ಚಿತ್ರ Instagram 
ಬಾಲಿವುಡ್

ಧುರಂಧರ್ 2 ಸುನಾಮಿ: ರಣವೀರ್ ಸಿಂಗ್‌ಗೆ 5 ಕೋಟಿಯ ಐಷಾರಾಮಿ ಕಾರ್ ಗಿಫ್ಟ್ ನೀಡಿದ್ರಾ ಯಾಮಿ ಗೌತಮ್? Ranveer Singh

ಪ್ರಮುಖ ಮುಖ್ಯಾಂಶಗಳು

  • ರಣವೀರ್​ ಸಿಂಗ್ ಪ್ರಸ್ತುತ ಧುರಂಧರ್: ದಿ ರಿವೆಂಜ್ ಚಿತ್ರದ ಯಶಸ್ಸಿನಲ್ಲಿ ಮುಳುಗಿದ್ದಾರೆ
  • ಯಶಸ್ಸಿನ ನಡುವೆಯೇ ನಟನ ಕಾರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ
  • ಧುರಂಧರ್ 2 ಚಿತ್ರದ ಯಶಸ್ಸಿಗಾಗಿ ಯಾಮಿ ಗೌತಮ್​ 5 ಕೋಟಿ ಬೆಲೆ ಬಾಳುವ ದುಬಾರಿ ಉಡುಗೊರೆ ನೀಡಿದ್ದಾರೆ
ಮುಂಬೈ: ಬಾಲಿವುಡ್​ ನಟ​ ರಣವೀರ್​ ಸಿಂಗ್ (Ranveer Singh) ಪ್ರಸ್ತುತ ಧುರಂಧರ್: ದಿ ರಿವೆಂಜ್ ಚಿತ್ರದ ಯಶಸ್ಸಿನಲ್ಲಿ ಮುಳುಗಿದ್ದಾರೆ. ಈ ಯಶಸ್ಸಿನ ನಡುವೆಯೇ ನಟನ ಐಷಾರಾಮಿ ಕಾರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇತ್ತಿಚೆಗೆ ರಣವೀರ್​ ಸಿಂಗ್​ ದುಬಾರಿ ಕಾರಿನಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ನಿಜವಾದ ಧುರಂಧರ್​ ರೀತಿಯಲ್ಲಿ ಆಗಮಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈ ವಿಡಿಯೋ ಹರಿದಾಡುತ್ತಿದ್ದಂತೆಯೇ ಧುರಂಧರ್ 2 ಚಿತ್ರದ ಯಶಸ್ಸಿಗಾಗಿ ಯಾಮಿ ಗೌತಮ್​ 5 ಕೋಟಿ ಬೆಲೆ ಬಾಳುವ ದುಬಾರಿ ಉಡುಗೊರೆಯನ್ನು ರಣವೀರ್​ಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿದವು. 
ಜನರು ಶೀಘ್ರದಲ್ಲೇ ಈ ಸುದ್ದಿಯನ್ನು ನಂಬಿದರು ಮತ್ತು ಯಾಮಿಯ ಈ ಗುಣಕ್ಕೆ ಶ್ಲಾಘಿಸಿದರು. ಆದರೆ, ಶೀಘ್ರದಲ್ಲೇ ಎಕ್ಸ್​ ಬಳಕೆದಾರರು ಈ ವಿಡಿಯೋವನ್ನು ಅಳಿಸಿ ಹಾಕಿದ್ದಾರೆ. ಇದಾದ ಬಳಿಕ ಇದು ಉಡುಗೊರೆಯಲ್ಲ ಬದಲಿಗೆ ರಣವೀರ್​ ಅವರು ಖರೀದಿಸಿದ ಹೊಸ ಕಾರು ಎಂದು ತಿಳಿದುಬಂದಿದೆ. 
ಆದಾಗ್ಯೂ, ಹಲವಾರು X ಬಳಕೆದಾರರು ಸುಳ್ಳು ಸುದ್ದಿ ಹರಿಬಿಟ್ಟಿದ್ದ ಎಕ್ಸ್​ ಪ್ರೊಫೈಲ್​ನ ನಿರ್ವಾಹಕನಿಗೆ ನಕಲಿ ಸುದ್ದಿಗಳನ್ನು ಏಕೆ ಪೋಸ್ಟ್ ಮಾಡುತ್ತಿದ್ದೀರಿ? ಹಣವನ್ನು ಸಂಪಾದಿಸಲು ಯಾವ ಮಟ್ಟಕ್ಕೂ ಹೋಗಲು ಸಿದ್ಧರಿದ್ದೀರಾ ಎಂದು ತರಾಟೆಗೆ ತೆಗದುಕೊಂಡರು. ಇನ್ನೋರ್ವ ಬಳಕೆದಾರರು ಈ ಸುಳ್ಳು ಕಥೆಯನ್ನು ಇಂದೇ ಅಳಿಸಿಹಾಕಿ ಇದು ಹಳೆಯ ವಿಡಿಯೋ ಎಂದು ಆಕ್ರೋಶ ಮೆರೆದಿದ್ದಾರೆ.

ಧುರಂಧರ ಬಾಕ್ಸ್ ಆಫೀಸ್ ಕಲೆಕ್ಷನ್

ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಆರಂಭಿಕ ದಿನಗಳಿಂದಲೂ ದಾಖಲೆ ಮಟ್ಟದ ಕಲೆಕ್ಷನ್ ಮಾಡುತ್ತಿರುವ ಈ ಚಿತ್ರವು ಈಗ ಎರಡನೇ ವಾರದಲ್ಲೂ ತನ್ನ ಪಾರುಪತ್ಯ ಮುಂದುವರಿಸಿದೆ. ಚಿತ್ರವು ಆರಂಭದಲ್ಲಿ  43 ಕೋಟಿ ರೂ. ಗಳಿಸುವ ಮೂಲಕ ಸಾಧಾರಣ ಆರಂಭ ಪಡೆದರೂ, ಮೊದಲ ದಿನವೇ ಭರ್ಜರಿ 102.55 ಕೋಟಿ ರೂ. ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸಿತು. 
2 ನೇ ದಿನದಂದು 80.72 ಕೋಟಿ ರೂ., 3 ನೇ ದಿನದಂದು 113 ಕೋಟಿ ರೂ. ಮತ್ತು 4 ನೇ ದಿನದಂದು 114.85 ಕೋಟಿ ರೂ. ಗಳಿಸಿತು. ಇಲ್ಲಿಯವರೆಗೆ, ಭಾರತದ ಒಟ್ಟು ಗಳಿಕೆ 856.63 ಕೋಟಿ ರೂ.ಗಳಾಗಿದ್ದು, ಭಾರತದ ಒಟ್ಟು ನಿವ್ವಳ ಸಂಗ್ರಹ 717.11 ಕೋಟಿ ರೂ.ಗಳಾಗಿವೆ (ಏಜೆನ್ಸೀಸ್​).