Film Awards : ರಾಜ್ಯ ಸರ್ಕಾರ ಕೊಡಮಾಡುವ 2020ನೇ ವಾರ್ಷಿಕ ಚಲಚಿತ್ರ ಪ್ರಶಸ್ತಿ ಪಟ್ಟಿಯನ್ನು ಮಂಗಳವಾರ(ಮಾ.11) ಘೋಷಣೆ ಮಾಡಿದೆ.
ಅತ್ಯುತ್ತಮ ನಟನಾಗಿ ಜಂಟಲ್ಮ್ಯಾನ್ ಚಿತ್ರ ಪಾತ್ರಕ್ಕಾಗಿ ಪ್ರಜ್ವಲ್ ದೇವರಾಜ್ ಆಯ್ಕೆಯಾಗಿದ್ದು, 'ಪಿಂಕಿ ಎಲ್ಲಿ' ಚಿತ್ರ ನಾಯಕಿ ಅಕ್ಷತಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದಿದೆ. ಹಾಗೆಯೇ ನಿರ್ದೇಶಕ, ನಿರ್ಮಾಪಕರು ಸೇರಿದಂತ ಹಲವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
2020ನೇ ಸಾಲಿನ ವಾರ್ಷಿಕ ಚಲಚಿತ್ರ ಪ್ರಶಸ್ತಿಗೆ ಅತ್ಯುತ್ತಮ ಚಿತ್ರವಾಗಿ ಪೃಥ್ವಿ ಕೋಣನೂರು ನಿರ್ದೇಶನದ 'ಪಿಂಕಿ ಎಲ್ಲಿ', ವರ್ಣಪಟಲ ಮತ್ತು ಹರಿಯುವ ನದಿಗೆ ಮೈಯೆಲ್ಲಾ ಕಾಲು ಸಿನಿಮಾಗಳು ಆಯ್ಕೆಯಾಗಿದೆ. ಇನ್ನು ಸಾಮಾಜಿಕ ಕಾಳಜಿಯ ಚಿತ್ರ ವಿಭಾಗದಲ್ಲಿ ಗಿಳಿಯೂ ಪಂಜರದೊಳಗಿಲ್ಲ ಮತ್ತು ಈ ಮಣ್ಣು ಚಿತ್ರಗಳು ಆಯ್ಕೆಯಾಗಿದೆ.
ಹಾಗೇಯೆ ಅತ್ಯುತ್ತಮ ಜನಪ್ರಿಯ ಚಿತ್ರ ವಿಭಾಗದಲ್ಲಿ ಪೋರ್ ವಾಲ್ಸ್, ಮಕ್ಕಳ ಚಿತ್ರ ವಿಭಾಗದಲ್ಲಿ ಪದಕ ಚಿತ್ರ ಆಯ್ಕೆಯಾಗಿವೆ.