.
ಯಾರು ಆ 4ನೇ ಈಡಿಯಟ್?
3 ಈಡಿಯಟ್ಸ್ನಲ್ಲಿ ಎಂಜಿನಿಯರ್ ವಿದ್ಯಾರ್ಥಿಗಳಾದ ಅಮೀರ್ ಖಾನ್, ಮಾಧವನ್ ಹಾಗೂ ಶರ್ಮಾನ್ ಜೋಶಿ ಈ ಸಿನಿಮಾದಲ್ಲಿ ನಟಿಸಿದ್ದರು. ಈಗ ನಾಲ್ಕನೇ ಈಡಿಯಟ್ ಆಗಿ ವಿಕ್ಕಿ ವಿಕ್ಕಿ ಕೌಶಲ್ ಅವರು ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರಿಗಾಗಿ ಕತೆಯನ್ನು ಹಿರಾನಿ ಅವರು ಬರೆದಿಟ್ಟಿದ್ದಾರೆ ಎನ್ನಲಾಗಹಿಗಿದೆ
ಅಮೀರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಅವರೊಂದಿಗೆ ಈ ಬಾರಿ ವಿಕ್ಕಿ ಕೌಶಲ್ ನಾಲ್ಕನೇ ಪ್ರಮುಖ ನಟನಾಗಿ ಸೇರಿಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ವಿಕ್ಕಿ ವಿಶಾಲ್, ಅಮೀರ್ ಖಾನ್ ಮತ್ತು ಹಿರಾನಿ ನಡುವೆ ಹಲವಾರು ಸಭೆ ನಡೆದಿದೆ ಎನ್ನಲಾಗಿದೆ. 4ನೇ ಈಡಿಯಟ್ ಆಗಿ ನಟಿಸಲು ವಿಕ್ಕಿ ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿಯೂ ಇದೆ. ಕೆಲವು ಮೂಲಗಳ ಪ್ರಕಾರ ಸಿನಿಮಾದ ಕತೆ ಸಂಪೂರ್ಣಗೊಂಡಿದ್ದು ಚಿತ್ರೀಕರಣ 2027ರಲ್ಲಿ ಆರಂಭವಾಗಲಿದೆ ಎನ್ನುವ ಮಾಹಿತಿ ಇದೆ.
3 ಈಡಿಯಟ್ಸ್ ಕತೆ ಏನು?
ಎಂಜಿನಿಯರಿಂಗ್ಗಾಗಿ ಉನ್ನತ ಶಿಕ್ಷಣ ಸಂಸ್ಥೆಗೆ ಸೇರಿಕೊಳ್ಳುವ ಮೂವರು ವಿದ್ಯಾರ್ಥಿಗಳು ಕೊನೆಗೆ ದೋಸ್ತ್ಗಳಾಗುತ್ತಾರೆ ಅದೇ ರಾಂಚೋ ಫರ್ಹಾನ್ ಖುರೇಷಿ ರಾಜು ರಾಸ್ತೋಗಿ. ಯಶಸ್ಸು, ಶಿಸ್ತಿನ ಸಿಪಾಯಿಯಾಗಿರುವ ಶಿಕ್ಷಕರು, ಎಂಜಿನಿಯರ್ ಓದುವ ವಿದ್ಯಾರ್ಥಿಗಳು ಎದುರಿಸುವ ತೊಳಲಾಟವನ್ನು ಅತ್ಯದ್ಭುತವಾಗಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಹಾಸ್ಯದ ಜೊತೆಗೆ ಜೀವನದ ಪಾಠವನ್ನು ಇಲ್ಲಿ ಹೇಳಾಲಾಗಿದೆ. ಯಶಸ್ಸಿನ ಹಿಂದೆ ಓಡಬೇಡಿ ಅರ್ಹತೆ ಹಿಂದೆ ಓಡಿ ಎನ್ನುವುದು ಇಲ್ಲಿನ ಕಥಾ ಹಂದರ(ಏಜೆನ್ಸೀಸ್).