ಪುಪ್ಷಲತಾ (Instagram ನಿಂದ ಫೋಟೋ ತೆಗೆದುಕೊಳ್ಳಲಾಗಿದೆ)
- ಕೊತ್ತಲವಾಡಿ ಚಿತ್ರವನ್ನು ಪ್ರಮೋಟ್ ಮಾಡಲು ಹಣ ಪಡೆದು ಡಿ ಪ್ರಮೋಟ್ ಮಾಡಿದ್ದಾರೆ
- ಆಗಸ್ಟ್ 1 ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾಕ್ಕೆ ಯಾವುದೇ ಪ್ರಚಾರ ನೀಡಲಿಲ್ಲ
- ತಲಕಾಡು, ಗುಂಡ್ಲುಪೇಟೆ, ಮೈಸೂರು ಮತ್ತು ಚಾಮರಾಜನಗರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ
ಬೆಂಗಳೂರು: ತಮ್ಮ ಕೊತ್ತಲವಾಡಿ ಚಿತ್ರವನ್ನು ಪ್ರಮೋಟ್ ಮಾಡಲು ಹಣ ಪಡೆದ ಪಿಆರ್ ಒ ಹರೀಶ್ ಅರಸು ಮತ್ತು ಇತರ ಸಹಚರರು, ಸಿನಿಮಾವನ್ನು ಡೀ ಪ್ರಮೋಟ್ ಮಾಡಿ ಈಗ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿ ನಟ ಯಶ್ ತಾಯಿ, ನಿರ್ದೇಶಕಿ ಪುಷ್ಪಾ ಅರುಣ್ ಕುಮಾರ್ ದೂರು ದಾಖಲಿಸಿದ್ದಾರೆ.
ಎಫ್ಐಆರ್ ನಲ್ಲೇನಿದೆ?
ಪುಷ್ಪಾ ಅವರು ತಮ್ಮ ಚಿತ್ರದ ಪ್ರಚಾರದ ಎಲ್ಲಾ ಜವಬ್ದಾರಿಯನ್ನು ಹರೀಶ್ ಅವರಿಗೆ ಒಪ್ಪಿಸಿದ್ದರು. ಈ ವೇಳೆ ಮೇ 24 ರಿಂದ ಜುಲೈ ಮಧ್ಯದವರೆಗೆ ತಲಕಾಡು, ಗುಂಡ್ಲುಪೇಟೆ, ಮೈಸೂರು ಮತ್ತು ಚಾಮರಾಜನಗರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಿನಿಮಾದ ಚಿತ್ರೀಕರಣವನ್ನು ಮಾಡಿದ್ದರು. ಸಿನಿಮಾ ಪ್ರಚಾರಕ್ಕೆ ಎರಡೂ ಕಡೆಯವರು 23 ಲಕ್ಷ ಹಣವನ್ನು ನೀಡಬೇಕು ಎಂದು ಒಪ್ಪಿಕೊಂಡಿದ್ದರು ಎಂದು ವರದಿಯಾಗಿದೆ.
ಹರೀಶ್ ಅವರು ಈ ವರ್ಷದ ಮೇ 18 ರಂದು 10 ಲಕ್ಷ ರೂ. ನಂತರ ಮೇ.21 ರಂದು 5 ಲಕ್ಷ ರೂಗಳನ್ನು ಪಡೆದುಕೊಂಡಿದ್ದಾರೆ. ಚಿತ್ರದ ಬ್ರಾಂಡ್ಗಳನ್ನು ಬಳಸಿಕೊಂಡು ವಿವಿಧ ಚಾನಲ್ಗಳ ಮೂಲಕ ಹೆಚ್ಚುವರಿ 24 ಲಕ್ಷ ರೂ.ಗಳು ಹಾಗೂ ಮುದ್ರಣ ಮಾಧ್ಯಮ ಜಾಹೀರಾತಿಗಾಗಿ 4 ಲಕ್ಷ ರೂ.ಗಳು ಒಟ್ಟಾರೆಯಾಗಿ ಹರೀಶ್ ನನ್ನಿಂದ 64,87,700 ರೂ. ಪಡೆದಿದ್ದಾರೆ ಎಂದು ಪುಷ್ಪಾವತಿಯವರು ಆರೋಪಿಸಿದ್ದಾರೆ.
ಹಣ ನೀಡಿದರೂ ಸಹ ಆಗಸ್ಟ್ 1 ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾಕ್ಕೆ ಯಾವುದೇ ಪ್ರಚಾರ ನೀಡಲಿಲ್ಲ. ಇನ್ನು ಟ್ರೇಲರ್ ಬಿಡುಗಡೆಯ ಸಮಯದಲ್ಲಿ ಹರೀಶ್ ಪ್ರಚಾರವನ್ನು ಮಾಡದೇ ಇರುವುದರಿಂದ ಸ್ವತಃ ನಾನೇ 21,75,000 ರೂ. ಹೂಡಿಕೆ ಮಾಡಿದ್ದೇನೆ. ಈ ವೇಳೆ ಚಲನಚಿತ್ರ ಮಾಧ್ಯಮ ಪ್ರವರ್ತಕರಿಗೆ ಸಂಬಳ ನೀಡಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಿನಿಮಾದ ಪ್ರಚಾರದ ಲೋಪಗಳ ಬಗ್ಗೆ ಪ್ರಶ್ನಿಸಿದಾಗ, ಹರೀಶ್ ನನಗೆ ಬೆದರಿಕೆ ಹಾಕಿ 27 ಲಕ್ಷ ರೂಪಾಯಿ ವಾಪಸ್ ಕೇಳಿದ್ದಾನೆ. ಇನ್ನು ಅವರು ನನ್ನ ಬಗ್ಗೆ ನಕರಾತ್ಮಕವಾಗಿ ಪ್ರಚಾರ ಮಾಡುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ನನ್ನ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡುವುದು ಹಾಗೂ ಮನೆಗೆ ಬಂದು ಗೊಂದಲ ಸೃಷ್ಟಿ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪುಷ್ಪ ಅವರು ತಿಳಿಸಿದ್ದಾರೆ.
ಆಗಸ್ಟ್ 15, ರಂದು, ನನಗೆ ಮತ್ತು ಚಿತ್ರದ ನಿರ್ದೇಶಕ ಶ್ರೀರಾಜ್ ಅವರಿಗೆ ಹರೀಶ್ ಅರಸು, ಮನು, ನಿತಿನ್ ಮತ್ತು ಇತರ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬಂದಿವೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ (ಏಜೆನ್ಸೀಸ್).