Virat Kohli ಚಿತ್ರ Instagram
- ಇತ್ತೀಚೆಗೆ ಕೊಹ್ಲಿ ಜರ್ಮನ್ ಮಾಡೆಲ್ನ ಚಿತ್ರವೊಂದಕ್ಕೆ ಲೈಕ್ ಮಾಡಿದ್ದು, ಅದು ವೈರಲ್ ಆಗಿತ್ತು
- ಮಾಜಿ ಗೆಳತಿ ಬ್ರೆಜಿಲಿಯನ್ ಮಾಡೆಲ್ ಇಜಾಬೆಲ್ಲೆ ಲೈಟ್ ನೀಡಿರುವ ಪ್ರತಿಕ್ರಿಯೆ ಈಗ ಬೆಂಕಿಗೆ ತುಪ್ಪ ಸುರಿದಂತಾಗಿದೆ
- ಮಹಿಳೆಯರ ಬಗ್ಗೆ ವಿರಾಟ್ ಕೊಹ್ಲಿಯ ಅಭಿರುಚಿ ಸಂಪೂರ್ಣವಾಗಿ ಗಣ್ಯರದ್ದು ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ
Virat Kohli: ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೇವಲ ಮೈದಾನದ ಪ್ರದರ್ಶನದಿಂದ ಮಾತ್ರವಲ್ಲದೆ, ತಮ್ಮ ವೈಯಕ್ತಿಕ ಜೀವನ ಮತ್ತು ಸಾಮಾಜಿಕ ಮಾಧ್ಯಮದ ಚಟುವಟಿಕೆಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕೊಹ್ಲಿ ಜರ್ಮನ್ ಮಾಡೆಲ್ನ ಚಿತ್ರವೊಂದಕ್ಕೆ ಲೈಕ್ ಮಾಡಿದ್ದು, ಅದು ವೈರಲ್ ಆದ ಬೆನ್ನಲ್ಲೇ, ಅವರ ಮಾಜಿ ಗೆಳತಿ ಬ್ರೆಜಿಲಿಯನ್ ಮಾಡೆಲ್ ಇಜಾಬೆಲ್ಲೆ ಲೈಟ್ ನೀಡಿರುವ ಪ್ರತಿಕ್ರಿಯೆ ಈಗ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ವಿರಾಟ್ ಅವರ ಇತ್ತೀಚಿನ ವಿವಾದದ ಬಗ್ಗೆ ಇಜಾಬೆಲ್ಲಾ ಹೇಳಿದ್ದೇನು?
ಇನ್ಸ್ಟಾಗ್ರಾಮ್ನ ಪ್ರಮುಖ ಪುಟವೊಂದು ಇಜಾಬೆಲ್ಲಾ, ಅನುಷ್ಕಾ ಶರ್ಮಾ , ಜರ್ಮನ್ ವ್ಲಾಗರ್ ಲಿಜ್‌ಲಾಜ್ ಮತ್ತು ಭಾರತೀಯ ನಟಿ ಅವ್ನೀತ್ ಕೌರ್ ಅವರ ಚಿತ್ರಗಳನ್ನು ಒಳಗೊಂಡ ಪೋಸ್ಟ್ವೊಂದನ್ನು ಹಂಚಿಕೊಂಡಿದೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಕೊಹ್ಲಿಯವರ 'ಅಭಿರುಚಿ'ಯ ಬಗ್ಗೆ ಕಾಮೆಂಟ್‌ಗಳ ಸುರಿಮಳೆಗರೆಯುತ್ತಿದ್ದಾರೆ.
ಮಹಿಳೆಯರ ಬಗ್ಗೆ ವಿರಾಟ್ ಕೊಹ್ಲಿಯ ಅಭಿರುಚಿ ಸಂಪೂರ್ಣವಾಗಿ ಗಣ್ಯರದ್ದು ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಇಜಾಬೆಲ್ಲೆ ಲೈಟ್‌ನಿಂದ ಅನುಷ್ಕಾ ಶರ್ಮಾವರೆಗೆ... ಗಣ್ಯ ಅಭಿರುಚಿ ಎಂಬುದು ಅವರ ಬ್ರ್ಯಾಂಡ್‌ನ ಒಂದು ಭಾಗ ಮಾತ್ರ ಎಂದು ಆ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ಆ ಪೋಸ್ಟ್ನ್ನು ಗಮನಿಸಿದ ಇಜಾಬೆಲ್ಲೆ ಪ್ರತಿಕ್ರಿಯಿಸಿದ್ದು, ಇದು ನಡೆದು ಸುಮಾರು 12 ವರ್ಷಗಳೇ ಕಳೆದಿವೆ. ಆದರೆ, ಈ ವಿಷಯಗಳು ಇಂದಿಗೂ ಚರ್ಚೆಯಾಗುತ್ತಿವೆ. ಜನರಿಗೆ ಈ ವಿಷಯದಿಂದ ಹೊರಬರಲು ಯಾಕೆ ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಮತ್ತು ಇಜಾಬೆಲ್ಲೆ ಲೈಟ್ ಅವರು 2012 ರಿಂದ 2014 ರವರೆಗೆ ಗಾಢವಾದ ಸಂಬಂಧದಲ್ಲಿದ್ದರು. ಅನುಷ್ಕಾ ಶರ್ಮಾ ಅವರ ಜೀವನಕ್ಕೆ ಬರುವ ಮೊದಲು ಕೊಹ್ಲಿ ಮತ್ತು ಇಜಾಬೆಲ್ಲೆ ಡೇಟಿಂಗ್ ಮಾಡುತ್ತಿದ್ದರು. ಆದರೆ, 2014 ರ ನಂತರ ಇಬ್ಬರೂ ತಮ್ಮ ಸಂಬಂಧಕ್ಕೆ ವಿದಾಯ ಹೇಳಿ ಬೇರೆಯಾದರು. 2017 ರಲ್ಲಿ ಅನುಷ್ಕಾ ಶರ್ಮಾ ಅವರನ್ನು ವಿರಾಟ್ ವಿವಾಹವಾದರು.
2014 ರಲ್ಲಿ ನಡೆದ ಪುರಣಿ ಜೀನ್ಸ್ ಚಿತ್ರದ ಪತ್ರಿಕಾಗೋಷ್ಟಿ ಸಮಯದಲ್ಲಿ ಕೊಹ್ಲಿ ಜೊತೆ ಡೇಟಿಂಗ್ ಮಾಡುತ್ತಿರುವುದರ ಬಗ್ಗೆ ಇಜಾಬೆಲ್ಲಾ ಅವರನ್ನು ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಅವರು ನಾನು ಈಗ ಚಿತ್ರದ ಬಗ್ಗೆ ಮಾತನಾಡಲು ಬಂದಿದ್ದೇನೆ ಹೊರತು ಬೇರೆ ವಿಚಾರದ ಬಗ್ಗೆ ಅಲ್ಲ. ಆದಾಗ್ಯೂ, ಕೊಹ್ಲಿ ಬಗ್ಗೆ ಇನ್ನೇನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಇದೇ ರೀತಿ ನಟಿ ಅವನೀತ್ ಕೌರ್ ಅವರ ಇನ್‌ಸ್ಟಾಗ್ರಾಮ್ ಫೋಟೊವನ್ನು ವಿರಾಟ್ ಲೈಕ್ ಮಾಡಿದ್ದಾರೆ ಎಂಬ ವದಂತಿ ಹಬ್ಬಿತ್ತು ಅದಕ್ಕೆ ಪ್ರತಿಕ್ರಿಯಿಸಿದ ಆಟಗಾರ ಇದೊಂದು ಅಲ್ಗಾರಿದಮ್ ಮಿಸ್ಟೆಕ್ ಬಿಟ್ಟರೆ, ನಾನಾಗಿ ಲೈಕ್ ಮಾಡಿರುವುದಲ್ಲ ಎಂದು ಸ್ಪಷ್ಟಣೆ ನೀಡಿದ್ದರು (ಏಜೆನ್ಸೀಸ್).