ಇದು ಕೇವಲ ಒಂದು ನಾರ್ಮಲ್ ಆಕ್ಷನ್ ಸಿನಿಮಾವಲ್ಲ: ಯಶ್
- ಟಾಕ್ಸಿಕ್ ಸಿನಿಮಾದ ಬಗ್ಗೆ ಮಾತನಾಡಿರುವ ರಾಕಿಂಗ್ ಸ್ಟಾರ್
- ಇದು ಕೇವಲ ಒಂದು ನಾರ್ಮಲ್ ಆಕ್ಷನ್ ಸಿನಿಮಾವಲ್ಲ: ಯಶ್
- ಸಿನಿಮಾ ಮುಂದೂಡಿಕೆ ಬಗ್ಗೆ ಮೌನ ಮುರಿದ ರಾಕಿ ಭಾಯ್
ಲಾಸ್ ಎಂಜಲೀಸ್: ಪ್ರತಿ ಸಿನಿಮಾ ತಾರೆಗಳು ತಮ್ಮ ಸಿನಿಮಾ ಬಿಡುಗಡೆಯಾದ ನಂತರ ಚರ್ಚೆಗೆ ಗ್ರಾಸವಾದರೆ ರಾಕಿ ಭಾಯ್, ರಾಕಿಂಗ್ ಸ್ಟಾರ್ ಯಶ್ ತಮ್ಮ ಸಿನಿಮಾ ಬಿಡುಗಡೆಗೆ ಮುನ್ನವೇ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಮಾರ್ಚ್ 19 ರಂದು ಬಿಡುಗಡೆಯಾಗಬೇಕಿದ್ದ ಟಾಕ್ಸಿಕ್ ಸಿನಿಮಾ ಈಗ ಜೂನ್ ತಿಂಗಳಿಗೆ ಮುಂದೂಡಿದ ಬಗ್ಗೆ ಯಶ್ (Yash on Toxic) ಮನ ಬಿಚ್ಚಿ ಮಾತನಾಡಿದ್ದಾರೆ.
ಇದು ನಾರ್ಮಲ್ ಆ್ಯಕ್ಷನ್ ಸಿನಿಮಾವಲ್ಲ!
ಅಮೆರಿಕದ ಲಾಸ್ ಎಂಜಲೀಸ್ನಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟ ಯಶ್, ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ಪ್ಸ್ ಸಿನಿಮಾ ಕೇವಲ ಒಂದು ಆ್ಯಕ್ಷನ್ ಸಿನಿಮಾ ಮಾತ್ರವಲ್ಲ. ಈ ಸಿನಿಮಾದ ಆಳ ಮತ್ತು ಪಾತ್ರಗಳ ವಿಭಿನ್ನತೆಯನ್ನು ನೀವು ಸಿನಿಮಾ ಬಿಡುಗಡೆಯಾದ ನಂತರವೇ ನೋಡಬೇಕೆಂದು ಹೇಳಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ತಮ್ಮ ನಟನೆಯ ಇನ್ನೊಂದು ಸಿನಿಮಾದ ಟೀಸರ್ ರಾಮಾಯಣದ ಬಗ್ಗೆ ಮಾತನಾಡಿರುವ ರಾಕಿ ಭಾಯ್, ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ, ನನಗೆ ಈ ಸಿನಿಮಾದಲ್ಲಿ ಅವಕಾಶ ಅದರಲ್ಲೂ ರಾವಣನ ಪಾತ್ರ ದೊರೆತಿದಕ್ಕೆ ಧನ್ಯನಾಗಿದ್ದೆನೆ ಎಂದು ಹೇಳಿದ್ದಾರೆ.
ಧುರಂಧರ್ಗೆ ಠಕ್ಕರ್ ಕೊಡಲು ಮುಂದಾಗಿದ್ದ ಟಾಕ್ಸಿಕ್!
ಜನವರಿ ಮೊದಲ ವಾರದಲ್ಲಿ ಟಾಕ್ಸಿಕ್ ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಕಾಣಲಿದೆ. ಅಂದರೆ ರಣವೀರ್ ಸಿಂಗ್ ನಟನೆಯ ಹಾಗೂ ಆದಿತ್ಯ ಧರ್ ನಿರ್ದೇಶನದ ಧುರಂಧರ್ 2 ಸಿನಿಮಾಗೆ ಠಕ್ಕರ್ ಕೊಡಲು ಮುಂದಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೇ ಸಮಯದಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಪ್ರಾರಂಭವಾಗಿ, ಸಿನಿಮಾದ ವೀಕ್ಷಕರ ಸಂಖ್ಯೆ ಕಾರಣವಾಗುವ ಹಿನ್ನಲೆಯಲ್ಲಿ ಟಾಕ್ಸಿಕ್ ಸಿನಿಮಾವನ್ನು ಜೂನ್ ತಿಂಗಳಿಗೆ ಮುಂದೂಡಲಾಗಿದೆ.
ಖ್ಯಾತ ನಾಮರೇ ತುಂಬಿರುವ ಸಿನಿಮಾ ಟಾಕ್ಸಿಕ್
ಟಾಕ್ಸಿಕ್ ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ, ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಶಿ, ತರಾ ಸುತಾರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಮಿಂಚಲಿದ್ದು ಈ ಸಿನಿಮಾ ಜೂನ್ 4, 2026 ರಂದು ತೆರೆಕಾಣಲಿದೆ. ಈ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ, (ಏಜನ್ಸೀಸ್).