ಉಸ್ತಾದ್ ಭಗತ್ ಸಿಂಗ್ ಪೋಸ್ಟರ್ 
ಬಾಲಿವುಡ್

‘ಧುರಂಧರ್’ಗೆ ಪವನ್ ಕಲ್ಯಾಣ ಸೆಡ್ಡು : ಇದೇ 19ರಂದು ತೆರೆಗೆ ಬರಲಿದ್ದಾನೆ ‘ಉಸ್ತಾದ್ ಭಗತ್ ಸಿಂಗ್’

ಶಿವಮಲ್ಲಯ್ಯ ಸ್ಥಾವರಮಠ

ಪ್ರಮುಖ ಮುಖ್ಯಾಂಶಗಳು

  • ಟಾಕ್ಸಿಕ್​ ಜಾಗಕ್ಕೆ ಬಂದ ಉಸ್ತಾದ್​ ಭಗತ್ ಸಿಂಗ್
  • ದಕ್ಷಿಣ ಭಾರತ ಆಕ್ರಮಿಸಿಕೊಳ್ಳಲು ಪವನ್ ಕಲ್ಯಾಣ್ ಪ್ರಿ-ಪ್ಲ್ಯಾನ್​
  • ಮೊದಲ ದಿನಾಂಕಕ್ಕಿಂತ ಒಂದು ವಾರ ಮುಂಚೆಯೇ ಬರಲಿದ್ದಾನೆ ಉಸ್ತಾದ್​
ಕನ್ನಡದ ‘ಟಾಕ್ಸಿಕ್’ ಇದೇ 19ರಂದು ರಿಲೀಸ್ ಆಗುತ್ತಿದ್ದರೆ, ಈ ಯುಗಾದಿಗೆ ‘ಟಾಕ್ಸಿಕ್’ ಮತ್ತು ಹಿಂದಿಯ ‘ಧುರಂಧರ್’ ನಡುವೆ ದೊಡ್ಡಮಟ್ಟದ ಸ್ಪರ್ಧೆಯೇ ಏರ್ಪಡುವುದಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ‘ಟಾಕ್ಸಿಕ್’ ರಿಲೀಸ್ ಡೇಟ್ ಮುಂದೂಡಲಾಯಿತು. ಇದು ‘ಧುರಂಧರ್: ದ ರಿವೆಂಜ್’ ಚಿತ್ರಕ್ಕೆ ಹಾದಿ ಸುಲಭ ಮಾಡಿಕೊಟ್ಟಿತು ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಅಚ್ಚರಿ ಎಂಬಂತೆ ‘ಧುರಂಧರ್’ಗೆ ಸೆಡ್ಡು ಹೊಡೆಯಲು ಪವನ್ ಕಲ್ಯಾಣ್ ಅಭಿನಯದ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವು ಇದೇ 19ರಂದು ತೆರೆಗೆ ಬರುತ್ತಿದೆ. ಕೊನೆಯ ಕ್ಷಣದಲ್ಲಿ ಚಿತ್ರದ ರಿಲೀಸ್ ಡೇಟ್ ಮಾರ್ಪಡಿಸಿದ್ದು, ಈ ಮೊದಲು ಘೋಷಿಸಿದ ದಿನಾಂಕಕ್ಕಿಂತ ವಾರ ಮುಂಚೆಯೇ ‘ಉಸ್ತಾದ್’ ಬರುತ್ತಿದ್ದಾನೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ‘ಉಸ್ತಾದ್ ಭಗತ್ ಸಿಂಗ್’ ಅಂತಿಮ ಹಂತದ ಪೋಸ್ಟ್ -ಪ್ರೊಡಕ್ಷನ್ ಕಾರ್ಯಗಳಲ್ಲಿ ತೊಡಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿ, ಮಾ. 26ಕ್ಕೆ ಬರಲು ತಂಡ ಸಿದ್ಧವಾಗಿತ್ತು. ಆದರೆ, ಯಾವಾಗ ‘ಟಾಕ್ಸಿಕ್’ ಚಿತ್ರ ಮುಂದೂಡಲಾಯಿತೋ, ಅದನ್ನು ಸದುಪಯೋಗಿಸಿಕೊಳ್ಳಲು ಮುಂದಾದ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಒಂದು ವಾರ ಹಿಂದಕ್ಕೆ ಹಾಕಿಕೊಂಡಿದೆ. ಇದೀಗ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಮಾ.19ರ ಯುಗಾದಿ ಹಬ್ಬದಂದು ‘ಉಸ್ತಾದ್ ಭಗತ್ ಸಿಂಗ್’ ಚಿತ್ರ ತೆರೆಗೆ ಬರಲಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ‘ಧುರಂಧರ್’ಗೆ ಟಕ್ಕರ್ ಕೊಡಲು ಪವನ್ ಕಲ್ಯಾಣ್ ಸಿದ್ಧರಾಗುತ್ತಿದ್ದಾರೆ. ಹರೀಶ್ ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ ಶ್ರೀಲೀಲಾ, ರಾಶಿ ಖನ್ನಾ ಜೋಡಿಯಾಗಿದ್ದಾರೆ.-ಏಜೆನ್ಸೀಸ್