ಬಾಲಿವುಡ್ ಸ್ಟಾರ್ ಹೀರೋಗಳು
- ಹರಿದ ಉಡುಗೆಗಳನ್ನು ಧರಿಸುತ್ತಿರುವ ಬಾಲಿವುಡ್ ಸ್ಟಾರ್ ಹೀರೋಗಳು
- ಹಿಟ್ ಚಿತ್ರವನ್ನು ಕೊಡದಿದ್ದರೂ ಶೋಕಿ ಹಿಂದೆ ಬಿದ್ದಿರುವ ಹಿಂದಿ ಚಿತ್ರೋದ್ಯಮ
ಮುಂಬೈ: ಕಳೆದ ಕೆಲವು ವರ್ಷಗಳಿಂದ ಹರಿದ ಜೀನ್ಸ್, ಶರ್ಟ್ ಧರಿಸುವುದು ಒಂದು ಫ್ಯಾಷನ್ ಆಗಿ ಬದಲಾಗಿದೆ. ಡಿಜಿಟಲ್ ಯುಗದಲ್ಲಿರುವ ಯುವಜನತೆಯಂತು ಇಂಥಾ ಟ್ರೆಂಡ್ಗೆ ಮಾರು ಹೋಗಿದ್ದಾರೆ. ಹುಡುಗಿಯರು ಮತ್ತು ಹುಡುಗರು ಇಬ್ಬರೂ ಸಹ ಯಾವುದೇ ಭೇದವಿಲ್ಲದೆ ಹರಿದ ಜೀನ್ಸ್ ಉಡುಗೆಗಳನ್ನು ಧರಿಸುತ್ತಾರೆ. ಈಗ ಈ ಗಾಳಿ ಬಾಲಿವುಡ್‌ನ ಸ್ಟಾರ್ ನಟರಿಗೂ ಬೀಸಿದೆ.
ಎರಡು ದಿನಗಳ ಹಿಂದಷ್ಟೇ, ಬಾಲಿವುಡ್‌ನ ಹಿರಿಯ ನಟ ಸಲ್ಮಾನ್ ಖಾನ್ ಹರಿದ ಶೂಗಳನ್ನು ಧರಿಸಿ ಒಂದು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಲ್ಮಾನ್ರ ಹರಿದ ಶೂ ಅನ್ನೇ ಜೂಮ್ ಮಾಡಿ ತೋರಿಸಿರುವ ನೆಟ್ಟಿಗರು, ಇದೆಂಥಾ ಶೋಕಿ ಎಂದು ಕಮೆಂಟ್ ಮಾಡಿದ್ದಾರೆ. ಸಲ್ಮಾನ್ ಖಾನ್ ಬ್ಯಾಲೆನ್ಸಿಯಾಗ ಬ್ರ್ಯಾಂಡ್‌ನ ಶೂಗಳನ್ನು ಧರಿಸಿದ್ದರು ಎನ್ನಲಾಗಿದೆ. ಇದರ ಬೆಲೆ ಸುಮಾರು 1.5 ಲಕ್ಷ ರೂ. ಎಂದು ಹೇಳಲಾಗಿದೆ. ಹರಿದ ಶೂಗಳಿಗೆ ಇಷ್ಟೊಂದು ಬೆಲೆ ಏಕೆಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಸ್ಪದವಾಗಿ ಕೇಳಿದ್ದಾರೆ.
ಇನ್ನು ಇತ್ತೀಚೆಗೆ ನಡೆದ 'ಬೂತ್ ಬಾಂಗ್ಲಾ' ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಅಕ್ಷಯ್ ಕುಮಾರ್ ಹರಿದ ಕೋಟ್ ಧರಿಸಿ ಮಾಧ್ಯಮಗಳ ಮುಂದೆ ಪೋಸ್ ನೀಡಿದರು. ಇದು ಹಲವರ ಅಚ್ಚರಿಗೂ ಕಾರಣವಾಯಿತು. ಹರಿದ ಜೀನ್ಸ್, ಶೂ ಓಕೆ, ಇದೇನಿದು ಕೋಟ್ ಎಂದು ಶಾಕ್ ಆದರು. ಕೋಟ್ ಇಲಿಗಳು ತಿಂದಂತೆ ಕಾಣುತ್ತಿತ್ತು ಮತ್ತು ಹರಿದುಹೋಗಿತ್ತು. ಛಿದ್ರಗೊಂಡ ಕೋಟ್ ಅನ್ನು ಓರ್ವ ಫ್ಯಾಶನ್ ಡಿಸೈನರ್ ವಿನ್ಯಾಸಗೊಳಿಸಿದ್ದಾರೆ ಎಂಬ ಸಂಗತಿ ಕೆಲವರಿಗೆ ನಗು ತರಿಸಿದೆ.
ಇದೇ ರೀತಿ, ಬಾಲಿವುಡ್‌ನ ಬಾದ್‌ಶಾ ಶಾರುಖ್ ಕೂಡ ಹರಿದ ಟಿ-ಶರ್ಟ್ ಧರಿಸಿ, ಕೆಕೆಆರ್ ಪಂದ್ಯ ವೀಕ್ಷಿಸಲು ಬಂದಿದ್ದರು. ಇದನ್ನೆಲ್ಲ ನೋಡಿದಾಗ, ಎತ್ತ ಸಾಗುತ್ತಿದೆ ಬಾಲಿವುಡ್? ಹರಿದ ಬಟ್ಟೆಗಳನ್ನು ಧರಿಸುವ ಫ್ಯಾಶನ್ ಹಿಂದೆ ಬಿದ್ದಿರುವ ಹಿಂದಿ ಚಿತ್ರೋದ್ಯಮದ ಸ್ಟಾರ್ ಹೀರೋಗಳು, ಅದೇ ಹಿಟ್ ಸಿನಿಮಾಗಳನ್ನು ಕೊಡುವುದರ ಬಗ್ಗೆ ಏಕಿಷ್ಟು ಗಮನ ಹರಿಸುತ್ತಿಲ್ಲ ಎಂಬುದೇ ಕಾಡುವ ಪ್ರಶ್ನೆ,(ಏಜೆನ್ಸೀಸ್).