- ಟಾಕ್ ಆಫ್ ದಿ ಟೌನ್ ಆದ 'ಧುರಂಧರ್ 2'
- ಒಂದಲ್ಲ ಒಂದು ರೀತಿ ಜಾಲತಾಣಗಳಲ್ಲಿ ಸದ್ದು
- ಯುವಕನೊಬ್ಬನ ಪೋಸ್ಟ್ ಸಿಕ್ಕಾಪಟ್ಟೆ ವೈರಲ್
Viral Post: ಪ್ರಸ್ತುತ, ಟಾಕ್ ಆಫ್ ದಿ ಟೌನ್ ಆಗಿರುವ ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' (Dhurandhar 2) ಸಿನಿಮಾ, ಬಾಲಿವುಡ್ನಿಂದ ಸೌತ್ ಸ್ಟಾರ್ಗಳ ಮೆಚ್ಚುಗೆ, ಪ್ರಶಂಸೆಗೆ ಪಾತ್ರವಾಗಿದೆ. ಈಗಾಗಲೇ ಹಲವು ದಾಖಲೆಗಳನ್ನು ಉಡೀಸ್ ಮಾಡಿ, ಮುನ್ನುಗ್ಗುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಿದೆ.
ಪ್ರವಾಸಕ್ಕೆಂದು ಹೋದ ಯುವಕನೊಬ್ಬ ಸಿನಿಮಾ ಕುರಿತಂತೆ ಹಂಚಿಕೊಂಡ ಅನುಭವ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹುಬ್ಬೇರಿಸಿದೆ. ದೇವರ ದರ್ಶನ ಪಡೆಯಲು ಜಮ್ಮ-ಕಾಶ್ಮೀಕರಕ್ಕೆ ಹೋದ ಯುವಕ, ದೇಗುಲ ಬಂದ್ ಆಗಿದೆ ಎಂದು ಹೋಗಿದ್ದು 'ದುರಂಧರ್ 2' ಸಿನಿಮಾ. ಈ ಸಣ್ಣ ಗ್ಯಾಪ್ನಲ್ಲಿ ಆತ ಉಳಿಸಿದ್ದು 1200 ರೂ.! ಅದು ಹೇಗಪ್ಪಾ? ಎಂಬ ಅನೇಕರ ಪ್ರಶ್ನೆಗೆ ಹೀಗಿದೆ ಆತನ ಉತ್ತರ.
ಸಾಮಾಜಿಕ ಜಾಲತಾಣದಲ್ಲಿ ತನ್ನ ಅನುಭವ ಹಂಚಿಕೊಂಡ ವ್ಯಕ್ತಿ ಮಾಧವ್ ಯು.ಎಸ್, ಜಮ್ಮು-ಕಾಶ್ಮೀರದ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಿದ್ದು ತಡರಾತ್ರಿ. ಹೀಗಾಗಿ, ದೇಗುಲ ಅದಾಗಲೇ ಬಂದ್ ಆಗಿತ್ತು. ಮುಂದೇನು ಮಾಡೋದು ಎಂದು ಅತ್ತ-ಇತ್ತ ಕಣ್ಣಾಯಿಸಿದ ಯುವಕ, 4-5 ಗಂಟೆ ಕಳೆಯಲು ರೂಮ್ ಬುಕ್ ಮಾಡಲು ತಡಕಾಡಿದ. ಒಂದು ರಾತ್ರಿ ಉಳಿಯಲು ಬಾಡಿಗೆ 1,500 ರೂ. ತೋರಿಸಿದ ಕೂಡಲೇ ಈತನ ತಲೆಗೆ ಬಂದಿದ್ದು 'ಧುರಂಧರ್ 2'.
ರಣವೀರ್ ಸಿಂಗ್ ಚಿತ್ರ ನೋಡಲು 300 ರೂ. ಕೊಟ್ಟು ಚಿತ್ರಮಂದಿರಕ್ಕೆ ಹೋದ ಮಾಧವ್, ಸಿನಿಮಾ ಮುಗಿಯುತ್ತಿದ್ದಂತೆ 3 ಗಂಟೆಗೆ ದೇವರ ದರ್ಶನ ಪಡೆಯಲು ಕ್ಯೂನಲ್ಲಿ ನಿಂತಿದ್ದ. ಬರೋಬ್ಬರಿ 3 ಗಂಟೆ 49 ನಿಮಿಷಗಳಿರುವ ಧುರಂಧರ್ ಸಿನಿಮಾ, ಈತನ 1200 ರೂ. ಉಳಿಸಿದ್ದೇ ರೋಚಕ. ಯುವಕನ ಪೋಸ್ಟ್ ಸದ್ಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).