- ಡಿ.05ರಂದು ಜಾಗತಿಕವಾಗಿ ಬಾಲಿವುಡ್ನ 'ಧುರಂಧರ್' ಚಿತ್ರ ರಿಲೀಸ್
- 3 ಗಂಟೆ 30 ನಿಮಿಷಗಳ ರನ್ಟೈಮ್ ಹೊಂದಿದ್ದರೂ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್
- 17 ದಿನಕ್ಕೆ 666 ಕೋಟಿ ರೂ. ಕಲೆಕ್ಷನ್ ಕಂಡ ಹಿಂದಿ ಸಿನಿಮಾ
ಮುಂಬೈ: ಬಾಲಿವುಡ್ ಸ್ಟಾರ್ ಹೀರೋ ರಣವೀರ್ ಸಿಂಗ್ ಅಭಿನಯದ ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾದ 'ಧುರಂಧರ್' ಸದ್ಯ ಭಾರತ ಮಾತ್ರವಲ್ಲದೇ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆಯನ್ನು ಕಾಣುತ್ತಿದೆ. ತೆರೆಕಂಡ ಒಂದು ವಾರದೊಳಗೆ 180 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿರುವ ಈ ಚಿತ್ರ ಬಹುಬೇಗನೇ 17 ದಿನಕ್ಕೆ 585 ಕೋಟಿ ರೂ. ಗಳಿಸಿದೆ. ಇದು ದೇಶಿಯ ಕಲೆಕ್ಷನ್ ಆಗಿದ್ದರೆ, ವಿದೇಶಿ ನೆಲದಲ್ಲಿ 114 ಕೋಟಿ ರೂ. ಗಳಿಕೆ ಕಂಡಿದೆ.
ಪ್ರಸ್ತುತ, ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿಯುತ್ತಿರುವ ಧುರಂದರ್, ಜಮ್ಮು ಮತ್ತು ಕಾಶ್ಮೀರದಲ್ಲಿ ಚಿತ್ರಮಂದಿರಗಳಿಗೆ ಹೊಸ ಕಳೆಯನ್ನೇ ನೀಡಿದೆ. ಸಿನಿಮಾ ಕಲಾವಿದರು, ಅವರ ಅಭಿನಯ, ಕಥಾಹಂದರ, ರಕ್ತಸಿಕ್ತ ದೃಶ್ಯಗಳು ಸೇರಿ ಹಲವು ವಿಷಯಗಳು ಚಿತ್ರಪ್ರೇಮಿಗಳನ್ನು ಕೊನೆಯವರೆಗೆ ಸೀಟಿನಲ್ಲಿ ತಮ್ಮ ಕುತೂಹಲವನ್ನು ಕಾಯ್ದಿಟ್ಟುಕೊಳ್ಳುವಂತೆ ಮಾಡುತ್ತದೆ. ಇನ್ನು ಈ ಚಿತ್ರದ ವಿಶೇಷ ಸಾಂಗ್ 'ಶರರತ್' ವೀಕ್ಷಕರ ಗಮನ ಸೆಳೆದಿದ್ದೇ ಆದರೂ ಅದರಲ್ಲಿ ಮೊದಲು ಹೆಜ್ಜೆ ಹಾಕಬೇಕಿದ್ದು ಟಾಲಿವುಡ್ನ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ.
ಡ್ಯಾನ್ಸ್ ಕೋರಿಯೋಗ್ರಫರ್ ಆದ ವಿಜಯ್ ಗಂಗೂಲಿ, ಆರಂಭದಲ್ಲಿ ಈ ಹಾಡಿಗೆ ತಮನ್ನಾ ಅವರನ್ನು ಆಯ್ಕೆ ಮಾಡಲು ಸೂಚಿಸಿದ್ದರಂತೆ. ಆದರೆ, ಸಿನಿಮಾದ ನಿರ್ದೇಶಕರಾದ ಆದಿತ್ಯ ಧರ್ ಮಾತ್ರ ಇದಕ್ಕೆ ಒಪ್ಪಿಗೆ ನೀಡಿಲ್ಲ. ಬದಲಿಗೆ, ತಮನ್ನಾ ಅವರನ್ನು ರಿಜೆಕ್ಟ್ ಮಾಡಿದರಂತೆ. ಅದಕ್ಕೆ ಸ್ಪಷ್ಟ ಕಾರಣವನ್ನೂ ನೀಡಿದ್ದಾಗಿ ಸ್ವತಃ ವಿಜಯ್ ಅವರೇ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ನಾನು ಆರಂಭದಲ್ಲೇ ಈ ಹಾಡಿಗೆ ತಮನ್ನಾ ಅವರ ಹೆಸರನ್ನು ಸೂಚಿಸಿದ್ದೆ. ಆದರೆ, ಆದಿತ್ಯ ಧರ್ ಅದಕ್ಕೆ ಒಪ್ಪಲಿಲ್ಲ. ಈ ಹಾಡಿನಲ್ಲಿ ತಮನ್ನಾ ಕಾಣಿಸಿಕೊಂಡರೆ, ಪ್ರೇಕ್ಷಕರು ಇದನ್ನು ಕೇವಲ ಒಂದು ಸ್ಪೆಷಲ್ ಐಟಂ ಸಾಂಗ್ ಎಂದು ನೋಡುತ್ತಾರೆಯೇ ವಿನಃ ಕಥೆಯ ಭಾಗವಾಗಿ ಅಲ್ಲ. ಬೆಳ್ಳಿ ಪರದೆಯ ಮಿಲ್ಕಿ ಬ್ಯೂಟಿ ಹೆಜ್ಜೆ ಹಾಕಿದರೆ, ನೋಡುಗರ ಗಮನ ಅವರ ಕುಣಿತದ ಮೇಲಿರುತ್ತದೆ. ಇದರಿಂದ ಸಿನಿಪ್ರಿಯರು ಕಥೆಯ ಕನೆಕ್ಷನ್ ಅನ್ನು ಸಾಧ್ಯತೆ ಹೆಚ್ಚಿರಲಿದೆ ಎಂದು ನಿರ್ದೇಶಕರು ಹೇಳಿದರು ಎಂದರು.
ಬಾಕ್ಸ್ ಆಫೀಸ್ ಗಳಿಕೆಯೆಷ್ಟು? (ಒಟ್ಟಾರೆ)
ಪ್ರಸ್ತುತ, ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ ಗಳಿಸಿರುವ 'ಧುರಂದರ್' ಚಿತ್ರವು, ತೆರೆಕಂಡು ಇಂದಿಗೆ 17 ದಿನಗಳು ಕಳೆದಿವೆ. ದೇಶಿಯ ಬಾಕ್ಸ್ಆಫೀಸ್ನಲ್ಲಿ ಇದುವರೆಗೆ 585 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, ವಿದೇಶಗಳಲ್ಲಿ 114 ಕೋಟಿ ರೂ. ಗಳಿಸಿದೆ. ಅಲ್ಲಿಗೆ, ಸಿನಿಮಾದ ಒಟ್ಟಾರೆ ಅಂದರೆ ಜಾಗತಿಕ ಗಳಿಕೆ ಮೊತ್ತ 666.75 ಕೋಟಿ ರೂ. ಆಗಿದೆ. 3 ಗಂಟೆ 30 ನಿಮಿಷಗಳ ಅತಿ ಹೆಚ್ಚಿನ ರನ್ಟೈಮ್ ನಡುವೆಯೂ ಸಿನಿಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳತ್ತ ದೌಡಾಯಿಸುತ್ತಿರುವುದು ಚಿತ್ರತಂಡಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ,(ಏಜೆನ್ಸೀಸ್).