ನಟ ರಣವೀರ್​ ಸಿಂಗ್​ ಪರ ನಿಂತ ರಾಮ್​ ಗೋಪಾಲ್​ ವರ್ಮಾ 
ಬಾಲಿವುಡ್

ಜನರನ್ನು ಥಿಯೇಟರ್‌ಗೆ ತರೋ ತಾಕತ್ತು ನಿಮಗಿಲ್ಲ: ರಣವೀರ್ ಬೆಂಬಲಕ್ಕೆ ನಿಂತ ರಾಮ್ ಗೋಪಾಲ್ ವರ್ಮಾ; ಒಕ್ಕೂಟದ ವಿರುದ್ಧ ಆರ್​ಜಿವಿ ಕೆಂಡ! Ram Gopal Varma on Ranveer Singh

ಪ್ರಮುಖ ಮುಖ್ಯಾಂಶಗಳು

  • ಡಾನ್​ 3 ಸಿನಿಮಾದಿಂದ ಹೊರನಡೆದ ರಣವೀರ್​ ಸಿಂಗ್​
  • ಬಾಲಿವುಡ್​ ಕಾರ್ಮಿಕ ಒಕ್ಕೂಟದಿಂದ ರಣವೀರ್​ಗೆ ಬ್ಯಾನ್​
  • ನಿಮಗೆ ಥಿಯೇಟರ್​ಗೆ ಜನರನ್ನು ಕರೆತರುವ ತಾಕತ್ತಿದೆಯೇ? ಆರ್​ಜಿವಿ ಪ್ರಶ್ನೆ
  • ನಟ ರಣವೀರ್​ ಸಿಂಗ್​ ಪರ ನಿಂತ ರಾಮ್​ ಗೋಪಾಲ್​ ವರ್ಮಾ
ಮುಂಬೈ: ಫರ್ಹಾನ್​ ಅಖ್ತರ್​ ನಿರ್ದೇಶನದ ಡಾನ್​ 3 ಸಿನಿಮಾದಿಂದ ನಟ ರಣವೀರ್​ ಸಿಂಗ್​ ಹೊರಬಿದ್ದ ಹಿನ್ನಲೆ ಬಾಲಿವುಡ್​ನ ಕಾರ್ಮಿಕರ ಒಕ್ಕೂಟ ನಟನ ಮೇಲೆ ನಿಷೇಧ ಹೇರಿರುವ ಸುದ್ದಿ ದೇಶದಾದ್ಯಂತ ಸುದ್ದಿಯಾಗುತ್ತಿದೆ.
ಆದರೆ ಈ ಬ್ಯಾನ್​ಗೆ ಬಾಲಿವುಡ್​ನಲ್ಲಿಯೇ ಅಸಮಾಧಾನ ಕೇಳಿಬರುತ್ತಿದ್ದು, ಹಿರಿಯ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma on Ranveer Singh) ಈ ನಿಷೇಧವನ್ನು ಆದಷ್ಟು ಬೇಗ ಹಿಂಪಡೆಯಬೇಕೆಂದು ಹೇಳಿಕೆ ನೀಡಿದ್ದಾರೆ.

ರಣವೀರ್ ನೂರಾರು ಜನರಿಗೆ ಅನ್ನ ಹಾಕುವವರು!

ರಣವೀರ್​ ಮೇಲೆ ನಿಷೇಧ ಹೇರಿರುವ ಫೆಡರೇಶನ್ ಆ ವೆಸ್ಟೆರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಒಕ್ಕೂಟದ ಮೇಲೆ ಕಿಡಿ ಕಾರಿತುವ ಆರ್​ಜಿವಿ, ನಟನ ಮೇಲೆ ಈ ಒಕ್ಕೂಟ ಹೇರಿರುವ ನಿಷೇಧ ನನಗೆ ಹಾಸ್ಯಾತ್ಮಕವಾಗಿ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.
ಈ FWICE ಗೆ ಯಾವುದೇ ಕಾನೂನು ಮಾನ್ಯತೆಯಿಲ್ಲ, ಬಾಲಿವುಡ್​ನಲ್ಲಿ ತನ್ನ ಅಸ್ತಿತ್ವವನ್ನು ಪ್ರದರ್ಶಿಸುವ ಸಲುವಾಗಿ ಈ ಬ್ಯಾನ್​ ಎಂಬ ನಾಟಕವಾಡುತ್ತಿದೆ. ಇದರಿಂದ ಚಿತ್ರರಂಗಕ್ಕೆ ಅನಾನುಕೂಲವೇ ಹೊರತು ರಣವೀರ್​ ಸಿಂಗ್​ಗೆ ಏನು ತೊಂದರೆಯಾಗುವುದಿಲ್ಲ ಎಂದು ನಿರ್ದೇಶಕ ತನ್ನ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 
ರಣವೀರ್​ ಒಂದು ಸಿನಿಮಾ ಮಾಡಿದರೆ, ಅಲ್ಲಿ ನಿಮ್ಮ ಒಕ್ಕೂಟದ ಕಾರ್ಮಿಕರಿಗೆ ಕೆಲಸ ದೊರೆಯುತ್ತದೆ. ಕೆಲಸ ಮಾಡಿದರೆ ಮಾತ್ರ ಹಣಗಳಿಸಬಹುದು. ಆ ಹಣದಿಂದಲೇ ನಿಮ್ಮ ಮನೆ ನಿರ್ವಹಣೆಯಾಗುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಜನರನ್ನು ಥಿಯೇಟರ್​ಗೆ ತರುವ ತಾಕತ್ತು ನಿಮಗಿಲ್ಲ!

ಜನ ಈಗ ಸಿನಿಮಾ ಥಿಯೇಟರ್​ಗಳಿಗೆ ಬರುವುದನ್ನೇ ನಿಲ್ಲಿಸಿದ್ದು. ರಣವೀರ್​ ನಟಿಸಿದ ಧುರಂಧರ್​ ಸಿನಿಮಾದಿಂದ ಜನ ಮತ್ತೆ ಥಿಯೇಟರ್​ ನತ್ತ ಮುಖ ಮಾಡಿದ್ದಾರೆ. ಹಾಗೆಯೇ ಜನರನ್ನು ಸಿನಿಮಾ ಮಂದಿರಗಳಿಗೆ ಕರೆತರುವ ತಾಕತ್ತಿರುವುದು ​ಸ್ಟಾರ್​ ನಟರಿಗೆ ಹೊರತು ನಿಮ್ಮಂತ ಒಕ್ಕೂಟಗಳಿಗಲ್ಲ ಎಂದು ರಾಮ್​ ಗೋಪಾಲ್​ ವರ್ಮಾ ನೇರವಾಗಿ ದಾಳಿ ಮಾಡಿದ್ದಾರೆ.
ಸಿನಿಮಾ ಕುರಿತಾದ ವಿವಾದವೆನೇ ಇದ್ದರು ಅದನ್ನು ನಿರ್ದೇಶಕ, ನಿರ್ಮಾಪಕ ಹಾಗೂ ನಟ ಸರಿಪಡಿಸಿಕೊಳ್ಳುತ್ತಾರೆ. ಅದರಲ್ಲಿ ಈ ಒಕ್ಕೂಟಗಳ ಮಧ್ಯಪ್ರವೇಶ ಸೂಕ್ತವಲ್ಲ ಎಂದು ಹಿರಿಯ ನಿರ್ದೇಶಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ, (ಏಜನ್ಸೀಸ್​).