ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ
- ವೈಯಕ್ತಿಕ ಜೀವನದಲ್ಲಿ ಒಂದಲ್ಲ ಒಂದು ಏಟು ತಿನ್ನುತ್ತಲೇ ಇರುವ ಅರ್ಜುನ್ ಕಪೂರ್
- ಮಲೈಕಾ ಅರೋರಾ ಜೊತೆಗಿನ ಆರು ವರ್ಷಗಳ ಸುದೀರ್ಘ ಸಂಬಂಧವೂ ಮುರಿದು ಬಿದ್ದಿದೆ
- ಅರ್ಜುನ್ ಪೋಸ್ಟ್‌ಗೆ ಮಲೈಕಾ ಹಾರ್ಟ್ ಇಮೋಜಿ
ಬಾಲಿವುಡ್: ಬಾಲಿವುಡ್ ನಟ ಅರ್ಜುನ್ ಕಪೂರ್ (Arjun Kapoor) ಸದ್ಯ ವೈಯಕ್ತಿಕ ಜೀವನದಲ್ಲಿ ಒಂದಲ್ಲ ಒಂದು ಏಟು ತಿನ್ನುತ್ತಲೇ ಇದ್ದಾರೆ. ಅತ್ತ ಸಿನಿಮಾಗಳು ಅಂದುಕೊಂಡ ಮಟ್ಟಕ್ಕೆ ಸಕ್ಸಸ್ ಆಗ್ತಿಲ್ಲ, ಇತ್ತ ಮಲೈಕಾ ಅರೋರಾ (Malaika Arora) ಜೊತೆಗಿನ ಆರು ವರ್ಷಗಳ ಸುದೀರ್ಘ ಸಂಬಂಧವೂ ಮುರಿದು ಬಿದ್ದಿದೆ.
ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಎಡೆಬಿಡದ ಟ್ರೋಲಿಂಗ್ ಬೇರೆ! ಇವೆಲ್ಲದರ ನಡುವೆ ಅರ್ಜುನ್ ಕಪೂರ್ ಅವರು ತಮ್ಮ ದಿವಂಗತ ತಾಯಿ ಮೋನಾ ಶೌರಿ ಕಪೂರ್ ಅವರ ಹುಟ್ಟುಹಬ್ಬದಂದು ಹಾಕಿರುವ ಪೋಸ್ಟ್ ಈಗ ಬಾಲಿವುಡ್ನಲ್ಲಿ ಸಖತ್ ಚರ್ಚೆಗೆ ಕಾರಣವಾಗಿದೆ.
ಜೀವನ ನನ್ನ ಮೇಲೆ ಕ್ರೂರವಾಗಿದೆ
ತಮ್ಮ ತಾಯಿಯ ನೆನಪಿನಲ್ಲಿ ಒಂದು ಹಳೆಯ ಫೋಟೋ ಹಂಚಿಕೊಂಡಿರುವ ಅರ್ಜುನ್, "ಜನ್ಮದಿನದ ಶುಭಾಶಯಗಳು ಅಮ್ಮ, ಇವತ್ತು ನಿನ್ನನ್ನು ತುಂಬಾನೇ ಮಿಸ್ ಮಾಡ್ಕೊತಿದ್ದೀನಿ. ಇತ್ತೀಚೆಗೆ ಜೀವನ ನನ್ನ ಪಾಲಿಗೆ ಸ್ವಲ್ಪ ಕ್ರೂರವಾಗಿದೆ, ತುಂಬಾ ಪರೀಕ್ಷೆ ಮಾಡ್ತಿದೆ. ಆದ್ರೆ ಪರವಾಗಿಲ್ಲ ಈ ಹಿಂದೆಯೂ ನಾನು ಇಂಥ ಏಟುಗಳನ್ನು ತಿಂದಿದ್ದೇನೆ, ಮತ್ತೆ ಎದುರಿಸುತ್ತೇನೆ. ನೀನು ಕಲಿಸಿಕೊಟ್ಟ ಧೈರ್ಯವೇ ನನಗೆ ಶಕ್ತಿ, ಎಂದು ಬರೆದುಕೊಂಡಿದ್ದಾರೆ. ಅರ್ಜುನ್ ಅವರ ಈ ಪೋಸ್ಟ್ ನೋಡಿದ್ರೆ, ಬ್ರೇಕಪ್ ಮತ್ತು ಸತತ ಟ್ರೋಲಿಂಗ್‌ನಿಂದ ಅವರು ಎಷ್ಟು ನೊಂದಿದ್ದಾರೆ ಎನ್ನುವುದು ಎದ್ದು ಕಾಣಿಸುತ್ತಿದೆ.
ಮಲೈಕಾ ಕೊಟ್ಟ ಆ ಒಂದು ಎಮೋಜಿ ಕಥೆಯೇ ಬೇರೆ!
ಇವರಿಬ್ಬರು 2024 ರಲ್ಲಿ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದ್ರೆ ಬ್ರೇಕಪ್ ಆದ ನಂತರವೂ ಅರ್ಜುನ್ ಕಷ್ಟದಲ್ಲಿದ್ದಾಗ ಮಲೈಕಾ ಹೀಗೆ ರಿಯಾಕ್ಟ್ ಮಾಡಿರೋದು ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. "ಪ್ರೀತಿ ಇಲ್ಲದಿದ್ರೂ ಪರಸ್ಪರ ಗೌರವ ಹಾಗೇ ಇದೆ ಅಲ್ವಾ? ಎಂದು ಜನ ಮಾತಾಡಿಕೊಳ್ತಿದ್ದಾರೆ.
ಯಾವಾಗಲೂ ಟ್ರೋಲ್ ಆಗೋ ಅರ್ಜುನ್ ಪರ ನಿಂತ ಫ್ರೆಂಡ್ಸ್!
ಸಾಮಾನ್ಯವಾಗಿ ಅರ್ಜುನ್ ಕಪೂರ್ ಅವರ ಫೋಟೋ ಕೆಳಗೆ ನೆಟ್ಟಿಗರು ಕಾಲೆಳೆಯೋದೆ ಜಾಸ್ತಿ. ಆದ್ರೆ ತಾಯಿಯ ನೆನಪಿನ ಈ ಪೋಸ್ಟ್ ನೋಡಿ ಬಾಲಿವುಡ್ ಸೆಲೆಬ್ರಿಟಿಗಳಾದ ಭೂಮಿ ಪೆಡ್ನೇಕರ್, ಮನಿಷ್ ಮಲ್ಹೋತ್ರಾ ಸೇರಿದಂತೆ ಅನೇಕರು ಪ್ರೀತಿಯ ಮಳೆ ಸುರಿಸಿದ್ದಾರೆ. 2012 ರಲ್ಲಿ ತಾಯಿ ಮೋನಾ ಅವರನ್ನು ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದರು.
ಒಟ್ಟಿನಲ್ಲಿ, ಅರ್ಜುನ್ ಕಪೂರ್ ಸದ್ಯದ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಮತ್ತೆ 'ಫೀನಿಕ್ಸ್' ಹಕ್ಕಿಯಂತೆ ಎದ್ದು ಬರ್ತೀನಿ ಅಂತ ಚಾಲೆಂಜ್ ಮಾಡಿದ್ದಾರೆ. ಅವರಿಗೆ ಮಲೈಕಾ ಅವರ ಈ ಚಿಕ್ಕ ಬೆಂಬಲ ದೊಡ್ಡ ಬೂಸ್ಟ್ ನೀಡಿದ್ರೂ ಅಚ್ಚರಿಯಿಲ್ಲ,(ಏಜನ್ಸೀಸ್).