ಶ್ರುತಿ ಹಾಸನನ್ನು ಮಮ್ಮಾ ಎಂದ ಪಾಪಾರಾಜಿಗಳು
- ಶ್ರುತಿ ಹಾಸನನ್ನು ಮಮ್ಮಾ ಎಂದ ಪಾಪಾರಾಜಿಗಳು
- ನನ್ಯಾರಿಗೆ ಮಮ್ಮಾ? ಏನು ಬೊಗಳುತ್ತಿದ್ದಿರಿ? ಎಂದ ನಟಿ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ಫುಲ್ ವೈರಲ್
ಮುಂಬೈ: ಬಾಲಿವುಡ್ನಲ್ಲಿ ಇತ್ತೀಚೆಗೆ ಈ ಪಾಪಾರಾಜಿಗಳ ಹಾವಳಿ ಅತಿರೇಕವಾಗಿದೆ ಎಂದರೆ ಸುಳ್ಳಲ್ಲ. ನಟ-ನಟಿಯರು ಏರ್ಪೋರ್ಟ್, ಜಿಮ್, ಮನೆ, ಶೂಟಿಂಗ್ ಎಲ್ಲಿಂದಲೇ ಆಚೆ ಬಂದರೂ ಅವರ ಹಿಂದೆ ಓಡಾಡುತ್ತಾ, ಚಿತ್ರ-ವಿಚಿತ್ರ ಭಂಗಿಯಲ್ಲಿ ಅವರ ಫೋಟೊ, ವಿಡಿಯೋವನ್ನು ಸೆರೆಹಿಡಿಯುವುದೇ ಇವರ ಕೆಲಸವಾಗಿದೆ.
ಇವರ ಈ ಅತಿರೇಕದ ವರ್ತನೆಯಿಂದ ಅನೇಕ ನಟ-ನಟಿಯರು ಬೇಸತ್ತು, ಇವರ ಮೇಲೆ ಕೂಗಾಡಿರುವ ಘಟನೆ ಸಹ ನಡೆದಿದೆ. ಹಾಗೆಯೇ ಇತ್ತೀಚೆಗೆ ಬಹುಭಾಷಾ ನಟಿ ಶ್ರುತಿ ಹಾಸನ್ (Shruti Haasan on Paparazzi) ಈ ಪಾಪಾರಾಜಿಗಳನ್ನು ಕೈ ತೆಗೆದುಕೊಂಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ನಾನು ಯಾರಿಗೆ ಅಮ್ಮ?
ವೈರಲ್ ಆಗುತ್ತಿರುವ ವಿಡಿಯೋನಲ್ಲಿ ನಟಿ ಶ್ರುತಿ ಹಾಸನ್, ಯಾವುದೋ ಮಾರುಕಟ್ಟೆ (Market) ಯಿಂದ ಹೊರಬರುತ್ತಿದ್ದಂತೆ, ಪಾಪಾರಾಜಿಗಳು ನಟಿಯನ್ನು ಸುತ್ತುವರೆದಿದ್ದಾರೆ. ತಮ್ಮ ಕ್ಯಾಮಾರಾಗಳತ್ತ ನೋಡುವಂತೆ ಮಾಡಲು ಕೆಲವರು ಶ್ರುತಿ ಅವರಿಗೆ ಮಮ್ಮಾ.. ಮಮ್ಮಾ.. ಎಂದು ಕರೆದಿದ್ದಾರೆ.
ಈ ಮಾತನ್ನು ಕೇಳಿಸಿಕೊಂಡು ರೇಗಿ ಹೋದ ಶ್ರುತಿ, ಏನದು ಮಮ್ಮಾ, ಮಮ್ಮಾ, ನಾನ್ಯಾರಿಗೆ ಮಮ್ಮಾ? ನಿಮ್ಮ ಮಮ್ಮಾನಾ? ಏನು ಬೊಗಳುತ್ತಿದ್ದಿರಿ? ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದ್ದು, ಜನ ಶ್ರುತಿ ಅವರ ಈ ನಡೆಗೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಶ್ರುತಿ ಬೈದಿರುವುದು ಸರಿಯಾಗಿಯೇ ಇದೆ. ಈ ಪಾಪಾರಾಜಿಗಳನ್ನು ಬಹಳ ಅತಿಯಾಯಿತು ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಇಷ್ಟೇ ಅಲ್ಲ ತೆಗೆದು ನಾಲ್ಕು ಬಿಡಬೇಕಿತ್ತೆಂದು ಇನ್ನೊಬ್ಬರು ಬರೆದಿದ್ದಾರೆ. ಅವನು ಮಮ್ಮಾ ಅಂದೇ ಕರೆದಿದ್ದ, ಅವಾಚ್ಯ ಪದವನ್ನೇನು ಬಳಸಿರಲಿಲ್ಲ, ಕೋಪಗೊಳ್ಳುವ ಅಗತ್ಯವಿರಲಿಲ್ಲ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಕಮೆಂಟ್ನಲ್ಲಿ ತಿಳಿಸಿದ್ದಾರೆ,(ಏಜನ್ಸೀಸ್).