ಬಾಲಿವುಡ್ ಡ್ರಗ್ ಮಾಫಿಯಾ ಪ್ರಕರಣ ಬಗೆದಷ್ಟು ಆಳಕ್ಕಿಳಿಯುತ್ತಿದೆ. ಈಗಾಗಲೇ ಪೆಡ್ಲರ್ಗಳು ಸೇರಿ ರಿಯಾ ಮತ್ತವರ ಸಹೋದರ ಶೋವಿಕ್ ಅರೆಸ್ಟ್ ಆಗಿದ್ದಾರೆ. ಇದೀಗ ವಿಚಾರಣೆ ವೇಳೆ ಮತ್ತೊಂದು ಸತ್ಯ ಬಹಿರಂಗವಾಗಿದ್ದು, ಬಾಲಿವುಡ್ನ 25 ಮಂದಿ ಎ ಗ್ರೇಡ್ ಸ್ಟಾರ್ ಕಲಾವಿದರೂ ಇದರಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಮೌನ ಮುರಿದು ಮಧ್ಯ ಪ್ರವೇಶಿಸಲು ಸೋನಿಯಾಗೆ ಕಂಗನಾ ಸಲಹೆ …
ಈಗಾಗಲೇ ಬಂಧಿತರಾಗಿರುವವರ ವಿಚಾರಣೆ ನಡೆಸುತ್ತಿದ್ದ ವೇಳೆ ಬಾಲಿವುಡ್ನ ಪಾಲುದಾರಿಕೆ ಎಷ್ಟಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಡ್ರಗ್ ಸೇವನೆ ಮತ್ತು ಡ್ರಗ್ ಪೂರೈಕೆಗೆ ಸಂಬಂಧಿಸಿದಂತೆ 25ಕ್ಕೂ ಅಧಿಕ ಎ ಗ್ರೇಡ್ ಕಲಾವಿದರ ಹೆಸರುಗಳನ್ನು ಎನ್ಸಿಬಿ ಮುಂದೆ ಬಾಯ್ಬಿಟ್ಟಿದ್ದಾರೆ.
ಇನ್ನೇನು ಶೀಘ್ರದಲ್ಲಿ 25 ಮಂದಿ ಎ ಲಿಸ್ಟ್ ಕಲಾವಿದರಿಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಸಮನ್ ಸಹ ನೀಡಲಿದ್ದು, ವಿಚಾರಣೆಗೆ ಆಹ್ವಾನಿಸಲಿದೆ. ಹಾಗಾದರೆ ಯಾರೆಲ್ಲರ ಹೆಸರು ಬಹಿರಂಗವಾಗಲಿದೆ ಎಂಬುದಕ್ಕೆ ಶೀಘ್ರದಲ್ಲಿ ಉತ್ತರ ಸಿಗಲಿದೆ.
ಇತ್ತ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಮತ್ತು ಡ್ರಗ್ ಮಾಫಿಯಾದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ಜಾಮೀನು ಅರ್ಜಿಯನ್ನು ಮುಂಬೈ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಸದ್ಯ ರಿಯಾ ಚಕ್ರವರ್ತಿ ಬೈಕುಲ್ಲಾ ಜೈಲಿನಲ್ಲಿ ಉಳಿಯಲಿದ್ದು, ಸೆಪ್ಟೆಂಬರ್ 22 ರವರೆಗೆ ಅವರನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ. ಇತ್ತ ರಿಯಾ ಪರ ವಕೀಲರು ಜಾಮೀನುಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. (ಏಜೆನ್ಸೀಸ್)