ಹನಿಮೂನ್ ಸಂಭ್ರಮದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ 
ಬಾಲಿವುಡ್

ಹನಿಮೂನ್ ಸಂಭ್ರಮದಲ್ಲಿ ವಿರೋಶ್​ ಜೋಡಿ: ವಿಜಯ್-ರಶ್ಮಿಕಾ ಮಧುರ ಕ್ಷಣದ ಫೋಟೊ ವೈರಲ್​! Vijay-Rashmika in Honeymoon

ಪ್ರಮುಖ ಮುಖ್ಯಾಂಶಗಳು

  • ಹನಿಮೂನ್ ಸಂಭ್ರಮದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ
  • ಥೈಲ್ಯಾಂಡ್‌ನ ಐಷಾರಾಮಿ ವಿಲ್ಲಾದಲ್ಲಿ ಪ್ರಕೃತಿಯ ಮಡಿಲಲ್ಲಿ ವಿರೋಶ್​ ಜೋಡಿ
  • ಒಬ್ಬರ ಕಣ್ಣಲ್ಲಿ ಇನ್ನೊಬ್ಬರು ಕಳೆದೋಗಿರುವ ಫೋಟೊ ವೈರಲ್​!
ಥೈಲ್ಯಾಂಡ್​​: ಕೆಲ ದಿನಗಳ ಹಿಂದೆ ಕಾಲಿವುಡ್​ ನಟ ವಿಜಯ್​ ದೇವರಕೊಂಡ ಮತ್ತು ನ್ಯಾಷನಲ್​ ಕ್ರಶ್​ ಖ್ಯಾತಿಯ ರಷ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸುದ್ದಿ ಎಲ್ಲರಿಗೂ ತಿಳಿದೆ ಇದೆ. ಸದ್ಯ ಈ ಜೋಡಿ ಈಗ ಹನಿಮೂನ್​ (Vijay-Rashmika in Honeymoon) ಆಚರಿಸಲು ಥೈಲ್ಯಾಂಡ್​​ಗೆ ತೆರಳಿದ್ದು, ಅಲ್ಲಿಯ ಫೋಟೊಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಪ್ರಕೃತಿ ಮಡಿಲಲ್ಲಿ ಸ್ಟಾರ್​ ಕಪಲ್ಸ್​!

ಮದುವೆಯ ನಂತರ ವಿರಶ್​ ಜೋಡಿ ಥೈಲ್ಯಾಂಡ್‌ನ ಕೊಹ್ ಸಮುಯಿಯಲ್ಲಿ ತಮ್ಮ ಹನಿಮೂನ್​ ಸಂಭ್ರಮಿಸಲು ತೆರಳಿದ್ದು, ಮಾಹಿತಿ ಪ್ರಕಾರ ಇವರು ಒಂದು ಐಷಾರಾಮಿ ಬಂಗಲೆಯ ಬದಲಿಗೆ ಖಾಸಗಿಯಾಗಿರುವ ಒಂದು ವಿಲ್ಲಾದಲ್ಲಿ ತಮ್ಮ ಮಧುರ ಕ್ಷಣಗಳನ್ನು ಕಳೆಯುತ್ತಿರುವುದಾಗಿ ಸುದ್ದಿಯಿದೆ.
ಈ ವಿಲ್ಲಾವು ಸುತ್ತಲೂ ಕಾಡಿನಿಂದ ಕೂಡಿದ್ದು, ಈ ನವ ವಿವಾಹಿತ ಜೋಡಿಯು ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯುತ್ತಿದ್ದು, ಇವರ ವಿಲ್ಲಾದ ಹತ್ತಿರವೇ ಸಮುದ್ರ ತೀರ ಕೂಡ ಇದೆ ಎಂದು ಹೇಳಲಾಗುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿರುವ ಫೋಟೊನಲ್ಲಿ ವಿಜಯ್​ ಹಾಗೂ ರಶ್ಮಿಕಾ ಇಬ್ಬರು ತಿಳಿ ಹಳದಿ ಬಣ್ಣದ ಡ್ರೆಸ್​ ಧರಿಸಿ ಬಹಳ ಅನೋನ್ಯವಾಗಿ ಕಂಡುಬಂದಿದ್ದು, ಒಬ್ಬರ ಕಣ್ಣಲ್ಲಿ ಒಬ್ಬರನ್ನು ನೋಡಿಕೊಳ್ಳುತ್ತಾ ಕಳೆದು ಹೋಗಿರುವಂತೆ ಭಾಸವಾಗುವಂತೆ ನಿಂತಿದ್ದಾರೆ.

ವಿಜಯ್​ - ರಶ್ಮಿಕಾ ಮದುವೆ ಬಗ್ಗೆ

ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಸಿನಿಮಾಗಳ ನಂತರ ವಿಜಯ್​ - ರಶ್ಮಿಕಾ ಸ್ನೇಹ ಪ್ರೀತಿಯಾಗಿ ಬದಲಾಗಿದೆ ಎಂಬ ವದಂತಿ ಸಿನಿಮಾರಂಗದಲ್ಲಿ ಹರಡುತ್ತಿತ್ತು. ಈ ಎಲ್ಲಾ ವದಂತಿಗಳಿಗೆ ತೀಲಾಂಜಲಿ ಎಂಬಂತೆ ಈ ಜೋಡಿ ಫೆಬ್ರವರಿ 26 ರಂದು ರಾಜಸ್ಥಾನದ ಉದಯ್​ಪುರ್​ನಲ್ಲಿ ಭಾರತೀಯ ಸಂಪ್ರದಾಯದಂತೆ ಮದುವೆಯಾದರು.
ಈ ಮದುವೆಯು ಕೇವಲ ಎರಡು ಕುಟುಂಬಗಳ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರನ್ನು ಮಾತ್ರ ಒಳಗೊಂಡಿದ್ದು, ಇತರೆ ಸ್ನೇಹಿತರು ಹಾಗೂ ಚಿತ್ರರಂಗದವರಿಗಾಗಿ ಮಾರ್ಚ್​ 4 ರಂದು ಹೈದರಾಬಾದ್​ನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು,(ಏಜನ್ಸೀಸ್​).