- 2024 ಡಿಸೆಂಬರ್ನಲ್ಲಿ ವಿಕ್ರಾಂತ್ ಮಾಸ್ಸೆ ಸಿನಿಮಾ ರಂಗದಿಂದ ತಾತ್ಕಾಲಿಕ ವಿರಾಮ ಘೋಷಣೆ
- ಮಗ ವರ್ಧನ್ ಮತ್ತು ಪತ್ನಿ ಶೀತಲ್ ಠಾಕೂರ್ ಅವರೊಂದಿಗೆ ಸಮಯ ಕಳೆಯುವ ಹಂಬಲ
- ಮಗನ ಬೆಳವಣಿಗೆ ಹಂತದಲ್ಲಿ ಜೊತೆಗಿಲ್ಲದಿರುವ ಬಗ್ಗೆ ಕಾಡುತ್ತಿದ್ದ ಅಪರಾಧ ಪ್ರಜ್ಞೆಯೇ ನಿರ್ಧಾರಕ್ಕೆ ಕಾರಣ
Vikrant Massey: ದಿ ಸಾಬರ್ ಮತಿ ರಿಪೋರ್ಟ್, 12th ಫೇಲ್ ದಿನಿಮಾದ ಮೂಲಕ ಸಿನಿಮಾ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ವಿಜಯ್ ಮಾಸ್ಸೇ ಅವರು ಸದ್ಯ ಬ್ರೇಕ್ ತೆಗೆದುಕೊಂಡಿದ್ದಾರೆ..12th ಫೇಲ್ ಹಿಟ್ ಕಂಡ ನಂತರ ಸಡನ್ ಆಗಿ ಬ್ರೇಕ್ನಂತಹ ನಿರ್ಧಾರ ಕೈಗೊಳ್ಳೋಕೆ ಕಾರಣ ಏನು ಅನ್ನೋದು ಅಭಿಮಾನಿಗಳ ಪ್ರಶ್ನೆ ಇದಕ್ಕೆ ಖುದ್ದಾಗಿ ನಟನೇ ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವಿಡಿಯೋವೊಂದು ಹೊರಬಿದ್ದಿದೆ.
ಪರಿಣಿತಿ ಚೋಪ್ರಾ ಅವರ 'ಮಾಮ್ ಟಾಕ್ಸ್' ಕಾರ್ಯಕ್ರಮದಲ್ಲಿ ತಮ್ಮ ಪತ್ನಿ ಶೀತಲ್ ಠಾಕೂರ್ ಅವರೊಂದಿಗೆ ಭಾಗವಹಿಸಿದ್ದ ವಿಕ್ರಾಂತ್ ಮಾಸ್ಸೆ, ಪಿತೃತ್ವದ ಅನುಭವಗಳನ್ನು ಹಂಚಿಕೊಂಡರು. ಫೆಬ್ರವರಿ 2024ರಲ್ಲಿ ಮಗ ವರ್ಧನ್ ಜನಿಸಿದಾಗ ವಿಕ್ರಾಂತ್ ಸಿನಿಮಾ ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿದ್ದರು. ಇದು ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೇಗೆ ಹೈರಾಣಾಗಿಸಿತ್ತು ಎನ್ನುವುದನ್ನು ಹಂಚಿಕೊಂಡಿದ್ದಾರೆ.
"ಪೋಷಕರಾದಾಗ ನಮಗೆ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಮಗ ಹುಟ್ಟಿದ ನಂತರ ನನ್ನ ಗಮನ ಯಾವಾಗಲೂ ಮನೆಯ ಮೇಲೆಯೇ ಇರುತ್ತಿತ್ತು. ನಾನು ಯಾಕೆ ಕೆಲಸ ಮಾಡುತ್ತಿದ್ದೇನೆ ಎಂಬ ಪ್ರಶ್ನೆ ಪ್ರತಿ ಬಾರಿ ಕಾಡುತ್ತಿತ್ತು. ಆದಷ್ಟು ಬೇಗ ಕೆಲಸ ಮುಗಿಸಿ ಮಗ ಮತ್ತು ಪತ್ನಿಯ ಜೊತೆ ಇರಬೇಕೆಂದು ಅನಿಸುತ್ತಿತ್ತು" ಎಂದು ವಿಕ್ರಾಂತ್ ಮಾತನಾಡಿದ್ದಾರೆ.
ಪಪ್ಪಾ ಅಂದಿದ್ದ
ಮಗ ವರ್ಧನ್ ತನ್ನ ಅಜ್ಜಿಯ ಮನೆಗೆ ಭೇಟಿ ನೀಡಿದ್ದಾಗ ಮೊದಲ ಬಾರಿ 'ಪಪ್ಪಾ' ಎಂದು ಕರೆಯಲು ಯತ್ನಿಸಿದ. ಮಗನ ಆ ಪುಟ್ಟ ಪ್ರಯತ್ನ ನನ್ನ ನಿರ್ಧಾರವನ್ನೇ ಬದಲು ಮಾಡಿಕೊಳ್ಳಬೇಕೆನ್ನಿಸಲು ಶುರುವಾಯಿತು. ಮಗನ ಪ್ರತಿ ಬೆಳವಣಿಗೆಯ ಕ್ಷಣದಲ್ಲಿ ಜೊತೆಗಿರಬೇಕು ಎಂಬ ದೃಢ ನಿರ್ಧಾರ ಮಾಡಲು ಕಾರಣವಾಯಿತು. ಎರಡು ತಿಂಗಳ ನಂತರ ಅವರು ಫೆಬ್ರವರಿಯಲ್ಲೇ ಸೋಷಿಯಲ್ ಮೀಡಿಯಾ ಮೂಲಕ ಬ್ರೇಕ್ ಘೋಷಿಸಿದರು.
ಹೀಗಂತು ಮಾಡ್ಬೇಡಿ
ತಂದೆಯಾದ್ಮೇಲೆ ಹಣ ಸಂಪಾದನೆ ಮಾಡುತ್ತಾ ಕೂತರೆ ಸಾಲದು, ಮಕ್ಕಳ ಜೊತೆ ಸಮಯ ಕಳೆಯುವುದು ಅಷ್ಟೇ ಮುಖ್ಯ. ತಾಯಂದಿರಂತೆ ತಂದೆಯಂದಿರಿಗೂ ಮಗುವನ್ನು ಬಿಟ್ಟು ಹೊರಗೆ ಹೋಗುವಾಗ ಸಂಕಟವಾಗುತ್ತದೆ. ಪುರುಷರು ಕೇವಲ ಕುಟುಂಬವನ್ನು ಸಾಕುವವರು ಎಂಬ ಸಾಮಾಜಿಕ ಹಣೆಪಟ್ಟಿಯನ್ನೇ ನಂಬಿ ಕೂರಬಾರದು, ನಮ್ಮ ಭಾವನೆಗಳನ್ನು ಹೊರಹಾಕಬೇಕು ಎಂದು ಸಲಹೆ ಕೊಟ್ಟರು, (ಏಜೆನ್ಸೀಸ್).